ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ – 2021ಕ್ಕೆ ಸಿದ್ದತೆಗಳು ಆರಂಭವಾಗಿದೆ. ಕೆಲ ದಿನಗಳ ಹಿಂದೆ ನಗರ ಪ್ರವೇಶ ಮಾಡಿದ್ದ ದಸರಾ ಗಜಪಡೆ ಇಂದು ಬೆಳಗ್ಗೆ ಅರಮನೆಗೆ ಗಜಪಡೆ ಪ್ರವೇಶ ಪಡೆದವು.
ಕ್ಯಾಪ್ಟನ್ ಅಭಿಮನ್ಯು ತಂಡದ ಗಜಪಡೆಗೆ ಅರಣ್ಯ ಇಲಾಖೆ ಆವರಣದಲ್ಲಿ ಬೆಳಗ್ಗೆ 6:45ಕ್ಕೆ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಯತ್ತ ಬೀಳ್ಕೊಡಲಾಯಿತು. ಬಳಿಕ 7:35ಕ್ಕೆ ಅರಣ್ಯ ಭವನದಿಂದ ಅರನೆಯತ್ತ ಕಾಲ್ನಡಿಗೆಯಲ್ಲಿ ಆನೆಗಳು ಹೊರಟವು. ಬೆಳಗ್ಗೆ 8:36 ರಿಂದ 9:11ರ ತುಲಾ ಲಗ್ನದಲ್ಲಿ ಅರಮನೆ ಸೇರಿದವು.
ಇದನ್ನೂ ಓದಿ:ಪುನಶ್ಚೇತನ ಪರ್ವ: ಹಲವು ಸುಧಾರಣ ಕ್ರಮಗಳಿಗೆ ಕೇಂದ್ರ ಸಂಪುಟ ಅಸ್ತು
ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷತ್ ನೇತೃದಲ್ಲಿ ಸಾಂಪ್ರಾಯಿಕ ಪೂಜೆ ಸಲ್ಲಿಸಲಾಯಿತು.
ಸಚಿವ ಎಸ್.ಟಿ. ಸೋಮಶೇಖರ್, ಮೆಯರ್ ಹಾಗೂ ಜನಪ್ರತಿನಿಧಿಗಳಿಂದ ಅನೆಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಮಾಡಿಕೊಳ್ಳಲಾಯೊತು.
56 ವರ್ಷದ ಅಭಿಮನ್ಯು, 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ, 20 ವರ್ಷದ ಲಕ್ಷ್ಮಿ, 38 ವರ್ಷದ ಗೋಪಾಲಸ್ವಾಮಿ, 34 ವರ್ಷದ ಅಶ್ವತ್ಥಾಮ ಆನೆಗಳು ಈ ಬಾರಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲಿದೆ.