Advertisement

ಟಿ20 ತಂಡಕ್ಕೆ ಮರಳಿದ ಮುಸ್ತಫಿಜುರ್‌ ರೆಹಮಾನ್‌

12:19 PM Jul 29, 2018 | |

ಢಾಕಾ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುವ 3 ಪಂದ್ಯಗಳ ಟಿ20 ಸರಣಿಗೆ ಎಡಗೈ ವೇಗಿ ಮುಸ್ತಫಿಜುರ್‌ ರೆಹಮಾನ್‌ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ ವೇಳೆ ಸಂಭವಿಸಿದ ಕಾಲೆºರಳಿನ ಮೂಳೆ ಮುರಿತದಿಂದಾಗಿ ಅವರು ವಿಶ್ರಾಂತಿಯಲ್ಲಿದ್ದರು.

Advertisement

ವೆಸ್ಟ್‌ ಇಂಡೀಸ್‌-ಬಾಂಗ್ಲಾದೇಶ ನಡುವಿನ ಟಿ20 ಸರಣಿ ಜು. 31ರಿಂದ ಸೇಂಟ್‌ ಕಿಟ್ಸ್‌ನಲ್ಲಿ ಆರಂಭವಾಗಲಿದೆ. 2ನೇ ಹಾಗೂ 3ನೇ ಪಂದ್ಯ ಅಮೆರಿಕದ ಲಾಡರ್‌ಹಿಲ್‌ನಲ್ಲಿ ನಡೆಯುವುದು ವಿಶೇಷ.

ಬಾಂಗ್ಲಾದೇಶ ತಂಡ: ಶಕಿಬ್‌ ಅಲ್‌ ಹಸನ್‌ (ನಾಯಕ), ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಲಿಟನ್‌ ದಾಸ್‌, ಮುಶ್ಫಿಕರ್‌ ರಹೀಂ, ಶಬ್ಬೀರ್‌ ರೆಹಮಾನ್‌, ಮಹಮದುಲ್ಲ, ಮೊಸದ್ದೆಕ್‌ ಹೊಸೈನ್‌, ಮೆಹಿದಿ ಹಸನ್‌, ನಜ್ಮುಲ್‌ ಇಸ್ಲಾಮ್‌, ರುಬೆಲ್‌ ಹೊಸೈನ್‌, ಮುಸ್ತಫಿಜುರ್‌ ರೆಹಮಾನ್‌, ಅಬು ಹೈದರ್‌, ಅಬು ಜಾಯೇದ್‌, ಅರೀಫ‌ುಲ್‌ ಹಕ್‌.

Advertisement

Udayavani is now on Telegram. Click here to join our channel and stay updated with the latest news.

Next