Advertisement

ಭಾರೀ ಮಳೆ: ಪೇಜಾವರ ಶ್ರೀಗಳಿಗೆ ನೆರವಾದ ಮುಸ್ಲಿಂ ಟ್ಯಾಕ್ಸಿ ಚಾಲಕ

12:38 PM Jul 04, 2019 | Team Udayavani |

ಮುಂಬಯಿ: ಕುಂಭ ದ್ರೋಣ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ನೆರೆ ನೀರು ಆವರಿಸಿಕೊಂಡ ಕಾರಣ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ಪೇಜಾವರ ಮಠದ  ವಿಶ್ವೇಶತೀರ್ಥ ಶ್ರೀಗಳು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. ಈ ವೇಳೆ ಮುಸ್ಲಿಂ ಚಾಲಕರೊಬ್ಬರು ಶ್ರೀಗಳಿಗೆ ನೆರವಾದರು.

Advertisement

ಮಂಗಳವಾರ ಬರೋಡಾದಿಂದ ರೈಲಿನಲ್ಲಿ ಆಗಮಿಸಿದ ಶ್ರೀಗಳು ಡೊಂಬಿವಲಿಗೆ ತೆರಳಬೇಕಾಗಿತ್ತು,ಆದರೆ ರೈಲು ಬೊರಿವಿಲಿಯಲ್ಲೆ ನಿಂತ ಕಾರಣ ಶ್ರೀಗಳು ಬೇರೆ ವಾಹನವನ್ನ ಅವಲಂಬಿಸಬೇಕಾಯಿತು. ಯಾವ ಟ್ಯಾಕ್ಸಿ ಚಾಲಕರು ಶ್ರೀಗಳನ್ನು ಕರೆದೊಯ್ಯಲು ಮುಂದಾಗಲಿಲ್ಲ.

ಈ ವೇಳೆ ಕಲಬುರಗಿ ಮೂಲದ ಶರ್ಫ‌ುದ್ದೀನ್‌ ಮಲೀಕ್‌ ಎನ್ನುವವರು ಭಾರೀ ಮಳೆಯ ನಡೆವೆಯೂ ಶ್ರೀಗಳನ್ನು ಮಧ್ಯಾಹ್ನ 12.30 ರ ಒಳಗೆ ಡೊಂಬಿವಲಿಗೆ ತಲುಪಿಸಿದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next