ಕಾಬೂಲ್: ಸೋಮನಾಥದಲ್ಲಿ ಶಿವಲಿಂಗ ನಾಶ ಮಾಡಿದ ದಾಳಿಕೋರ ಮೊಹಮ್ಮದ್ ಘಜ್ನಿ ತಾಲಿಬಾನ್ ಉಗ್ರ ಅನಾಸ್ ಹಕ್ಕಾನಿಗೆ ಆದರ್ಶವಂತೆ. ಹೀಗೆಂದು ಆತನೇ ನಾಚಿಕೆ ಇಲ್ಲದೆ ಹೇಳಿಕೊಂಡಿದ್ದಾನೆ. ತಾಲಿಬಾನ್ ಮುಖಂಡನಾಗಿರುವ ಆತ ಮೊಹಮ್ಮದ್ ಘಜ್ನಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಟ್ವೀಟ್ ಮಾಡಿಕೊಂಡಿದ್ದಾನೆ.
ಜತೆಗೆ “ಭಾರತದ ಸೋಮನಾಥದಲ್ಲಿ ಹತ್ತನೇ ಶತಮಾನದಲ್ಲಿ ಶಿವ ಲಿಂಗವನ್ನು ನಾಶ ಮಾಡಿದ ಘಜ್ನಿ ನಮಗೆ ಸ್ಫೂರ್ತಿಯಾಗಬೇಕು’ ಎಂದು ಬರೆದುಕೊಂಡಿದ್ದಾನೆ.
ಜತೆಗೆ “ವೀರ ಯೋಧ ಸುಲ್ತಾನ್ ಮೊಹಮ್ಮದ್ ಘಜ್ನಿಯ ಸ್ಮಾರಕಕ್ಕೆ ಭೇಟಿ ನೀಡಿದೆ. ಸೋಮನಾಥದಲ್ಲಿ ಶಿವಲಿಂಗ ನಾಶ ಮಾಡಿದ ಹೆಗ್ಗಳಿಕೆ ಆತನದ್ದು ಮತ್ತು ಆ ಕಾಲಕ್ಕೇ ಈ ಪ್ರದೇಶದಲ್ಲಿ ಪ್ರಭಾವಯುತವಾಗಿ ಮುಸ್ಲಿಂ ಆಡಳಿತ ಜಾರಿಗೊಳಿಸಲು ಪ್ರಯತ್ನಿಸಿದ್ದ’ ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ:Breaking News : ಬೆಳಗಾವಿಯಲ್ಲಿ ದುರಂತ : ಮನೆ ಕುಸಿದು 7 ಜನ ದುರ್ಮರಣ
1 ಸಾವಿರನೇ ಇಸವಿಯಿಂದ 1025ನೇ ಇಸವಿಯ ಅವಧಿಯಲ್ಲಿ ಘಜ್ನಿ 17 ಬಾರಿ ದೇಶಕ್ಕೆ ದಂಡೆತ್ತಿ ಬಂದಿದ್ದ. ಆತನ ಅವಧಿಯಲ್ಲಿ 50 ಸಾವಿರ ಹಿಂದೂಗಳು ಅಸುನೀಗಿದ್ದರು. 6.5 ಟನ್ ಚಿನ್ನವನ್ನು ಆತ ಲೂಟಿ ಮಾಡಿ ಇತಿಹಾಸ ಕಾಲದ ಅಫ್ಘಾನಿಸ್ತಾನದ ಘಜ್ನಿವಿಗೆ ಸಾಗಿಸಿದ್ದಾನೆ ಮತ್ತು ಸೋಮನಾಥ ದೇಗುಲ ನಾಶ ಮಾಡಿದ್ದ. 1947ರಲ್ಲಿ ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಮುತುವರ್ಜಿಯಿಂದ ಸೋಮನಾಥ ದೇಗುಲವನ್ನು ಮತ್ತೆ ನಿರ್ಮಾಣ ಮಾಡಲಾಯಿತು.