Advertisement

ಭಾರತದಲ್ಲಿ ಮುಸ್ಲಿಮರು ಭಯಪಡಬೇಕಾದ ಅಗತ್ಯವೇ ಇಲ್ಲ: ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ

10:01 AM Dec 12, 2019 | Team Udayavani |

ನವದೆಹಲಿ: ದೇಶದ ಮುಸ್ಲಿಮರು ಭಯಪಡಬೇಕಾದ ಅಗತ್ಯವಿಲ್ಲ. ಅವರು ದೇಶದ ಪ್ರಜೆಗಳಾಗಿಯೇ ಉಳಿಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ನಂತರ ಹೇಳಿದರು.

Advertisement

ಪೌರತ್ವ ತಿದ್ದುಪಡಿ ಮಸೂದೆ ಮುಸ್ಲಿಮ್ ಸಮುದಾಯದ ವಿರುದ್ಧವಾಗಿದೆ ಎಂಬುದಾಗಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಆದರೆ ಈ ಮಸೂದೆ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ. ಇದರಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ಆತಂಕ ಬೇಕಾಗಿಲ್ಲ ಎಂದು ತಿಳಿಸಿದರು.

ಭಾರತೀಯ ಮುಸ್ಲಿಮರು ಸುರಕ್ಷಿತ. ಅವರು ಯಾವಾಗಲೂ ಸುರಕ್ಷಿತವಾಗಿರಲಿದ್ದಾರೆ. ನಾನು ಭಾರತದ ಮುಸ್ಲಿಮರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ..ದಯವಿಟ್ಟು ತಪ್ಪು ಮಾಹಿತಿಯ ಜಾಲದಲ್ಲಿ ಬೀಳಬೇಡಿ. ಅಷ್ಟೇ ಅಲ್ಲ ಅವರನ್ನು ತಪ್ಪು ದಾರಿಗೆ ಎಳೆಯಬೇಡಿ. ಅವರು ಭಯರಹಿತವಾಗಿ ಬದುಕಲಿ ಎಂದು ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next