ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನದ ಅರ್ಚಕ ಹಾಗೂ ನೌಕರರಿಗೆ 5 ಲಕ್ಷ ರೂ. ಮೌಲ್ಯದ ಜೀವ ವಿಮೆ ನೀಡಬೇಕು ಎನ್ನುವ ಆಶಯವಿದೆ ಎಂದು ಮುಜರಾಯಿ ಮತ್ತು ಸಾರಿಗೆ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಶ್ರೀ ರಾಮೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಧಾರ್ಮಿಕ ಇಲಾಖೆಯ ನೌಕರರ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೃತ ಅರ್ಚಕರ ಕುಟುಂಬಕ್ಕೆ ಮರಣ ಉಪಾದಾನ ವಿರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೌಕರರ, ಅರ್ಚಕರ ಅಭಿವೃದ್ಧಿಗಾಗಿ ಶ್ರಮಿಸು ವುದೇ ನಮ್ಮ ಮೊದಲ ಗುರಿ. ಈ ಹಿನ್ನೆಲೆಯಲ್ಲಿ ಜೀವವಿಮೆ ಯೋಜನೆ ಜಾರಿಗೆ ತರಬೇಕು ಎನ್ನುವುದು ನಮ್ಮ ಆಶಯ. ಇದರಿಂದಾಗಿ ಅರ್ಚಕ ಸಮುದಾಯಕ್ಕೆ ದೊಡ್ಡ ಆರ್ಥಿಕ ಭದ್ರತೆ ಸಿಕ್ಕಂತಾಗುತ್ತದೆ. ಈ ಬಗ್ಗೆ ಸರ್ಕಾರದ ವಲಯದಲ್ಲಿ ಚರ್ಚೆಗಳಾಗಿದ್ದು, ರಾಜ್ಯಪಾಲರ ಒಪ್ಪಿಗೆಯನ್ನು ಎದುರು ನೋಡುತ್ತಿದ್ದೇವೆ ಎಂದರು.
ಇಲಾಖೆಯ ಅನುದಾನ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವ ಆಶಯದಲ್ಲಿ ಈ ವರ್ಷ 163 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಮಂದಿನ ವರ್ಷ ಈ ಯೋಜನೆಗೆ ಹೆಚ್ಚಿನ ಪ್ರಚಾರ ನೀಡಿ, 2-3 ಸಾವಿರ ವಿದ್ಯಾರ್ಥಿಗಳಿಗೆ ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿರುವ ಸಿ ಗ್ರೇಡ್ ಟೆಂಪಲ್ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಬೇಕು. ಪ್ರಸ್ತುತ 1271ಕ್ಕೂ ಅಧಿಕ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ಅರ್ಹ ದೇವಸ್ಥಾನದ ಅಭಿವೃದ್ಧಿಯಿಂದ ಜನರ ಭೇಟಿಯೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟವೂ ಸೇರಿದಂತೆ ರಾಜ್ಯದ 4 ಪ್ರಮುಖ ದೇವಸ್ಥಾನಗಳಿಗೆ ಪ್ರಾಧಿಕಾರ ರಚಿಸಲಾಗಿದೆ ಎಂದು ತಿಳಿಸಿದರು.
ಇನ್ನೂ ತಸ್ತೀಕ್ ವರ್ಷಾಸನವು ನೇರ ಬ್ಯಾಂಕ್ ಖಾತೆಗಳಿಗೆ ಜಮಾ ಅಗುವಂತೆ ಮಾಡಿದ್ದರಿಂದ ಹಲ ವಾರು ಅರ್ಚಕರು ವರ್ಷಾಶನಕ್ಕಾಗಿ ಇಲಾಖೆಯಿಂದ ಇಲಾಖೆಗೆ ಅಲೆಯು ವುದು ತಪ್ಪಿದೆ. ಜತೆಗೆ ಮನೆಯ ಒಬ್ಬ ಸದಸ್ಯರೊಂದಿಗೆ ಕಾಶಿ-ಗಯಾ ದರ್ಶನ ಯೋಜನೆಯೂ ಸಂಪೂರ್ಣ ಯಶಸ್ಸು ಕಂಡಿದೆ ಎಂದು ಶ್ಲಾ ಸಿದರು. ಇನ್ನುಳಿದ ಅರ್ಚಕರ ಬೇಡಿಕೆಗಳ ಬಗ್ಗೆ ಹಂತ ಹಂತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.