Advertisement

ಸ್ನೇಹಿತರ ಗಮನ ಸೆಳೆಯಲು 10 ನಿಮಿಷದಲ್ಲಿ 12 ಎನರ್ಜಿ ಡ್ರಿಂಕ್‌ ಗಳನ್ನು ಕುಡಿದ ಭೂಪ! ಮುಂದೆ ಆದದ್ದು..

01:38 PM Nov 19, 2022 | Team Udayavani |

ವಾಷಿಂಗ್ಟನ್:‌  ಎನರ್ಜಿ ಡ್ರಿಂಕ್‌ ಎಂದರೆ ಶಕ್ತಿವರ್ಧಕ ಪಾನೀಯಗಳನ್ನು ನೀವು ಕುಡಿದಿರಬಹುದು. ಹೆಚ್ಚಾಗಿ ಆಟವಾಡುವ ಸಮಯದಲ್ಲಿ ಯುವಜನರು ಇದನ್ನು ಬಳಸುತ್ತಾರೆ. ವ್ಯಕ್ತಿಯೊಬ್ಬ ಎನರ್ಜಿ ಡ್ರಿಂಕ್‌ ಗಳನ್ನು ಕುಡಿದು ಯಾವ ಸ್ಥಿತಿಗೆ ತಲುಪಿದ್ದಾನೆ ನೋಡಿ.

Advertisement

36 ವರ್ಷದ ಯುಕೆಯ ಗೇಮರ್‌ ಒಬ್ಬ (ಜೆಸ್‌ ಎಂದೇ ಖ್ಯಾತಿ) ತನ್ನ ಸಹದ್ಯೋಗಿಗಳ ಗಮನ ಸೆಳೆಯಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್ಸ್‌ ಗಳನ್ನು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯನ್ನು, ಜೆಸ್‌ ನ ಆರೋಗ್ಯ ಸ್ಥಿತಿಯನ್ನು ಚುಬ್ಬೇಮ್ಯೂ (Chubbyemu) ಯೂಟ್ಯೂಬ್‌ ಚಾನೆಲ್‌ ನ್ನು ಹೊಂದಿರುವ ಡಾ. ಹೆಚ್‌ಸು ಅವರು ವಿವರಿಸಿದ್ದಾರೆ.

“ಜೆಸ್‌ ತನ್ನ ಸ್ನೇಹಿತರ ಗಮನ ಸೆಳೆಯಲು 12 ಎನರ್ಜಿ ಡ್ರಿಂಕ್‌ ಗಳನ್ನು 10 ನಿಮಿಷಗಳಲ್ಲಿ ಕುಡಿದಿದ್ದಾನೆ. ಅಷ್ಟು ಡ್ರಿಂಕ್ಸ್‌ ಗಳನ್ನು ಒಮ್ಮೆಗೆ ಕುಡಿದ ಬಳಿಕ ಜೆಸ್‌ ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಆತನ ದೇಹ ಯಾವುದಕ್ಕೂ ಸ್ಪಂದಿಸದ ಹಾಗೆ ಆಗಿದೆ. ಆತ ಅಲ್ಲೇ ಕೂತು ಗೇಮ್‌ ಆಡಲು ಶುರು ಮಾಡಿದ್ದಾನೆ. ವಿಪರೀತ ಕೆಫೆನ್ ನಿಂದ ಆತನ ಹೃದಯ ಬಡಿತ ಹೆಚ್ಚಾಯಿತು. ಇದರೊಂದಿಗೆ ಬೆನ್ನು ನೋವು ಕೂಡ ಶುರುವಾಯಿತು. ಇದೆಲ್ಲಾ ಕಮ್ಮಿ ಆಗುತ್ತದೆ ಎಂದು ಆತ ಮದ್ಯವನ್ನು ಸೇವಿಸಿದ್ದಾನೆ. ಆ ಬಳಿಕ ಅಡುಗೆ ಮನೆಗೆ ಹೋಗಿ ಅಲ್ಲೇ ಎಲ್ಲವನ್ನೂ ಒಮ್ಮೆಗೆ ವಾಂತಿ ಮಾಡಿದರು. ಇದಾದ ಬಳಿಕವೂ ಆತ ವಿಪರೀತ ಸುಸ್ತನ್ನು ಅನುಭವಿಸಿದ” ಎಂದರು.

“ಒಂದು ದಿನದ ಬಳಿಕ ಏನನ್ನೂ ತಿನ್ನದೇ ಕುಡಿಯದೇ ಇದ್ದಾಗ ಅವರು ತಾನಾಗಿಯೇ ಆಸ್ಪತ್ರೆಗೆ ದಾಖಲಾದರು. ವೈದ್ಯರು ಪರೀಕ್ಷಿಸಿದ ಬಳಿಕ ಮೇದೋಜ್ಜೀರಕ ಗ್ರಂಥಿಯ ಉರಿಯೂತ ( acute pancreatitis) ಎನರ್ಜಿ ಡ್ರಿಂಕ್‌ ನಲ್ಲಿನ ಕೆಫೆನ್ ಹಾಗೂ ಅಧಿಕ ಸಕ್ಕರೆ ಅಂಶದಿಂದ ಜೆಎಸ್‌ನ ಮೇದೋಜೀರಕ ಗ್ರಂಥಿಯು ಸ್ವತಃ ಜೀರ್ಣಿಸಿಕೊಳ್ಳಲು ಆರಂಭಿಸಿತು. ಮೇದೋಜೀರಕ ಗ್ರಂಥಿಯೂ ದ್ರವದಿಂದ ಊದಿಕೊಳ್ಳಲು ಆರಂಭವಾಯಿತು. ಇದಾದ ನಂತರ ಪರಿಸ್ಥಿತಿಯೂ ಹದಗೆಡಲು ಆರಂಭವಾಯಿತು. ಜೆಸ್‌ ಅವರ ಕಿಡ್ನಿ ಹಾಗೂ ಶ್ವಾಸಕೋಶಗಳು ಸ್ಥಗಿತಗೊಳ್ಳಲು ಶುರುವಾಯಿತು” ಎಂದಿದ್ದಾರೆ.

“ಆ್ಯಂಟಿ ಬಯೋಟಿಕ್ ನೀಡಿ ನಿರಂತರ ಚಿಕಿತ್ಸೆ ಬಳಿಕ ಜೆಸ್‌ ಚೇತರಿಕೆ ಕಂಡು ಅವರನ್ನು ಮನೆಗೆ ಕಳುಹಿಸಲಾಯಿತು. ನೀವು ಅಪರೂಪಕ್ಕೆ ಎನರ್ಜಿ ಡ್ರಿಂಕ್‌ ಗಳನ್ನು ಸೇವಿಸಿದರೆ ಆರೋಗ್ಯವಾಗಿರುತ್ತೀರಿ. ಆದರೆ ಹೆಚ್ಚಗೆ ಇಂಥ ಎನರ್ಜಿ ಡ್ರಿಂಕ್‌ ಗಳನ್ನು ಕುಡಿದರೆ  ಜೆಸ್‌ ಗೆ ಆದ ಸ್ಥಿತಿಯೂ ನಿಮಗೆ ಆಗಬಹುದೆಂದು” ಡಾ. ಡಾ.ಹೆಚ್‌ಸು ಹೇಳುತ್ತಾರೆ.

Advertisement

ಡಾ. ಡಾ.ಹೆಚ್‌ಸು ಈ ವಿಡಿಯೋ ಆಪ್ಲೋಡ್‌ ಮಾಡಿದ್ದು  ಸೆ.14, 2021 ರಂದು ಸದ್ಯ ಈ ಹಳೆಯ ವಿಡಿಯೋ ಇಂಟರ್‌ ನೆಟ್‌ ಈಗ ಸದ್ದು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next