Advertisement

Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್‌ ಕುಮ್ಮಕ್ಕು: ಅರವಿಂದ್‌ ಬೆಲ್ಲದ

03:49 AM Oct 27, 2024 | Team Udayavani |

ಧಾರವಾಡ: ರೈತರ ಭೂಮಿ ಕಿತ್ತುಕೊಂಡು, ವಕ್ಫ್ ಬೋರ್ಡ್‌ಗೆ ನೀಡಲು ಹೊರಟಿರುವ ಕಾಂಗ್ರೆಸ್‌ ಸರ್ಕಾರ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ದೇಶದಲ್ಲಿರುವುದು ಅಂಬೇಡ್ಕರ್‌ ವಿರಚಿತ ಸಂವಿಧಾನವೇ ಹೊರತು, ಷರಿಯಾ ಕಾನೂನಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡನಾಡನ್ನೇ ಒಂದು ಸಮುದಾಯಕ್ಕೆ ಮಾರಲು ಹೊರಟಿರುವ ಕಾಂಗ್ರೆಸ್‌ ಸರ್ಕಾರಕ್ಕೆ, ಕನ್ನಡಿಗರು ಮತ್ತು ನಾಡಿನ ಅನ್ನದಾತರೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. ವಿಜಯಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ಖಾನ್‌ 15 ದಿನಗಳೊಳಗೆ ವಕ್ಫ್ ಆಸ್ತಿ ನೋಂದಣಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದರ ಉದ್ದೇಶ ಹಿಂದೂ ರೈತರ ಭೂಮಿ ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡುವುದೇ ಆಗಿದೆ.

ಸಚಿವರ ಈ ನಡೆಯಿಂದ ಕೃಷಿ ಕಾರ್ಯ ಮಾಡಿಕೊಂಡು ಬಂದಿರುವ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಕ್ಫ್ ಮಂಡಳಿ ವಿಜಯಪುರ ಜಿಲ್ಲೆಯೊಂದರಲ್ಲೇ 15,000 ಎಕರೆಗೂ ಅಧಿಕ ಕೃಷಿಭೂಮಿಯನ್ನು ಅಕ್ರಮವಾಗಿ ತನ್ನದೆಂದು ಘೋಷಣೆ ಮಾಡುತ್ತಿದೆ ಎಂದು ದೂರಿದ್ದಾರೆ.

ದೇಶದ ಸಂಸತ್‌ ಭವನವೇ ತಮ್ಮದೆಂದು ಹೇಳಿಕೊಂಡು ತಿರುಗುವ ವಕ್ಫ್ ಮಂಡಳಿ, ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಬಡ ರೈತರ ಜಮೀನಿನ ಮೇಲೂ ವಕ್ರದೃಷ್ಟಿ ಬೀರಿದೆ. ದೇಶದ ಎಲ್ಲ ಆಸ್ತಿಯನ್ನು ವಕ್ಫ್ ಕಬಳಿಸುತ್ತಿದ್ದರೆ, ಖರ್ಗೆಯವರ ಕುಟುಂಬ ವಕ್ಫ್ ಆಸ್ತಿಯನ್ನೇ ನುಂಗಿ ಹಾಕಿದೆ. ಅಂತವರಿಗೆ ನೋಟಿಸ್‌ ನೀಡದ ರಾಜ್ಯ ಸರ್ಕಾರ, ಬಡ ರೈತರ ಮೇಲೆ ಏಕಾಏಕಿ ನೋಟಿಸ್‌ ನೀಡಿ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next