ನವದೆಹಲಿ: ಸೋಮವಾರ ರಾಜಸ್ಥಾನಕ್ಕೆ ಬಂದಾಗ ನಾನು ನನ್ನ 90 ಸೆಕೆಂಡ್ ಭಾಷಣದಲ್ಲಿ ಕೆಲವು ಸತ್ಯವನ್ನು ದೇಶದ ಜನರ ಮುಂದೆ ಮಂಡಿಸಿದ್ದೆ. ಇದು ಇಡೀ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
“ಕಾಂಗ್ರೆಸ್ ಪಕ್ಷ ನಿಮ್ಮ ಆಸ್ತಿಯನ್ನು ಕಿತ್ತುಕೊಂಡು ವಿಶೇಷ ಜನರಿಗೆ (ಮುಸ್ಲಿಂ) ಹಂಚಲು ಸಂಚು ರೂಪಿಸಿದೆ” ಎಂಬ ಸತ್ಯವನ್ನು ಜನರ ಮುಂದಿಟ್ಟಿದ್ದೆ. ಕಾಂಗ್ರೆಸ್ ಮಹಿಳೆಯರ ಮಂಗಲಸೂತ್ರವನ್ನು ಕಸಿಯಲು ಬಯಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ನಡುವೆಯೇ ಇದೀಗ ನಿಮ್ಮ ಆಸ್ತಿಯನ್ನು ಕಸಿದು ವಿಶೇಷ (ಮುಸ್ಲಿಂ) ಜನರಿಗೆ ಹಂಚಲು ಬಯಸುತ್ತಿದೆ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ (ಏ.23) ಪ್ರಧಾನಿ ಮೋದಿ ರಾಜಸ್ಥಾನದ ಟೋಂಕ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ನನ್ನ 90 ಸೆಕೆಂಡ್ ಗಳ ಭಾಷಣ ಇಡೀ ಕಾಂಗ್ರೆಸ್ ಹಾಗೂ ಮೈತ್ರಿಕೂಟಕ್ಕೆ ದಿಗಿಲು ಹುಟ್ಟಿಸಿದೆ ಎಂದು ತಿರುಗೇಟು ನೀಡಿದರು.
ನಾನು ಕಾಂಗ್ರೆಸ್ ನ ವೋಟ್ ಬ್ಯಾಂಕ್ ಮತ್ತು ತುಷ್ಠೀಕರಣ ರಾಜಕೀಯವನ್ನು ಬಯಲಿಗೆಳೆದಿದ್ದೇನೆ. ಆದರೆ ಕಾಂಗ್ರೆಸ್ ಯಾಕೆ ಈ ಸತ್ಯಕ್ಕೆ ಹೆದರುತ್ತಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
2014ರಲ್ಲಿ ನೀವು ನನಗೆ ದೇಶ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಂತರ ಯಾರೊಬ್ಬರೂ ಊಹಿಸಲಾರದ ಸ್ಥಿತಿಯಲ್ಲಿ ನಾವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಆದರೆ 2014ರ ನಂತರವೂ ಕಾಂಗ್ರೆಸ್ ಸರ್ಕಾರ ದೆಹಲಿ ಗದ್ದುಗೆಯಲ್ಲಿ ಇರುತ್ತಿದ್ದರೆ, ಇಂದಿಗೂ ಜಮ್ಮು-ಕಾಶ್ಮೀರದಲ್ಲಿ ನಮ್ಮ ಸೇನಾ ಯೋಧರ ಮೇಲೆ ಕಲ್ಲು ತೂರಾಟ ನಡೆಯುತ್ತಿತ್ತು, ನಮ್ಮ ಶತ್ರುಗಳು ಗಡಿಯೊಳಗೆ ನುಸುಳಿ ಬರುತ್ತಿದ್ದರು. ಕಾಂಗ್ರೆಸ್ ಇದ್ದಿದ್ದರೆ ಒನ್ ರಾಂಕ್, ಒನ್ ಪೆನ್ಶನ್ ಜಾರಿಯಾಗುತ್ತಿತ್ತಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಾ ಕಾಲ ಒಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಲೇ ಬಂದಿರುವುದಾಗಿ ಪ್ರಧಾನಿ ಮೋದಿ ಹೇಳಿದರು. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗಕ್ಕೆ ಮೀಸಲಾತಿ ನೀಡುವುದು ಮೋದಿಯ ಗ್ಯಾರಂಟಿಯಾಗಿದೆ ಎಂದರು.