ಲಕ್ನೋ: ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಹೋಗಬಾರದು ಎಂದು ಉತ್ತರ ಪ್ರದೇಶದ ಧರ್ಮಗುರು ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಧರ್ಮಗುರುವೊಬ್ಬರು, ಪುರುಷರು ನಡೆಸುತ್ತಿರುವ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗಬಾರದು ಜೊತೆಗೆ ಪಾರ್ಲರ್‌ಗಳಲ್ಲಿ ಮಹಿಳೆಯರು ತಮ್ಮ ಮೇಕಪ್ ಮಾಡಿಕೊಳ್ಳುವುದು ‘ನಿಷಿದ್ಧ’ ಮತ್ತು ‘ಕಾನೂನುಬಾಹಿರ’ ಎಂದು ಮುಸ್ಲಿಂ ಧರ್ಮ ಗುರು ಹೇಳಿದ್ದಾರೆ.
ಮುಸ್ಲಿಂ ಧರ್ಮ ಗುರುಗಳು ನೀಡಿರುವ ಹೇಳಿಕೆಯವಿಡಿಯೋ ವೈರಲ್ ಆಗಿದೆ.
ಧರ್ಮಗುರು ಮುಫ್ತಿ ಅಸದ್ ಕಾಸ್ಮಿ ಅವರು ಈ ಹೇಳಿಕೆಗಳನ್ನು ನೀಡಿದ್ದು, ಮುಸ್ಲಿಂ ಮಹಿಳೆಯರು ಪುರುಷರು ನಡೆಸುತ್ತಿರುವ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು ಅದರ ಬದಲಿಗೆ ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್‌ಗಳನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಳೆದ ತಿಂಗಳು, ಕಾನ್ಪುರದ ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್ ಗೆ ಹೋಗಿ ತಮ್ಮ ಹುಬ್ಬಿನ ಆಕಾರವನ್ನು ಬದಲಿಸಿದ ವಿಚಾರವನ್ನು ಪತಿಗೆ ತಿಳಿಸಿದ ಬಳಿಕ ಸೌದಿ ಅರೇಬಿಯಾದಲ್ಲಿರುವ ಪತಿ ಫೋನ್ ಮೂಲಕ ತನ್ನ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪ್ರಕರಣ ಸದ್ಯ ಠಾಣೆಯಲ್ಲಿದೆ.
ಇದನ್ನೂ ಓದಿ: Deepfake ಸದ್ಯ ಭಾರತೀಯ ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ: ಪ್ರಧಾನಿ ಮೋದಿ