Advertisement

ನನ್ನ ಮಗಳು ಸಿಂಹ ಇದ್ದಂತೆ

12:32 PM Sep 16, 2020 | Suhan S |

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟಿ ರಾಗಿಣಿ ಭೇಟಿಯಾಗಲು ಆಗಮಿಸಿದ ಆಕೆಯ ಪೋಷಕರು ನಿರಾಸೆಯಿಂದ ವಾಪಸ್‌ ತೆರಳಿದ್ದಾರೆ.ಬುಧವಾರ ಮಧ್ಯಾಹ್ನ ಪೋಷಕರು ತಮ್ಮ ಪರ ವಕೀಲರ ಜತೆ ಆಗಮಿಸಿ ಪುತ್ರಿಯ ಭೇಟಿಗೆ ಅವಕಾಶ ನೀಡುವಂತೆ ಕೋರಿದರು.ಆದರೆ, ಕೋವಿಡ್  ಹಿನ್ನೆಲೆಯಲ್ಲಿ ಯಾವ ಖೈದಿಗಳ ಪೋಷಕರು, ಸಂಬಂಧಿಕರಿಗೆ ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ಸೂಚಿಸಿದರು.

Advertisement

ಹೀಗಾಗಿ ನಿರಾಸೆಯಲ್ಲಿಯೇ ಮನೆಗೆ ಹೊರಟ ಪೋಷಕರು ಪುತ್ರಿಯ ಸ್ಥಿತಿಗೆ ಕಾರಣವಾದವರ ಬಗ್ಗೆ ಆಕ್ರೋಶಗೊಂಡರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಾಯಿ ರೋಹಿಣಿ, “ಆಕೆ ಹೆಣ್ಣು ಸಿಂಹ- ಇದ್ದಂತೆ. ನಾವು ಯಾವು ದಕ್ಕೂ ಹೆದರುವುದಿಲ್ಲ. ನನ್ನ ಮಗಳು ಹತ್ತು ವರ್ಷಗಳಿಂದ ಸ್ಯಾಂಡಲ್‌ವುಡ್‌ನ‌ಲ್ಲಿದ್ದಾಳೆ. ಮಾಧ್ಯಮಗಳಲ್ಲಿ ತಪ್ಪುಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆಕೆ ಆರೋಪ ಮುಕ್ತಳಾಗಿ ಬರುತ್ತಾಳೆ. ಆಗ ನಿಮ್ಮ ಮಾಧ್ಯಮಗಳಲ್ಲಿಯೇ ಉತ್ತರ ನೀಡಲಿದ್ದಾಳೆ. “ನಮ್ಮ ಬಳಿ ಇರುವುದು ಒಂದೇ ಫ್ಲ್ಯಾಟ್‌.ಮಾಧ್ಯಮಗಳಲ್ಲಿ3 ಫ್ಲ್ಯಾಟ್‌ಗಳಿವೆಎಂದು ಬಿಂಬಿಸಲಾಗುತ್ತಿದೆ.  ಈಗಾಗಲೇ ಎಲ್ಲ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದರು.

ರಾಗಿಣಿಗೆ ಕ್ವಾರಂಟೈನ್‌-ಜೈಲಿನಆಸ್ಪತ್ರೆಯಲ್ಲಿ ಚಿಕಿತ್ಸೆ: ನಟಿ ರಾಗಿಣಿಗೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ವಿಚಾರಣಾಧೀನ ಖೈದಿ ಆಗಿರುವುದರಿಂದ ಜೈಲಿನ ಕ್ವಾರಂಟೈನ್‌ ಕೇಂದ್ರದಲ್ಲಿದ್ದಾರೆ. ಘಟನೆಯಿಂದ ಮಾನಸಿಕವಾಗಿ ನೊಂದಿರುವ ರಾಗಿಣಿಗೆ ಜೈಲಿನ ವೈದ್ಯಾಧಿಕಾರಿಗಳು, ಸುಸ್ತಾಗಿದ್ದಿರಾ. ಸರಿಯಾದ ಸಮಯಕ್ಕೆ ತಿಂಡಿ-ಊಟ ಮಾಡಬೇಕು ಎಂದು ಸೂಚಿಸಿ ದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿದೆ.

ವಿದೇಶಗಳಲ್ಲಿವಿ ರೇನ್‌ ಆಸ್ತಿ :  ಪ್ರಕರಣದ ಪ್ರಮುಖ ಆರೋಪಿ ದೆಹಲಿ ಮೂಲದ ವಿರೇನ್‌ ಖನ್ನಾ, ದೆಹಲಿ, ಮುಂಬೈ, ಬೆಂಗಳೂರು ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿಯೂ ಕೋಟ್ಯಂತರ ರೂ. ಆಸ್ತಿ-ಪಾಸ್ತಿ ಹೊಂದಿದ್ದಾನೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಮೂರು ಫ್ಲ್ಯಾಟ್‌ಗಳು, ಮಂಬೈನಲ್ಲಿ ಫಾರ್ಮ್ ಹೌಸ್‌, ಅಮೆರಿಕಾ ಸೇರಿ ಕೆಲ ವಿದೇಶಗಳಲ್ಲಿಕೋಟ್ಯಂತರರೂ. ಆಸ್ತಿ-ಪಾಸ್ತಿ ಹೊಂದಿದ್ದಾನೆ. ಮೂಲಗಳ ಪ್ರಕಾ ರ10ಕ್ಕೂ ಅಧಿಕ ದೇಶಗಳಲ್ಲಿ ಆಸ್ತಿ ಹೊಂದಿದ್ದು, ವಾರ್ಷಿಕ ಬರೋಬರಿ ಎರಡುಕೋಟಿಗೂ ಅಧಿಕ ತೆರಿಗೆ ಪಾವತಿಸುತ್ತಾನೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next