Advertisement
“”ಸಾಧನೆಯೆ? ನಿಮಗೆ ಗೊತ್ತಿಲ್ಲ. ನಾನು ಸಾಹಸಿ, ಧೈರ್ಯವಂತ, ಪರಾಕ್ರಮಿ!” ಎಂದು ಹೇಳಿದ ಮುಸ್ತಾಫಾ. ಸುಲ್ತಾನ ವ್ಯಂಗ್ಯವಾಗಿ ನಗುತ್ತ ಒಂದು ಹರಿತವಿಲ್ಲದ ಚೂರಿಯನ್ನು ತರಿಸಿ ಅವನಿಗೆ ಕೊಟ್ಟ. “”ಅಂತಹ ಸಾಹಸಿ ನೀನಾಗಿದ್ದರೆ ಈ ಚೂರಿಯಿಂದ ಏನು ಸಾಧಿಸಿದೆ ಎಂಬುದನ್ನು ಬಂದು ಹೇಳು” ಎಂದು ಆಜಾnಪಿಸಿದ. ಚೂರಿಯೊಂದಿಗೆ ಮುಸ್ತಾಫಾ ಹೊರಟ. ಒಂದೆಡೆ ಜೇನ್ನೊಣಗಳಿರುವ ಎರಿ ಕಾಣಿಸಿತು. ಚೂರಿಯನ್ನು ಭರದಿಂದ ಎರಿಯ ಮೇಲೆ ಬೀಸಿದ. ಆಗ ಎಪ್ಪತ್ತು ನೊಣಗಳು ಗಾಯಗೊಂಡವು. ಅರುವತ್ತು ನೊಣಗಳು ಸತ್ತುಹೋದವು. ಸಮೀಪದಲ್ಲಿ ಸುಲ್ತಾನನ ಅರಮನೆಗೆ ಆಯುಧಗಳನ್ನು ತಯಾರಿಸುವ ಕಮ್ಮಾರ ತನ್ನ ಕೆಲಸದಲ್ಲಿ ತೊಡಗಿದ್ದ. ಮುಸ್ತಾಫಾ ಅವನನ್ನು ಅಲ್ಲಿಗೆ ಕರೆದ.
“”ನೋಡು, ಇದು ಒಂದು ಸಾಹಸವೇ ಅಲ್ಲ. ನಾನಾಗಿದ್ದರೆ ನೂರು ಮಂದಿಯನ್ನು ಒಮ್ಮೆಲೇ ನೊಣಗಳಂತೆ ಉರುಳಿಸಬಲ್ಲೆ. ಹೋಗಲಿ, ನೀನು ಅಂತಹ ಸಾಹಸಿಯಾಗಿದ್ದರೆ ಅರಮನೆಯ ಉಪಯೋಗಕ್ಕೆ ತುಂಬ ನೀರು ಬೇಕಾಗುತ್ತದೆ. ನೀನೊಬ್ಬನೇ ಎಷ್ಟು ಬೇಗ ತಂದು ಪಾತ್ರೆಗಳಿಗೆ ತುಂಬುವೆಯೋ ನೋಡುತ್ತೇನೆ” ಎಂದು ಹೇಳಿದ. ಬಾವಿಯಿಂದ ನೀರು ಸೇದಿ ತರುವುದು ಖಂಡಿತ ಸಾಧ್ಯವಿಲ್ಲವೆಂದು ಮುಸ್ತಾಫಾನಿಗೆ ತಿಳಿದಿತ್ತು. “”ಅದಕ್ಕೇನಂತೆ, ನನಗೆ ನಾಲ್ವರು ಸೇವಕರು ಮತ್ತು ಒಂದು ಹಗ್ಗವನ್ನು ಕೊಟ್ಟರೆ ಇಡೀ ಬಾವಿಯನ್ನು ತಂದು ಅರಮನೆಯೊಳಗೆ ಇಡುತ್ತೇನೆ” ಎಂದು ಮೀಸೆ ತಿರುವಿದ.ಸುಲ್ತಾನನು ಸೇವಕರ ಜೊತೆಗೆ ಹಗ್ಗವನ್ನು ನೀಡಿದ. ಮುಸ್ತಾಫಾ ಬಾವಿಯ ದಂಡೆಯಲ್ಲಿದ್ದ ಕಲ್ಲಿಗೆ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ತನ್ನ ಬೆನ್ನಿಗೆ ಬಿಗಿದುಕೊಂಡ. ತಾನು ಎಳೆಯುವ ಭಂಗಿಯಲ್ಲಿ ನಿಂತು ಸೇವಕರೊಂದಿಗೆ ಬಾವಿಯನ್ನು ಮುಂದೆ ದೂಡಲು ಹೇಳಿದ. ಈ ಸಾಹಸ ಮಾಡುವಾಗ ಇಬ್ಬರು ಸೇವಕರು ಕಾಲು ಜಾರಿ ಬಾವಿಗೆ ಬಿದ್ದು ಮುಳುಗಿ ಹೋದರು. ಇದನ್ನು ಕಂಡು ಸುಲ್ತಾನನು, “”ಬಾವಿಯನ್ನು ತರುವ ಕೆಲಸ ಸಾಕು, ಅರಮನೆಗೆ ಒಂದು ವರ್ಷಕ್ಕೆ ಬೇಕಾಗುವ ಕಟ್ಟಿಗೆಯನ್ನು ತಂದು ತುಂಬಿಸು” ಎಂದು ಆಜಾnಪಿಸಿದ.
Related Articles
Advertisement
ಚಳಿ ತಡೆಯುವುದಿಲ್ಲ ಎಂದು ಮುಸ್ತಾಫಾ ಬಚ್ಚಲಿನ ಒಲೆಯ ಒಳಗೆ ಮಲಗಿದ್ದ ಕಾರಣ ನೀರೆಲ್ಲವೂ ಹಂಡೆಯ ಒಳಗೆ ತುಂಬಿಕೊಂಡಿತು. ಬೆಳಗ್ಗೆ ಅವನು ಸತ್ತಿರುವುದನ್ನು ನೋಡಲು ಬಂದ ಸುಲ್ತಾನನ ಸೇವಕರು ಅವನು ಬಿಸಿನೀರಿನ ಸ್ನಾನ ಮಾಡಿ ಖುಷಿಯಾಗಿರುವುದನ್ನು ಕಂಡರು. ಆ ದಿನ ರಾತ್ರೆ ಮತ್ತೆ ಸುಲ್ತಾನನು ಕಬ್ಬಿಣದ ಗುಂಡುಗಳನ್ನು ಛಾವಣಿಯಲ್ಲಿ ಒಳಗೆ ಹಾಕಿಸಿಬಿಟ್ಟ. ಮುಸ್ತಾಫಾನಿಗೆ ಸುಲ್ತಾನನ ಮೇಲೆ ಅನುಮಾನವಿರುವ ಕಾರಣ ನೆಲಮಾಳಿಗೆಯೊಳಗೆ ಬಚ್ಚಿಟ್ಟುಕೊಂಡು ಗುಂಡುಗಳ ಏಟಿನಿಂದ ಪಾರಾದ.ಬೆಳಗಾದಾಗ ಮತ್ತೆ ಸುಲ್ತಾನನ ಸೇವಕರು ಮುಸ್ತಾಫಾನ ಮನೆಗೆ ಬಂದರು. ಮುಸ್ತಾಫಾ ಕಣ್ಣುಗಳನ್ನು ಹೊಸಕಿಕೊಳ್ಳುತ್ತ ಬಾಗಿಲು ತೆರೆದ. “”ಇಡೀ ರಾತ್ರೆ ಇಲಿಗಳ ಕಾಟ! ಕಿಚ್ ಕಿಚ್ ಅನ್ನುತ್ತ ಛಾವಣಿಯಿಂದ ಕೆಳಗೆ ಬೀಳುತ್ತ ಇದ್ದವು. ನಿದ್ರೆ ಅನ್ನುವುದು ಬರಲಿಲ್ಲ” ಎಂದು ಹೇಳಿದ. ಸೇವಕರು ಮುಸ್ತಾಫಾ ಆರಾಮವಾಗಿರುವ ಸುದ್ದಿ ತಂದಾಗ ಅವನನ್ನು ಏನು ಮಾಡುವುದೆಂದು ತಿಳಿಯದೆ ಸುಲ್ತಾನ ಚಿಂತೆಗೊಳಗಾದ.ಆಗ ಮಂತ್ರಿಗಳು, “”ಇಷ್ಟೆಲ್ಲ ಪರೀಕ್ಷೆಗಳಲ್ಲೂ ಅವನು ಗೆದ್ದಿದ್ದಾನೆ. ಕಡೆಯದಾಗಿ ಒಂದು ಕಠಿಣ ಪರೀಕ್ಷೆ ಮಾಡಿ ನೋಡೋಣ. ಇದರಲ್ಲಿ ಗೆದ್ದರೆ ಮತ್ತೆ ನೀವು ಅವನನ್ನು ಅಳಿಯನೆಂದು ಒಪ್ಪಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“”ಅದೇನು ಹೇಳಿ” ಎಂದ ಸುಲ್ತಾನ. “”ಒಂದು ಕರಡಿ ಬಹು ಕಾಲದಿಂದ ಪ್ರಜೆಗಳಿಗೆ ತೊಂದರೆ ಕೊಡುತ್ತ ಇದೆ. ಅದನ್ನು ಕೊಲ್ಲಲು ಅವನಿಗೆ ಹೇಳಿ” ಎಂದರು ಮಂತ್ರಿಗಳು.ಕರಡಿಯನ್ನು ಕೊಲ್ಲುವ ಕೊನೆಯ ಪರೀಕ್ಷೆಯನ್ನು ಸುಲ್ತಾನ ಹೇಳಿದಾಗ ಮುಸ್ತಾಫಾನಿಗೆ ಜಂಘಾಬಲವೇ ಉಡುಗಿಹೋಯಿತು. ಆದರೂ ತೋರಿಸಿಕೊಳ್ಳಲಿಲ್ಲ. “”ನನಗೊಂದು ವೇಗವಾಗಿ ಓಡುವ ಕುದುರೆಯನ್ನು ಕೊಡಿ. ನಾನು ಕರಡಿಯ ಕಾಟ ಪರಿಹರಿಸುತ್ತೇನೆ” ಎಂದು ಕೋರಿದ. ಕುದುರೆಯ ಮೇಲೆ ಕುಳಿತು ಊರು ಬಿಟ್ಟು ಹೋಗುವ ಅವನ ಯೋಚನೆ ಸುಲ್ತಾನನಿಗೆ ಅರ್ಥವಾಗಲಿಲ್ಲ. ಕುದುರೆಯನ್ನು ಕೊಡಿಸಿದ. ಅದರ ಮೇಲೇರಿಕೊಂಡು ಮುಸ್ತಾಫಾ ಸಾಗತೊಡಗಿದ. ಕಾಡುದಾರಿಯಲ್ಲಿ ಓಡುತ್ತಿರುವ ಕುದುರೆಯ ಮುಂದೆ ಇದ್ದಕ್ಕಿದ್ದಂತೆ ಕರಡಿ ಪ್ರತ್ಯಕ್ಷವಾಗಿ ಸನಿಹಕ್ಕೆ ಓಡಿ ಬಂದಿತು.ಭಯಗ್ರಸ್ಥವಾದ ಕುದುರೆ ಹಿಂಗಾಲುಗಳ ಮೇಲೆ ನಿಂತು ಮುಂದೆ ಜಿಗಿಯಿತು. ಆಗ ಕರಡಿ ಅದರ ಕಾಲುಗಳ ನಡುವೆ ಸಿಲುಕಿ ನೆಲಕ್ಕುರುಳಿತು. ಇದೇ ಸಮಯ ನೋಡಿ ಮುಸ್ತಾಫಾ ಕೆಳಗೆ ಧುಮುಕಿದ. ತನ್ನ ಮುಂಡಾಸಿನ ಬಟ್ಟೆಯನ್ನು ಕರಡಿಯ ಕೊರಳಿಗೆ ಬಿಗಿಯಾಗಿ ಕಟ್ಟಿ ಹಿಡಿದುಕೊಂಡ. ಮತ್ತೆ ಕುದುರೆಯ ಬೆನ್ನ ಮೇಲೇರಿ ಕರಡಿಯನ್ನು ಅರಮನೆಯ ಅಂಗಳಕ್ಕೆ ಎಳೆದು ತಂದ.
ಮುಸ್ತಾಫಾ ತಂದ ಕರಡಿಯನ್ನು ಕಂಡು ಸುಲ್ತಾನ ವಿಸ್ಮಿತನಾದ. ಇವನು ಸಾಧಾರಣನಲ್ಲ, ಸಾಹಸಿ ಎಂಬುದರಲ್ಲಿ ಅನುಮಾನವಿಲ್ಲ ಎಂದು ನಿರ್ಧರಿಸಿದ. ಕರಡಿಯನ್ನು ಅರಮನೆಯ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದ. ಮುಸ್ತಾಫಾನನ್ನು ಆದರದಿಂದ ಮಾತನಾಡಿಸಿದ. ತನ್ನ ಮಗಳ ಜೊತೆಗೆ ಅವನ ವಿವಾಹ ನೆರವೇರಿಸಿದ. ಮುಂದೆ ಅವನೇ ರಾಜ್ಯದ ಉತ್ತರಾಧಿಕಾರಿಯೆಂದು ಸಾರಿದ.
– ಪ. ರಾಮಕೃಷ್ಣ ಶಾಸ್ತ್ರಿ