Advertisement

ಬಾಂಗ್ಲಾ ಟೆಸ್ಟ್‌ ತಂಡಕ್ಕೆ ಮುಸ್ತಫಿಜುರ್‌ ವಾಪಸ್‌

12:31 PM Feb 22, 2017 | Team Udayavani |

ಢಾಕಾ: ಗಾಯಾಳಾಗಿ ಹೊರಗುಳಿದಿದ್ದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್‌ ರೆಹಮಾನ್‌ ಚೇತರಿಸಿಕೊಂಡು ಟೆಸ್ಟ್‌ ತಂಡವನ್ನು ಸೇರಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಮುಸ್ತಫಿಜುರ್‌ ಅವರನ್ನು ಆಯ್ಕೆ ಮಾಡಲಾಗಿದೆ. 

Advertisement

ಮುಸ್ತಫಿಜುರ್‌ಗಾಗಿ ಜಾಗ ಬಿಟ್ಟವರು ಶಫಿಯುಲ್‌ ಇಸ್ಲಾಂ. ಭಾರತ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದ ವೇಳೆ ಶಫಿಯುಲ್‌ ತಂಡದಲ್ಲಿದ್ದರು. ಈ ಟೆಸ್ಟ್‌ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದ ವೇಳೆ ಗಾಯಾಳಾಗಿದ್ದ ಆರಂಭಕಾರ ಇಮ್ರುಲ್‌ ಕಯೇಸ್‌ ಇನ್ನೂ ವಿಶ್ರಾಂತಿಯಲ್ಲಿದ್ದಾರೆ. ತಂಡಕ್ಕೆ ಮರಳಿದ ಮತ್ತೂಬ್ಬ ಆಟಗಾರನೆಂದರೆ ಪೇಸ್‌ ಬೌಲರ್‌ ರುಬೆಲ್‌ ಹೊಸೇನ್‌.
ಸರಣಿಯ 2 ಟೆಸ್ಟ್‌ ಪಂದ್ಯಗಳು ಗಾಲೆ (ಮಾ. 7-11) ಮತ್ತು ಕೊಲಂಬೋದಲ್ಲಿ (ಮಾ. 15-19) ನಡೆಯಲಿವೆ. ಈ ಸರಣಿಯ 2ನೇ ಟೆಸ್ಟ್‌ ಬಾಂಗ್ಲಾ ಪಾಲಿನ 100ನೇ ಟೆಸ್ಟ್‌ ಎಂಬುದು ವಿಶೇಷ.

ಬಾಂಗ್ಲಾದೇಶ ತಂಡ: ಮುಶ್ಫಿಕರ್‌ ರಹೀಂ (ನಾಯಕ), ತಮಿಮ್‌ ಇಕ್ಬಾಲ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ಮೊಮಿನುಲ್‌ ಹಕ್‌, ಶಕಿಬ್‌ ಅಲ್‌ ಹಸನ್‌, ಮಹಮದುಲ್ಲ, ಶಬ್ಬೀರ್‌ ರೆಹಮಾನ್‌, ಮುಸ್ತಫಿಜುರ್‌ ರೆಹಮಾನ್‌, ತೈಜುಲ್‌ ಇಸ್ಲಾಂ, ಮೆಹೆದಿ ಹಸನ್‌, ತಸ್ಕಿನ್‌ ಅಹ್ಮದ್‌, ಮೊಸದೆಕ್‌ ಹೊಸೇನ್‌, ಕಮ್ರುಲ್‌ ಇಸ್ಲಾಂ ರಬ್ಬಿ, ಸುಬಾಶಿಷ್‌ ರಾಯ್‌, ರುಬೆಲ್‌ ಹೊಸೇನ್‌.

Advertisement

Udayavani is now on Telegram. Click here to join our channel and stay updated with the latest news.

Next