Advertisement
ಹೀಗೆ ಮತ ಚಲಾಯಿಸಿ:ಮತಪಟ್ಟಿಯಲ್ಲಿ ಹೆಸರು ನೋಂದಣಿಯಾಗಿರುವ ಮತದಾರರಿಗೆ ಚುನಾವಣಾಧಿ ಕಾರಿಗಳು ಮತಚೀಟಿಗಳನ್ನು ನೀಡಿರುತ್ತಾರೆ. ಆ ಮತಚೀಟಿಯಲ್ಲಿ ಮತದಾರರು ಮತ ಚಲಾಯಿಸಬಹು ದಾದ ಮತಗಟ್ಟೆಯ ಮಾಹಿತಿ ಇರುತ್ತದೆ. ಚುನಾವಣೆ ನಡೆಯವ ದಿನದಂದು ಅ ಮತಗಟ್ಟೆಗೆ ತೆರಳಿ ಮತ ಚಲಾಯಿಸಬ ಹುದು. ಒಂದು ವೇಳೆ ಮತಚೀಟಿ ಮತದಾರರಿಗೆ ತಲುಪಿಲ್ಲದಿದ್ದರೆ ಚುನಾವಣ ಆಯೋಗದ ವೆಬ್‌ಸೈಟ್‌ನ (https://voters.eci.gov.in/) ಮೂಲಕ ತಮ್ಮ ಮತಗಟ್ಟೆಯ ಮಾಹಿತಿ ಪಡೆದುಕೊಳ್ಳಬಹುದು. ಪೋಲಿಂಗ್ ಬೂತ್‌ನೊಳಗೆ ಮೊದಲ ಪೋಲಿಂಗ್ ಅಧಿಕಾರಿ ವೋಟರ್ ಲಿಸ್ಟ್ ಮತ್ತು ಐಡಿ ಪ್ರೂಫ್ ಅನ್ನು ಪರಿಶೀಲಿಸುತ್ತಾರೆ. ಬಳಿಕ ಎರಡನೇ ಪೋಲಿಂಗ್ ಅಧಿಕಾರಿ ತೋರು ಬೆರಳಿಗೆ ಇಂಕ್ ಹಾಕಿ, ನಿಮ್ಮ ಸಹಿ ಪಡೆದು, ಸ್ಲಿಪ್ ನೀಡುತ್ತಾರೆ. ಮೂರನೇ ಪೋಲಿಂಗ್ ಅಧಿಕಾರಿ ತೋರು ಬೆರಳನ್ನು ಪರಿಶೀಲಿಸಿ ಮತಚೀಟಿ ಪಡೆದು ಇವಿಎಂ ಮೂಲಕ ಮತ ಚಲಾವಣೆಗೆ ಅವಕಾಶ ನೀಡುತ್ತಾರೆ.
“ಚುನಾವಣ’ ಎಂಬ ಆ್ಯಪ್ ಮೂಲಕ ನಿಮ್ಮ ಮತಗಟ್ಟೆ, ಸ್ಪರ್ಧಿಸುತ್ತಿರುವ ಅಭ್ಯರ್ಥಿ, ಚುನಾವಣ ವೇಳಾಪಟ್ಟಿ. ಮತಗಟ್ಟೆಯಲ್ಲಿನ ಸರದಿ ಸ್ಥಿತಿ, ಪಾರ್ಕಿಂಗ್ ಸ್ಥಿತಿ, ಹಿಂದಿನ ಚುನಾವಣ ವಿವರವನ್ನು ತಿಳಿಯಬಹು ದಾಗಿದೆ. ಹಾಗೆಯೇ ವಿಶೇಷ ಚೇತನ ಮತದಾರರ ಮಾಹಿತಿಯನ್ನು ಆಯೋಗ ಈಗಾಗಲೇ ಸಂಗ್ರಹಿಸಿದ್ದು ಮತದಾನ ಕೇಂದ್ರಕ್ಕೆ ವಾಹನ ಸೇವೆ, ಗಾಲಿ ಕುರ್ಚಿ, ಭೂತಗನ್ನಡಿ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗ್ಗೆಯೇ ಮತಹಾಕಿ
ಸಾಮಾನ್ಯವಾಗಿ ಬೆಳಗ್ಗೆಯ ಅವಧಿಯಲ್ಲಿ ಮತಗಟ್ಟೆಗಳಲ್ಲಿ ಜನಸಂದಣಿ ಕಡಿಮೆ ಇರುತ್ತದೆ. ಜತೆಗೆ ಬಿಸಿಲಿನ ತಾಪವು ಕಡಿಮೆ ಇರುತ್ತದೆ. ಹಾಗೆಯೇ ಮತದಾನ ಮಾಡಿದ ಬಳಿಕ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳ ಬಹುದು. ಅದ್ದರಿಂದ ಬೆಳಗ್ಗಿನ ಅವಧಿ ಹೆಚ್ಚು ಸೂಕ್ತ.
Related Articles
ಮತ ಚೀಟಿಯಲ್ಲಿ ಮತಗಟ್ಟೆಯ ಮಾಹಿತಿ ಇರುತ್ತದೆ. ಇದರ ಜತೆಗೆ ನಗರ ಪ್ರದೇಶದಲ್ಲಿ ಚುನಾವಣ ಆಯೋಗ ನೀಡುತ್ತಿರುವ ಮತಚೀಟಿಯಲ್ಲಿ ಕ್ಯುಆರ್ ಕೋಡ್ ಇದ್ದು ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮತಗಟ್ಟೆ ಯಾವುದು, ಎಷ್ಟು ದೂರದಲ್ಲಿದೆ ಎಂಬ ಮಾಹಿತಿಯನ್ನು ಪಡೆಯಬಹುದು.
Advertisement
ದಾಖಲೆಗಳು ಏನು ಬೇಕು?
ಮತದಾರರ ಚೀಟಿ ಇದ್ದರೆ ಉತ್ತಮ. ಒಂದು ವೇಳೆ ಮತದಾರರ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್, ಕಾರ್ಮಿಕ ಸಚಿವಾಲಯ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಭಾರತದ ಪಾಸ್‌ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ, ಸರಕಾರದ ಸೇವಾ ಗುರುತಿನ ಚೀಟಿಗಳು ಮುಂತಾದ ಪೋಟೋ ಗುರುತಿನ ದಾಖಲೆಗಳನ್ನು ತೋರಿಸುವ ಮೂಲಕ ಮತದಾನ ಮಾಡಬಹುದಾಗಿದೆ.
ವೀಕೆಂಡ್ ಎಂದು ಪ್ರವಾಸ ಹೋಗಬೇಡಿ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಎಪ್ರಿಲ್ 26 ಮತ್ತು ಎರಡನೇ ಹಂತದ ಮತದಾನ ನಡೆಯುವ ಮೇ 7ನ್ನು ರಜಾ ದಿನವೆಂದು ಘೋಷಿಸಲಾಗಿದೆ. ಎ. 26 ಶುಕ್ರವಾರ ಆಗಿರುವುದರಿಂದ ಆ ಬಳಿಕ ಶನಿವಾರ, ರವಿವಾರ ರಜೆ ಎಂದು ಹಾಗೆಯೇ ಮೇ 7 ಮಂಗಳವಾರ ಆಗಿರುವುದಿಂದ ಸೋಮವಾರ ರಜೆ ಹಾಕಿ ಶನಿವಾರದಿಂದ ಮಂಗಳವಾರದ ತನಕ ರಜೆಯನ್ನು ಅನುಭವಿಸಲು ಪ್ರವಾಸ ಅಥವಾ ಇನ್ಯಾವುದೋ ಕಾರ್ಯಕ್ರಮ ಇಟ್ಟುಕೊಂಡು ಮತದಾನ ಮಾಡದಿರುವ ನಿರ್ಲಕ್ಷ್ಯ ಮಾಡದಿರಿ. ಮತದಾನವನ್ನು ಪವಿತ್ರ ಎಂದು ಪರಿಗಣಿಸಿ ತಪ್ಪದೆ ಮತದಾನ ಮಾಡಿ. ಈಗ ನಿರ್ಲಕ್ಷಿಸಿ ಆಮೇಲೆ ಪಶ್ಚಾತ್ತಾಪ ಪಡಬೇಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಮಹತ್ವದ ಪ್ರಕ್ರಿಯೆ. ಹದಿನೆಂಟು ವರ್ಷ ದಾಟಿದ ನಾಗರಿಕರು ಶಾಸನ ಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ. ಶಾಸನ ಸಭೆಗಳಲ್ಲಿ ನಮ್ಮ ವರ್ತಮಾನ, ಭವಿಷ್ಯವನ್ನು ನಿರೂಪಿಸಬಲ್ಲ ಕಾನೂನು, ನೀತಿ ನಿಯಮಗಳ ರಚನೆ ಆಗುತ್ತದೆ. ಸರಳವಾಗಿ ಹೇಳುವುದೆಂದರೆ ನಮ್ಮ ದೇಶದ, ಸಮಾಜದ “ದಿಕ್ಕು ದೆಸೆ’ ರೂಪಿತಗೊಳ್ಳುವುದು ಶಾಸನ ಸಭೆಗಳಲ್ಲಿ. ಇಂತಹ ಶಾಸನ ಸಭೆಗೆ ಸೂಕ್ತ ವ್ಯಕ್ತಿಗಳನ್ನು ಕಳುಹಿಸಲು ನಮ್ಮ ನಮ್ಮ ಮತವೇ ಸಾಧನ. ಆದ್ದರಿಂದ ವಿವೇಚನೆಯಿಂದ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ನಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಉದಾಸೀನ ತಾಳದೆ ನಮ್ಮ ಮತವೂ ಅಮೂಲ್ಯ ಎಂಬ ಭಾವನೆಯಿಂದ ಮತಗಟ್ಟೆಗೆ ತೆರಳಿ ತಮ್ಮ ಕರ್ತವ್ಯ ನಿರ್ವಹಿಸಬೇಕು.