Advertisement

ಪೌರತ್ವ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಯಾವುದೇ ಧಕ್ಕೆ ಇಲ್ಲ

10:27 PM Dec 14, 2019 | Lakshmi GovindaRaj |

ರಾಯಚೂರು: ಸಂಸತ್‌ನಲ್ಲಿ ಧಾರವಾಡ ಪೇಡೆ ಹಂಚಿದ್ದು ಬೇರೆ ಉದ್ದೇಶಕ್ಕೆ. ಆದರೆ, ಅದು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಎಂದು ತಿಳಿದು ಕೊಂಡಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಈ ಮಸೂದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಏನು ತೊಂದರೆ ಆಗಲಿದೆ ಎಂಬುದನ್ನು ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಅದರ ಬದಲಿಗೆ ತಪ್ಪು ಸಂದೇಶ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅನೇಕ ವರ್ಷಗಳ ಹಿಂದೆ ಇಲ್ಲಿಗೆ ಬಂದು ಶರಣಾದವರು ಅರ್ಜಿ ಸಲ್ಲಿಸಿದಲ್ಲಿ ಪೌರತ್ವ ನೀಡುವುದಷ್ಟೇ ಇದರ ಉದ್ದೇಶ. ದೇಶದಲ್ಲಿ 550 ಮುಸ್ಲಿ ಮರು ಕೂಡ ಅರ್ಜಿ ಸಲ್ಲಿಸಿದ್ದು, ಅವರಿಗೂ ಪೌರತ್ವ ನೀಡಲಾಗಿದೆ ಎಂದರು.

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲ ರಾಜ ಕೀಯ ಪಕ್ಷಗಳು ಇಂಥ ಅಪಪ್ರಚಾರ ಮಾಡುತ್ತಿವೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಅಸ್ಸಾಂನಲ್ಲಿ ಕಾಂಗ್ರೆಸ್‌ ನಾಯಕರು, ಕೇರಳದಲ್ಲಿ ಎಡಪಕ್ಷಗಳ ಮುಖಂ ಡರು ಇಂಥ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಬೂಟಾಟಿಕೆ ರಾಜಕಾರಣಿಗಳನ್ನು ನಂಬಬಾರದು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಯಾರೂ ಕೂಡ ಆತಂಕದಿಂದ ಬಾಳುವ ಅಗತ್ಯವಿಲ್ಲ ಎಂದರು.

ರಾಹುಲ್‌ ಗಾಂಧಿ  ಒಬ್ಬ ಪಾರ್ಟ್‌ ಟೈಂ ರಾಜಕಾರಣಿ. ಮೇಕ್‌ ಇನ್‌ ಇಂಡಿಯಾಕ್ಕೂ ರೇಪ್‌ ಇನ್‌ ಇಂಡಿಯಾಕ್ಕೂ ಹೋಲಿಕೆ ಮಾಡುವ ಅವರ ಬುದ್ಧಿಮಟ್ಟಕ್ಕೆ ನಾನು ಸಿಂಪತಿ ವ್ಯಕ್ತಪಡಿಸುತ್ತೇನೆ. ಕನಿಷ್ಠ ಬುದ್ಧಿಯೂ ಇಲ್ಲದ ವ್ಯಕ್ತಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು ಎನ್ನುವುದೇ ದುರಂತ. ಬಹುಶಃ ಅವರು ಇತ್ತೀಚೆಗೆ ವಿದೇಶಗಳಿಗೆ ಹೆಚ್ಚು ಓಡಾಡಿ ಬುದ್ಧಿ ಭ್ರಮಣೆಯಾಗಿದೆ. ಅವರು ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಜಕಾರಣಿ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next