Advertisement

3 ವರ್ಷಗಳಿಂದ ಸಣ್ಣ ಕೋಣೆಯಲ್ಲಿದೆ ಮುತ್ತೂರು ಗ್ರಾ.ಪಂ. ಕಾರ್ಯಾಲಯ

10:19 AM Oct 27, 2018 | Team Udayavani |

ಎಡಪದವು: ಕುಪ್ಪೆಪದವಿನ ಕಡಂಜೆ ತಿರುವು ರಸ್ತೆಯಲ್ಲಿ ಮುತ್ತೂರು ಗ್ರಾಮ ಪಂಚಾಯತ್‌ನ ಹೊಸ ಕಟ್ಟಡ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದರ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಗ್ರಾ.ಪಂ. ಕಾರ್ಯಾಲಯ ಚರ್ಚ್‌ ಸಮೀಪದ ಸಣ್ಣ ಕೋಣೆಯೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುವಂತಾಗಿದೆ. ಪ್ರಸ್ತುತ ಇರುವ ಕಾರ್ಯಾಲಯದೊಳಗೆ ಅಬ್ಬಬ್ಟಾ ಎಂದರೆ ಐದು ಮಂದಿಗೂ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ ಸಹಿತ ಪಂಚಾಯತ್‌ ನಲ್ಲಿ 20ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಗ್ರಾಮ ಸಭೆ, ಸಾಮಾನ್ಯ ಸಭೆ, ಇತರ ಸಭೆಗಳನ್ನು ನಡೆಸಲೂ ಇಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ಬೇರೆ ಕಟ್ಟಡವನ್ನು ಬಾಡಿಗೆ ಪಡೆದುಕೊಳ್ಳಬೇಕಾಗುತ್ತಿದೆ. ಇದರಿಂದ ಸರಕಾರಿ ಸೌಲಭ್ಯವನ್ನು ಪಡೆಯಲು ಗ್ರಾಮಸ್ಥರು ಪರದಾಡುವಂತಾಗಿದೆ. ಪಂಚಾಯತ್‌ ವತಿಯಿಂದ ಹೆಚ್ಚಿನ ಸಭೆಗಳನ್ನು ಬೊಳಿಯದ ಸಮುದಾಯ ಭವನದಲ್ಲಿ ಮಾಡಲಾಗುತ್ತಿದ್ದು, ಇದರಿಂದ ಪಂಚಾಯತ್‌ ಸಿಬಂದಿ, ಗ್ರಾಮಸ್ಥರಿಗೂ ಕಷ್ಟವಾಗುತ್ತಿದೆ.

ಪಂಚಾಯತ್‌ ಕಟ್ಟಡಕ್ಕೆ ಸುಮಾರು 50 ಸೆಂಟ್ಸ್‌ ಜಾಗ ಬೇಕಾಗುತ್ತದೆ. ಇದಕ್ಕೆ ಕುಪ್ಪೆಪದವಿನಿಂದ ಮುತ್ತೂರು ಹೋಗುವ ಕಡಂಜೆ ರಸ್ತೆ ತಿರುವು ಸಮೀಪ ಡಿ.ಸಿ. ಮನ್ನಾ ಜಾಗವನ್ನು ಗುರುತಿಸಿ ಸುಮಾರು 32 ಸೆಂಟ್ಸ್‌ ಜಾಗದಲ್ಲಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ.

 2018ರ ಮೇ ತಿಂಗ ಳಲ್ಲಿ ಈ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. 25 ಸೆಂಟ್ಸ್‌ ಜಾಗದಲ್ಲಿ ಪಂಚಾಯತ್‌ ಕಟ್ಟಡ ಉಳಿದ 7 ಸೆಂಟ್ಸ್‌ ಜಾಗದಲ್ಲಿ ವಿ.ಎ. ಕಾರ್ಯಾಲಯವೂ ನಿರ್ಮಾಣಗೊಳ್ಳಲಿದೆ. ಪಂಚಾಯತ್‌ ಸಭಾಭವನ ಸೇರಿ ಎಲ್ಲ ವ್ಯವಸ್ಥೆ ಈ ಕಟ್ಟಡದಲ್ಲಿ ಇರಲಿದೆ. ಕಟ್ಟಡ ಕಾಮಗಾರಿ ಆರಂಭಗೊಂಡು ಐದು ತಿಂಗಳುಗಳೇ ಕಳೆದಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಗ್ರಾಮದ ಅಭಿವೃದ್ಧಿಗೆ ಹೊಸ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

3 ವರ್ಷಗಳಿಂದ ಇದೇ ಪರಿಸ್ಥಿತಿ 
ಮುತ್ತೂರು ಈ ಹಿಂದೆ ಕುಪ್ಪೆಪದವು ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಮುತ್ತೂರಿನ ವ್ಯಾಪ್ತಿ ಹಾಗೂ ಜನಸಾಂದ್ರತೆಯನ್ನು ಗಮನಿಸಿ ಕುಪ್ಪೆಪದವಿನಿಂದ ವಿಭಾಗಿಸಿ 2015ರ ಜುಲೈನಲ್ಲಿ ಮುತ್ತೂರು ಗ್ರಾಮ ಪಂಚಾಯತ್‌ ಅನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಯಿತು. ನೂತನ ಪಂಚಾಯತ್‌ಗೆ ಒಂದು ವರ್ಷದೊಳಗೆ ನೂತನ ಕಟ್ಟಡ ಒದಗಿಸುವುದಾಗಿ ಸರಕಾರ ಭರವಸೆ ನೀಡಿದ್ದರೂ ಇನ್ನೂ ಈ ಭರವಸೆ ಈಡೇರದ ಕಾರಣ ಸಣ್ಣ ಕೊಠಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುವಂತಾಗಿದೆ. 

Advertisement

ಮಾರ್ಚ್‌ನಲ್ಲಿ ಲೋಕಾರ್ಪಣೆ
ಮುತ್ತೂರು ಗ್ರಾ.ಪಂ. ಹೊಸ ಕಟ್ಟಡದಲ್ಲಿ ವಿ.ಎ. ಕಾರ್ಯಾ ಲಯವೂ ಒಳಗೊಳ್ಳಲಿದೆ. ಮಹತ್ಮಾ ಗಾಂಧಿ  ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 18.22 ಲಕ್ಷ ರೂ., ಪಂಚಾಯತ್‌ ಫಂಡ್‌ನಿಂದ ಸುಮಾರು 2 ಲಕ್ಷ ರೂ. ಹಾಗೂ ಸರಕಾರದ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ವಸಂತಿ, ಮುತ್ತೂರು
  ಗ್ರಾ. ಪಂ.ಪಿಡಿಒ

ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next