Advertisement

BJP ಮುಸ್ಲಿಮರು ಇರದೇ ಇದ್ದಿದ್ದರೆ ಖಾತೆಯೇ ತೆರೆಯುತ್ತಿರಲಿಲ್ಲ:ಕಾಂಗ್ರೆಸ್ ಸಂಸದ

09:52 PM Aug 01, 2024 | Team Udayavani |

ಹೊಸದಿಲ್ಲಿ: ಮುಸ್ಲಿಂ, ದಲಿತ ವಿರೋಧಿ, ಬಡವರ ಮತ್ತು ವಿದ್ಯಾರ್ಥಿ ವಿರೋಧಿ ಭಾವನೆಗಳನ್ನು ಹೊತ್ತಿಸುವ ಮೂಲಕ ಬಿಜೆಪಿ ಅಧಿಕಾರ ನಡೆಸುತ್ತಿದೆ. ದೇಶದಲ್ಲಿ ಮುಸ್ಲಿಮರು ಇಲ್ಲದಿದ್ದರೆ, ಈಗ ಆಡಳಿತ ನಡೆಸುತ್ತಿರುವ ಪಕ್ಷವು ಖಾತೆಯನ್ನೂ ತೆರೆಯುತ್ತಿರಲಿಲ್ಲ, ಪಕ್ಷ ಇರಲು ಸಾಧ್ಯವೇ ಇರಲಿಲ್ಲ” ಎಂದು ಗುರುವಾರ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್  ಕಿಡಿಕಾರಿದರು.

Advertisement

ಶಿಕ್ಷಣ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಬಿಹಾರದ ಕಿಶನ್‌ಗಂಜ್ ಸಂಸದ ಮೊಹಮ್ಮದ್ ಜಾವೇದ್ ”ದೇಶದಲ್ಲಿ ಶಿಕ್ಷಣವನ್ನು ಉಳಿಸಬೇಕು. ಮೊಘಲರ ಹೆಸರನ್ನು ತೆಗೆದುಹಾಕುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಮೊಘಲರು 330 ವರ್ಷ ಇಲ್ಲಿದ್ದರು, ನೀವು ಹೆಸರನ್ನು ತೆಗೆದ ಮಾತ್ರಕ್ಕೆ ಅವರನ್ನು ತೆಗೆದುಹಾಕಲಾಗುವುದಿಲ್ಲ” ಎಂದರು.

‘ಮುಸ್ಲಿಮರಿಗೆ ಬೇರೆಯವರಂತೆ ಬುದ್ಧಿವಂತಿಕೆ ಇದೆ. ನಾವು ಬೇರೆಯವರಂತೆ ಕೊಡುಗೆ ನೀಡಬಹುದು. ನೀವು ತಾರತಮ್ಯ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದು ಅಲ್ಪಸಂಖ್ಯಾಕರ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ಮರುಪ್ರಾರಂಭಿಸುವಂತೆ ಶಿಕ್ಷಣ ಸಚಿವರನ್ನು ಒತ್ತಾಯಿಸಿದರು.

“ಅಲ್ಪಸಂಖ್ಯಾತರ ಯೋಜನೆಗಳನ್ನು ಪುನರಾರಂಭಿಸಲು ನಾನು ಸರ್ಕಾರವನ್ನು ಒತ್ತಾಯಿಸಿದ್ದೇನೆ ಮತ್ತು ವಿದ್ಯಾರ್ಥಿವೇತನವನ್ನು ಪುನರಾರಂಭಿಸಬೇಕು. ನೀವು 2020 ರಲ್ಲಿ UPSC ಗಾಗಿ ಒಂದನ್ನು ನೀಡಿದ್ದೀರಿ ಕೆಲವರು ಇದು ‘UPSC ಜಿಹಾದ್’ ಎಂದು ಹೇಳಿದರು. ಸುಮಾರು 4 ಪ್ರತಿಶತದಷ್ಟು ಮುಸ್ಲಿಂ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಆದರೆ ಜನಸಂಖ್ಯೆಯು ಶೇಕಡಾ 15 ರಷ್ಟಿದೆ. ಮುಂದಿನ ವರ್ಷ, UPSC ತೇರ್ಗಡೆಯಾದ ಮುಸ್ಲಿಂ ವಿದ್ಯಾರ್ಥಿಗಳ ಶೇಕಡಾವಾರು ಸಂಖ್ಯೆ 3.6 ಕ್ಕೆ ಇಳಿದಿದೆ ಮತ್ತು ನಂತರದ ವರ್ಷದಲ್ಲಿ ಶೇಕಡಾ 3.1 ಕ್ಕೆ ಇಳಿಯಿತು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next