Advertisement
ಯಾರೀವರು?
Related Articles
Advertisement
ಕುತೂಹಲಕಾರಿ ಅಂಶ ಎಂಬಂತೆ ಈ ಅಲಂಕಾರಿಕ ಶ್ರೀರಾಮನ ವಿಗ್ರಹಗಳು ಅಯೋಧ್ಯೆಯಿಂದ ದೂರದಲ್ಲಿರುವ ಪಶ್ಚಿಮಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. 24 ಪರಗಣದಲ್ಲಿನ ದತ್ತಪುಕುರ್ ಎಂಬಲ್ಲಿ ಭಗವಾನ್ ಶ್ರೀರಾಮನ ಬೃಹತ್ ಗಾತ್ರದ ಫೈಬರ್ ಮೂರ್ತಿಗಳನ್ನು ಜಮಾಲುದ್ದೀನ್ ಮತ್ತು ಪುತ್ರ ಬಿಟ್ಟು ತಯಾರಿಸುತ್ತಿದ್ದಾರೆ. ಮಳೆ ಹಾಗೂ ಬಿಸಿಲಿನ ತಾಪಮಾನವನ್ನು ತಡೆದುಕೊಂಡು ಗಮನಾರ್ಹ ಬಾಳಿಕೆಗೆ ಈ ವಿಗ್ರಹ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮಣ್ಣಿನ ಮೂರ್ತಿಗಿಂತ ಈ ಫೈಬರ್ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಮುಖವಾಗಿ ಪ್ರತಿಕೂಲ ಹವಾಮಾನ ತಡೆದುಕೊಳ್ಳಬಲ್ಲ ಈ ಫೈಬರ್ ಮೂರ್ತಿಯನ್ನು ಹೊರಾಂಗಣದಲ್ಲಿ ಹೆಚ್ಚಾಗಿ ಇಡಲು ಬಳಸಿಕೊಳ್ಳಲಾಗುತ್ತದೆ.
ಇತ್ತೀಚೆಗೆ ಫೈಬರ್ ಶ್ರೀರಾಮನ ವಿಗ್ರಹವನ್ನು ತಯಾರಿಸಿಕೊಡಬೇಕೆಂಬ ಆರ್ಡರ್ ಅಯೋಧ್ಯೆಯಿಂದ ತಮಗೆ ಬಂದಿರುವುದಾಗಿ ಜಮಾಲುದ್ದೀನ್ ಪುತ್ರ ಬಿಟ್ಟು ತಿಳಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ವರ್ಕ್ ಶಾಪ್ ಮಣ್ಣಿನ ವಿಗ್ರಹಕ್ಕೆ ಹೆಸರುವಾಸಿಯಾಗಿತ್ತು. ಆದರೆ ಫೈಬರ್ ವಿಗ್ರಹದ ಬೇಡಿಕೆ ಹೆಚ್ಚಾಗಿದ್ದರಿಂದ ಅದಕ್ಕೆ ಹೆಚ್ಚು ಒತ್ತು ನೀಡಿ ವಿಗ್ರಹ ತಯಾರಿಸುತ್ತಿದ್ದಾರಂತೆ. ಬೃಹತ್ ಗಾತ್ರದ ವಿಗ್ರಹ ತಯಾರಿಕೆಗೆ ಅಂದಾಜು 2.8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಕರಕುಶಲ ಕೆಲಸದ ಸಂಬಳವೂ ಸೇರಿರುತ್ತದೆ.
ಸುಮಾರು 30ರಿಂದ 35 ಜನರು ಈ ಬೃಹತ್ ಶ್ರೀರಾಮನ ವಿಗ್ರಹ ತಯಾರಿಯಲ್ಲಿ ತೊಡಗಿಕೊಂಡಿದ್ದು, ಸುಮಾರು ಒಂದೂವರೆ ತಿಂಗಳು ಕಾಲ ವಿಗ್ರಹ ತಯಾರಿಸಲು ಬೇಕಾಗಿದ್ದು, ನಂತರ ಈ ವಿಗ್ರಹಗಳನ್ನು ಉತ್ತರ 24 ಪರಗಣದಿಂದ ಅಯೋಧ್ಯೆಗೆ ಸಾಗಿಸಲು 45 ದಿನಗಳ ಅಗತ್ಯವಿದೆ ಎಂದು ಯುವಶಿಲ್ಪಿ ಬಿಟ್ಟು ತಿಳಿಸಿದ್ದಾರೆ.
ವಿಗ್ರಹ ತಯಾರಿ ಬಗ್ಗೆ ಪ್ರಶ್ನಿಸಿದಾಗ ಜಮಾಲುದ್ದೀನ್ ಹೇಳಿದ್ದಿಷ್ಟು: ಧರ್ಮ ಎಂಬುದು ನಮ್ಮ ವೈಯಕ್ತಿಕ ವಿಚಾರ. ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಆದರೆ ಇದರಲ್ಲಿ ನಮ್ಮ ಸಂದೇಶ ಸಿಂಪಲ್ಲಾಗಿದೆ…ಕೋಮುವಾದದ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಬೇಕಾಗಿದೆ. ಆ ನಿಟ್ಟಿನಲ್ಲಿ ಭಗವಾನ್ ಶ್ರೀರಾಮನ ವಿಗ್ರಹ ತಯಾರಿ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ನಾನೊಬ್ಬ ಕಲಾವಿದ ಎಂಬ ಸಂದೇಶದೊಂದಿಗೆ ಭ್ರಾತೃತ್ವ ಸಂಸ್ಕೃತಿ ಬೆಳೆಯಲಿದೆ ಎಂದು ಹೇಳಿದರು.