Advertisement
ಮ್ಯುಕೋರ್ಮೈಕೋಸಿಸ್ ಅಂದರೇನು: ನೀವು ತಿಳಿದಿರಬೇಕಾದದ್ದು
Related Articles
Advertisement
-ಮಧುಮೇಹಿ ರೋಗಿಗಳಲ್ಲಿ ಉಂಟಾಗುವುದು ಹೆಚ್ಚು.
-ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ತಡೆಗಟ್ಟಬಹುದಾಗಿದೆ.
– ಕೋವಿಡ್ ಮಾತ್ರ ಅಲ್ಲ; ರೋಗನಿರೋಧಕ ಶಕ್ತಿ ಕುಂದಿರುವುದು ಕೂಡ ನಿರ್ಣಾಯಕ ಅಂಶ.
ಯಾರಿಗೆ ಇದು ತಗಲುವ ಅಪಾಯ ಹೆಚ್ಚು?
ಈಗಾಗಲೇ ಅನಾರೋಗ್ಯ ಹೊಂದಿರುವವರು ಮತ್ತು ರೋಗ ನಿರೋಧಕ ಶಕ್ತಿ ಕುಂದುವಂತಹ ಔಷಧಗಳನ್ನು ಸೇವಿಸುತ್ತಿರುವವರಿಗೆ ಮಾತ್ರ ಬ್ಲ್ಯಾಕ್ ಫಂಗಸ್ ಸೋಂಕು ತೀವ್ರತರಹದ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಕೋವಿಡ್ -19 ಚಿಕಿತ್ಸೆಯ ಭಾಗವಾಗಿ ಸ್ಟಿರಾಯ್ಡ ಔಷಧಗಳನ್ನು ಸ್ವೀಕರಿಸಿದ ರೋಗಿಗಳಿಗೆ ಅಪಾಯ ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆಯಾಗುವ ಟೊಸಿಸಿಜುಮಾಬ್‌ನಂತಹ ಔಷಧಗಳನ್ನು ಪಡೆದವರಲ್ಲೂ ಇದರ ಅಪಾಯ ಹೆಚ್ಚು. ಅನಿಯಂತ್ರಿತ ಮಧುಮೇಹದಷ್ಟು ಅಪಾಯಕಾರಿಯಾದದ್ದು ಇನ್ಯಾವುದೂ ಅಲ್ಲ ಎಂದು ವೈದ್ಯರು ಹೇಳುತ್ತಾರೆ. ಕ್ಯಾನ್ಸರ್ ರೋಗಿಗಳಾಗಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರಿಗೆ ಅಪಾಯ ಹೆಚ್ಚಿರುತ್ತದೆ. ಆಟೊಇಮ್ಯೂನ್ ಅನಾರೋಗ್ಯ ಸ್ಥಿತಿ ಹೊಂದಿರುವವರೂ ಇದರ ಅಪಾಯದಲ್ಲಿರುತ್ತಾರೆ. ಇತರ ಅನಾರೋಗ್ಯಗಳಿಗಾಗಿ ಸ್ಟಿರಾಯ್ಡ ಚಿಕಿತ್ಸೆಯಲ್ಲಿರುವ ರೋಗಿಗಳಿಗೂ ಹೆಚ್ಚು ಅಪಾಯವಿದೆ.
ಮ್ಯುಕೋರ್ಮೈಕೋಸಿಸ್ ತಡೆಯಲು ಕ್ರಮಗಳು
– ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.
– ಕೋವಿಡ್‌ಗೆ ಚಿಕಿತ್ಸೆ ನೀಡುವಾಗ ಸ್ಟಿರಾಯ್ಡಗಳನ್ನು ವಿವೇಚನೆಯಿಂದ, ಮಿತಿಯಲ್ಲಿ ಉಪಯೋಗಿಸಬೇಕು.
– ಆಮ್ಲಜನಕದ ನೆರವು ನೀಡುವಾಗ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರನ್ನು ಉಪಯೋಗಿಸಬೇಕು.
– ಕೋವಿಡ್ ರೋಗಿಯ ಪರಿಸರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಪಾಲಿಸಬೇಕು.
– ಬಾಯಿಯ ಹುಣ್ಣು ಉಂಟಾದರೆ ತತ್‌ಕ್ಷಣ ಚಿಕಿತ್ಸೆ ಒದಗಿಸಬೇಕು.
ಮ್ಯುಕೋರ್ಮೈಕೋಸಿಸ್ ಪ್ರಗತಿ ಹೊಂದುವುದನ್ನು ತಡೆಯುವುದು ಹೇಗೆ?
ಸದ್ಯದ ಸ್ಥಿತಿಯಲ್ಲಿ ಇದನ್ನು ತಡೆಯುವುದಕ್ಕೆ ಯಾವುದೇ ವೈದ್ಯಕೀಯ ಉಪಕ್ರಮ ಪರಿಣಾಮಕಾರಿ ಎಂಬುದು ಸಾಬೀತಾಗಿಲ್ಲ. ಹೀಗಾಗಿ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದೊಂದೇ ಪರಿಣಾಮಕಾರಿಯಾಗಿದೆ. ಬೆಟಾಡಿನ್ ದ್ರಾವಣದಲ್ಲಿ ಗಾರ್ಗಲ್ ಮಾಡುವುದು ಮತ್ತು ಮೂಗನ್ನು ಶುದ್ಧೀಕರಿಸಿಕೊಳ್ಳುವುದು, ಮಧುಮೇಹವನ್ನು ಕಠಿನವಾಗಿ ನಿಯಂತ್ರಿಸಿಕೊಳ್ಳುವುದು, ವೈದ್ಯರು ಶಿಫಾರಸು ಮಾಡಿದ್ದರೆ ಮಾತ್ರ ಸ್ಟಿರಾಯ್ಡ ಉಪಯೋಗಿಸುವುದು ಬ್ಲ್ಯಾಕ್ ಫಂಗಸ್ ಸೋಂಕು ತಡೆಗೆ ಕೆಲವು ಮಾರ್ಗೋಪಾಯಗಳಾಗಿವೆ. ಅರಶಿಣದಲ್ಲಿರುವ ಕರ್ಕಮಿನ್ ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿದೆ.
ಡಾ| ಆನಂದ್ದೀಪ್ ಶುಕ್ಲಾ
ಓರಲ್ ಸರ್ಜರಿ ವಿಭಾಗ
ಎಂಸಿಒಡಿಎಸ್, ಮಾಹೆ, ಮಣಿಪಾಲ