Advertisement

ಚೌಕಿದಾರರದ್ದೇ ಹವಾ! ಪ್ರಧಾನಿ ಮೋದಿ ಕರೆಗೆ ದೇಶದೆಲ್ಲೆಡೆ ಸ್ಪಂದನೆ

12:30 AM Mar 18, 2019 | |

ನವದೆಹಲಿ: ಪ್ರಧಾನಿ ಮೋದಿ ಅವರ “ಮೈ ಭಿ ಚೌಕಿದಾರ್‌’ ಕರೆ ದೇಶಾದ್ಯಂತ ಹವಾ ಎಬ್ಬಿಸಿದೆ. ಶನಿವಾರವಷ್ಟೇ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ, ಎಲ್ಲರೂ “ನಾನೂ ಚೌಕಿದಾರ’ ಎಂದು ಘೋಷಿಸುವಂತೆ ಕರೆ ನೀಡಿದ್ದರು. ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಈ ಲೋಕಸಭೆ ಚುನಾವಣೆಗೆ “ಚೌಕಿದಾರ್‌’ ಟ್ಯಾಗ್‌ ಅನ್ನು ಬಳಸಿಕೊಂಡು ಮತ ಬೇಟೆಗೆ ಬಿಜೆಪಿ ಮುಂದಾಗಿದೆ.

Advertisement

ಭಾನುವಾರ ಪ್ರಧಾನಿ ತಮ್ಮ ಟ್ವಿಟರ್‌ ಖಾತೆಯ ಹೆಸರನ್ನು “ಚೌಕಿದಾರ್‌ ನರೇಂದ್ರ ಮೋದಿ’ ಎಂದು ಬದಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಬಿಜೆಪಿಯ ಉಳಿದ ನಾಯಕರೂ ಅವರನ್ನೇ ಅನುಸರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೂ ಟ್ವಿಟರ್‌ ಖಾತೆಯ ಪ್ರೊಫೈಲ್‌ ಅನ್ನು “ಚೌಕಿದಾರ್‌ ಅಮಿತ್‌ ಶಾ’ ಎಂದು ಬದಲಾಯಿಸಿದ್ದಾರೆ. ನಂತರದ ಕೆಲವೇ ಕ್ಷಣಗಳಲ್ಲಿ ದೇಶಾದ್ಯಂತ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಶಾಸಕರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯ ಮಂತ್ರಿಗಳು ಸೇರಿದಂತೆ ಅನೇಕರು “ಚೌಕಿದಾರ’ರಾಗಿ ಬದಲಾಗಿದ್ದಾರೆ.

ರಾಜ್ಯದಲ್ಲೂ ಅಲೆ: ಕರ್ನಾಟಕದಲ್ಲೂ ಚೌಕಿದಾರರ ಅಲೆ ಎದ್ದಿದ್ದು, ಕೆ.ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಪ್ರಹ್ಲಾದ್‌ ಜೋಷಿ, ಸಿ.ಟಿ. ರವಿ, ಪ್ರತಾಪ್‌ ಸಿಂಹ, ಸುರೇಶ್‌ ಕುಮಾರ್‌, ನಳಿನ್‌ ಕುಮಾರ್‌ ಕಟೀಲು, ಸದಾನಂದ ಗೌಡ ಸೇರಿದಂತೆ ಅನೇಕರು ತಮ್ಮ ಹೆಸರಿನ ಮೊದಲು “ಚೌಕಿದಾರ’ ಎಂಬ ಪದ ಸೇರಿಸಿದ್ದಾರೆ.

ಇದಲ್ಲದೆ, ಟ್ವಿಟರ್‌ನಲ್ಲಿಯೂ “ಚೌಕಿದಾರ್‌ ಫಿರ್‌ ಸೆ’ (ಮಗದೊಮ್ಮೆ ಚೌಕಿದಾರ), “ಚೌಕಿದಾರ್‌’, “ಚೌಕಿ ದಾರ್‌
ನರೇಂದ್ರ ಮೋದಿ’ ಎಂಬಿತ್ಯಾದಿ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿ ವೆ. ಇದಕ್ಕೆ ಪ್ರತಿಯಾಗಿ “ಏಕ್‌ ಹೀ ಚೌಕಿ ದಾರ್‌
ಚೋರ್‌ ಹೇ'(ಒಬ್ಬನೇ ಚೌಕಿದಾರ ಕಳ್ಳ ), “ಮೋದಿ ವೇರ್‌ಈಸ್‌ ಅವರ್‌ ಮನಿ'(ಮೋದಿ, ನಮ್ಮ ಹಣವೆಲ್ಲಿ?) ಎಂಬ
ಹ್ಯಾಷ್‌ಟ್ಯಾಗ್‌ಗಳೂ ಟ್ರೆಂಡ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next