Advertisement

ಪಕ್ಷ ಸಂಘಟನೆ ನನ್ನ ಕೆಲಸ: ಜೆಡಿಎಸ್‌ ವರಿಷ್ಠ ದೇವೇಗೌಡ

10:57 PM Jun 21, 2019 | Lakshmi GovindaRaj |

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಆಗದ ರೀತಿ ನಾನು ಹೇಳಿಕೆ ಕೊಡಲ್ಲ, ಕಾಂಗ್ರೆಸ್‌ನವರು ಕೊಡಬಾರದು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸೂಚನೆ ನೀಡಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತವರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಂಘಟನೆ ಮಾಡಿದರೆ ಬೇಡ ಎನ್ನಲ್ಲ. ನಾನೂ ನನ್ನ ಪಕ್ಷ ಸಂಘಟನೆ ಮಾಡ್ತೇನೆ. ಜೆಡಿಎಸ್‌ ಶಾಸಕರು ಎಲ್ಲೋ ಹೋಗಲ್ಲ, ಎಲ್ಲರೂ ನಮ್ಮ ಜತೆಯಲ್ಲೇ ಇದ್ದಾರೆ.

ಕಾಂಗ್ರೆಸ್‌ನವರೂ ಸಿದ್ದರಾಮಯ್ಯ ಅವರ ಜತೆಯಲ್ಲೇ ಇದ್ದಾರೆ ಎಂದು ಹೇಳಿದರು. ಕುಮಾರಸ್ವಾಮಿ ಎಲ್ಲರನ್ನೂ ಮೆಚ್ಚಿಸಿ ಕೆಲಸ ಮಾಡೋದು ಕಷ್ಟ. 20-20 ಸರ್ಕಾರದಲ್ಲಿ ಕುಮಾರಸ್ವಾಮಿಗೆ ಒಂದು ಗುಂಪು ಸಹಕಾರ ಕೊಡಲಿಲ್ಲ..

ಕುಮಾರಸ್ವಾಮಿ ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಹಕರಿಸಿಲ್ಲ ಎಂಬುದೂ ನನಗೆ ಗೊತ್ತಿದೆ. ನಾಲ್ಕು ವರ್ಷ ಕೆಲಸ ಮಾಡಲು ದೇವೇಗೌಡರಿಗೆ ಸಾಧ್ಯವಿಲ್ಲ ಎಂದು ಭಾವಿಸಬೇಡಿ. ಇನ್ನೂ ನಾಲ್ಕು ವರ್ಷ ನಾನು ಮನೆಯಲ್ಲಿ ಕುಳಿತುಕೊಳ್ಳಲ್ಲ. ಪಕ್ಷ ಕಟ್ಟುತ್ತೇನೆ. ನನ್ನ ಪಕ್ಷವನ್ನು ನಾನು ಸಂಘಟನೆ ಮಾಡಬೇಕು ಎಂದು ತಿಳಿಸಿದರು.

ಕರುಣಾನಿಧಿ ಕುಟುಂಬದಲ್ಲಿ ಏಳು ಜನ ಗೆದ್ದಿದ್ದರು. ಮೂರು ಚುನಾವಣೆ ಕರುಣಾನಿಧಿಯವರು ವೀಲ್‌ ಚೇರ್‌ನಲ್ಲಿ ಮಾಡಿದ್ದರು. ಆದ್ರೆ ನಮ್ಮ ಕುಟುಂಬ ಇಬ್ಬರು ಮೊಮ್ಮಕ್ಕಳು ನಿಂತಿದ್ದಕ್ಕೆ ಸಾಕಷ್ಟು ಆರೋಪಗಳು ಕೇಳಿಬಂದವು ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಜೆಡಿಎಸ್‌ನಲ್ಲಿದ್ದ ಕೆಲವು ಮುಸ್ಲಿಂ ಮುಖಂಡರು ಪಕ್ಷ ಬಿಟ್ಟು ಹೋದರು. ಆದರೆ, ಫಾರೂಕ್‌ ಮಾತ್ರ ನನ್ನನ್ನು ಮಂತ್ರಿ ಮಾಡಿ ಅಥವಾ ಬಿಡಿ ನಾನು ಮಾತ್ರ ಪಕ್ಷ ಬಿಟ್ಟ ಹೊಗಲ್ಲ ಎಂದು ಹೇಳಿದ್ದಾರೆ ಎಂದರು.

ನಮ್ಮ ಶಾಸಕರನ್ನು ಸೆಳೆಯುವ ಕೆಲಸ ನಿರಂತರ ಮಾಡುತ್ತಿದ್ದಾರೆ. . 104 ಸ್ಥಾನ ಬಂದೋರು ಇಂತಹ ಪ್ರಯತ್ನ ಮಾಡ್ತಿದಾರೆ. ಬಿಜೆಪಿಯವರಿಗೂ ಸರ್ಕಾರ ರಚಿಸುವ ಛಲ ಇರಬಹುದ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಸಾಧನೆ ಕುಮಾರಸ್ವಾಮಿಯದಲ್ಲ. ವರ್ಷದ ಸಾಧನೆ ಪುಸ್ತಕ ಬಿಡುಗಡೆ ಮಾಡಿದರು. ಆದರೆ, ಆ ವೇಳೆ ಎಷ್ಟು ಮಂತ್ರಿಗಳು ಹಾಜರಿದ್ದರು? ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೆನೆ. ಮುಖ್ಯ ಕಾರ್ಯದರ್ಶಿ ಜತೆ ಮೂರ್ನಾಲ್ಕು ಮಂತ್ರಿಗಳಿದ್ದರು. ಮೈತ್ರಿ ಸರ್ಕಾರ ಅಂದರೆ ಕುಮಾರಸ್ವಾಮಿಯದು ಮಾತ್ರವಲ್ಲ. ಈ ಬಗ್ಗೆ ಯಾರ್ಯಾರು ಏನೇನು ವ್ಯಾಖ್ಯಾನ ಮಾಡ್ತಾರೋ ಗೊತ್ತಿಲ್ಲ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next