Advertisement
ಅನಂತಕುಮಾರ್ ಅವರು 63ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ನಗರದ ಶಂಕರಪುರದಲ್ಲಿನ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎ-ಚಾಟ್ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್ ಅವರು ತಮ್ಮ ಬಳಗವನ್ನು ಕಟ್ಟಿದ್ದು,ಯುವಕರಲ್ಲಿ ಪ್ರೇರಣಾ ಶಕ್ತಿಯನ್ನು ತುಂಬುತ್ತಿದ್ದರು. ಅವರೊಂದಿಗೆ ಎಬಿವಿಪಿಯಲ್ಲಿ ಕೆಲಸ ಮಾಡಿದ್ದೇನೆ. ತದ ನಂತರ ರಾಜಕೀಯ ಕ್ಷೇತ್ರಕ್ಕೆ ಬರಲು ಅವರೇ ಕಾರಣೀಭೂತರು ಎಂದು ಅವರೊಂದಿಗಿದ್ದ ಸಂಗತಿಗಳನ್ನು ನೆನಪಿಸಿಕೊಂಡರು.
ಮಾಡಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತಿದ್ದರು ಎಂದು ಅನಂತಕುಮಾರ್ ಅವರನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ವಿಶಿಷ್ಟ 63 ದೇವಸ್ಥಾನಗಳ ಮಾಹಿತಿ ಪತ್ರ, 63 ಸಸ್ಯಗಳ ಮಾಹಿತಿ ಪತ್ರ, 6 ಜಿಲ್ಲೆಗಳ ಅಪರೂಪದ ದೇವಾಲಯಗಳ ಕೈಪಿಡಿ ಬಿಡುಗಡೆ, ಅನಂತಪಥ ಮಾಸ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಹಾಗೂ ಟಿ.ಎಸ್.ಗೋಪಾಲ್, ಸಂಧ್ಯಾ, ಕೆಂಗೇರಿ ಚಕ್ರಪಾಣಿ, ರಶ್ಮಿ ಕಿಲೇಗಾ, ಪೂರ್ಣಪ್ರಜ್ಞಾ, ಅಥರ್ವ ಸೇರಿದಂತೆ ಅನೇಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಪಿ.ವಿ. ಕೃಷ್ಣ ಭಟ್, ತೇಜಸ್ವಿನಿ ಅನಂತಕುಮಾರ್, ನ್ಯಾ. ಎನ್.ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.