Advertisement

Election; ಮುಸ್ಲಿಮರಲ್ಲೂ ಮಿತ್ರರಿದ್ದಾರೆ, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನ: ಪಿಎಂ

11:59 PM May 14, 2024 | Team Udayavani |

ವಾರಾಣಸಿ: “ಮುಸ್ಲಿಂ ಸಮುದಾಯದಲ್ಲೂ ನನಗೆ ಮಿತ್ರರಿದ್ದಾರೆ. 2002ರ ಗುಜರಾತ್‌ ಗಲಭೆಗಳ ಬಳಿಕ ಮುಸ್ಲಿಮರ ವಿಚಾರದಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆದಿದೆ. ನಾನು ಮುಸ್ಲಿಂ ವಿರೋಧಿಯಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,  ಮುಸ್ಲಿಂ ಸಮುದಾಯದಲ್ಲಿಯೂ ತಮಗೆ ಸ್ನೇಹಿತರಿದ್ದಾರೆ. ಬಾಲ್ಯದ ದಿನಗಳಲ್ಲಿ ಮುಸ್ಲಿಂ ಸಮುದಾಯದ ಹಬ್ಬಗಳಾದ ಈದ್‌ ಸೇರಿ ಅವರ ಹಬ್ಬಗಳನ್ನು ಆಚರಿಸುತ್ತಿದ್ದೆ ಎಂದಿದ್ದಾರೆ. ಈದ್‌ ದಿನದಂದು ಮುಸ್ಲಿಂ ಕುಟುಂಬಗಳಿಂದ ನಮ್ಮ ಮನೆಗೆ ಅಡುಗೆ ಬರುತ್ತಿತ್ತು ಎಂದರು.

ಹೆಚ್ಚು ಮಕ್ಕಳನ್ನು ಹೊಂದುವ ಕುರಿತು ನನ್ನ ಹೇಳಿಕೆ ಕೇವಲ ಮುಸ್ಲಿಂ ಸಮುದಾಯಕ್ಕೆ ಅನ್ವಯಿಸುವುದಿಲ್ಲ. ಅನೇಕ ಹಿಂದೂ ಬಡ ಕುಟುಂಬದಲ್ಲೂ ಈ ಪರಿಸ್ಥಿತಿ ಇದೆ. ಎಷ್ಟು ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯವಿದೆಯೋ ಅಷ್ಟನ್ನು ಮಾತ್ರ ಹೊಂದಿ ಎಂದು ಸಲಹೆ ನೀಡಿದ್ದೇನೆ ಎಂದರು. ನಾನು ವೋಟ್‌ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವುದೇ ನನ್ನ ಮೂಲ ಮಂತ್ರ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next