ಮೈಸೂರು : ಪಾರಿವಾಳದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಸುಣ್ಣದ ಕೇರಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ. ಬಡಾವಣೆ ನಿವಾಸಿ, ಪಾಲಿಕೆಯ ಸ್ವತ್ಛತಾ ವಾಹನ ಚಾಲಕ ಗೋವಿಂದ ರಾಜು(49) ಮೃತ ವ್ಯಕ್ತಿ. ಕೃತ್ಯ ನಡೆಸಿದ ಅದೇ ಬಡಾ ವಣೆಯ ಮನೋಜ್ ನಾಯಕ್, ಜಯಶಂಕರ್, ವಿನಾಯಕ್, ಪ್ರಮೋದ್ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಸಂಕ್ರಾಂತಿ ಹಬ್ಬದಂದು ಗೋವಿಂದ ರಾಜು ಮನೆಯಲ್ಲಿ ಪಾರಿವಾಳ ಕಳ್ಳತನವಾಗಿತ್ತು. ಈ ಬಗ್ಗೆ ಗೋವಿಂದ ರಾಜು ಅವರ ಪುತ್ರ ಉಲ್ಲಾಸ್ ಅವರು ಎದುರು ಮನೆಯ
ಯುವಕರು ಕದ್ದಿದ್ದಾರೆ ಎಂಬ ಅನುಮಾನದಲ್ಲಿದ್ದರು. ಈ ಬಗ್ಗೆ ಉಲ್ಲಾಸ್ ಸ್ನೇಹಿತ ಪ್ರಮೋದ್ ಎದುರು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಇದರಿಂದ ಕುಪಿತಗೊಂಡ ನಾಲ್ವರು, ಪ್ರಮೋದ್ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಗೋವಿಂದ ರಾಜು ಅವರು ಪ್ರಶ್ನೆ ಮಾಡಿ ಯುವಕರಿಗೆ ಬುದ್ಧಿವಾದ ಹೇಳಿದ್ದರು.
ಗೋವಿಂದರಾಜು ಅವರ ಬುದ್ಧಿವಾದಕ್ಕೆ ಕುಪಿತ ಗೊಂಡ ನಾಲ್ವರು ಮತ್ತೆ ಗೋವಿಂದ ರಾಜು ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಗೋವಿಂದ ರಾಜು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಕುಟುಂದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪೊಲೀಸ್ ಠಾಣೆ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?