Advertisement

ಮೈಸೂರು ಅಸೋಸಿಯೇಶನ್‌ ಸಭಾಗೃಹ:ಚಿತ್ರಕಲಾ ಪ್ರದರ್ಶನ

04:50 PM Jun 30, 2019 | Vishnu Das |

ಮುಂಬಯಿ: ಮೈಸೂರು ಅಸೋಸಿಯೇಶನ್‌ ಮುಂಬಯಿ ವತಿಯಿಂದ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಭಾಗೃಹದಲ್ಲಿ ಕರ್ನಾಟಕ ಮೂಲದ ಮುಂಬಯಿಯ ನಾಮಾಂಕಿತ ಚಿತ್ರ ಕಲಾವಿದರ “ಚಿತ್ರಕಲಾ ಪ್ರದರ್ಶನ’ವು ಜೂ. 29 ರಂದು ಉದ್ಘಾಟನೆಗೊಂಡಿತು.

Advertisement

2 ದಿನಗಳ ಕಾಲ ನಡೆಯಲಿರುವ “ಚಿತ್ರಕಲಾ ಪ್ರದರ್ಶನ’ ವನ್ನು ಶನಿವಾರ ಪೂರ್ವಾಹ್ನ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ನಾಡಿನ ಹೆಸರಾಂತ ಚಿತ್ರಕಲಾವಿದ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಎಸ್‌. ಜಿ. ವಾಸುದೇವ ಉದ್ಘಾಟಿಸಿ, ಮೈಸೂರು ಅಸೋಸಿಯೇಶನ್‌ನ ಮುಖವಾಣಿ ನೇಸರು ತ್ತೈಮಾಸಿಕವನ್ನು ಬಿಡುಗ ಡೆಗೊಳಿಸಿ ಶುಭಹಾರೈಸಿದರು.

ಹಿರಿಯ ನಾಟಕಕಾರ, ಸಂಘಟಕ ಡಾ| ಬಿ. ಆರ್‌. ಮಂಜುನಾಥ್‌ ಅವರ ಪ್ರಧಾನ ಸಹಯೋಜಕತ್ವದಲ್ಲಿ ನಡೆಸಲ್ಪಟ್ಟ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಸಿದ್ಧ ಚಿತ್ರಕಲಾವಿದರಾದ ವಾಸುದೇವ ಕಾಮತ್‌, ದೇವದಾಸ್‌ ಎಸ್‌. ಶೆಟ್ಟಿ, ದಿವಾಕರ ಶೆಟ್ಟಿ, ರೇಖಾ ಹೆಬ್ಟಾರ್‌, ಅನು ಪಾವಂಜೆ, ಪಂಜು ಗಂಗೊಳ್ಳಿ, ಚಿತ್ರಮಿತ್ರ ಮತ್ತು ಜಯ ಎಸ್‌. ಸಾಲ್ಯಾನ್‌ ಮತ್ತಿತರ ಕಲಾವಿದರು ಭಾಗವಹಿಸಿ ತಮ್ಮತಮ್ಮ ಚಿತ್ರಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.

ಪ್ರದರ್ಶನದ ಅಂಗವಾಗಿ ಸಯನ್‌, ದಾದರ್‌ ಮತ್ತು ಮಾಟುಂಗಾ ಆಸುಪಾಸಿನ 9 ರಿಂದ 12 ವರ್ಷದೊಳಗಿನ ಕನ್ನಡ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಿ ಚಿತ್ರಕಲೆಗೆ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಅಸೋಸಿಯೇಶನ್‌ ಮುಂಬಯಿ ಟ್ರಸ್ಟಿ ಕೆ.ಮಂಜುನಾಥಯ್ಯ, ಕನ್ನಡ ವಿಭಾಗ ಮುಂಬಯಿ ವಿವಿಯ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ, ಮೊಗವೀರ ಮಾಸಿಕದ ಸಂಪಾದಕ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್‌.ಸುವರ್ಣ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರಕಲಾ ಸ್ಪರ್ಧಿಗಳಿಗೆ ಪಾರಿತೋಷಕ ಪ್ರದಾನಿಸಿ ಅಭಿನಂದಿಸಿದರು.

ಅನೇಕ ಕಲಾವಿದರು ಹಾಜರಿದ್ದರು. ಪದ್ಮನಾಭ ಶೆಟ್ಟಿ ಸಿದ್ದಕಟ್ಟೆ ಪ್ರಾರ್ಥನೆಗೈದರು. ಮೈಸೂರು ಅಸೋಸಿಯೇಶನ್‌ನ ನಾರಾಯಣ ನವಿಲೇಕರ್‌ ಸ್ವಾಗತಿಸಿದರು. ಕನ್ನಡ ವಿಭಾಗದ ಮುಂಬಯಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶನ್‌ನ ಗೌರವ ಕಾರ್ಯ ದರ್ಶಿ ಡಾ| ಗಣಪತಿ ಶಂಕರಲಿಂಗ್‌ ವಂದಿಸಿದರು.

Advertisement

ಚಿತ್ರ-ವರದಿ : ರೊನಿಡಾ ಮುಂಬಯಿ.

Advertisement

Udayavani is now on Telegram. Click here to join our channel and stay updated with the latest news.

Next