ಲಕ್ನೋ: ವಾರಾಣಸಿಯ ಲಲ್ಲಾಪುರದ ನಿವಾಸಿಯಾಗಿರುವ ಮುಸ್ಲಿಂ ಸಮುದಾಯದ ಮಹಿಳೆ ನಜ್ಮಾ ಪರ್ವೀನ್ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ರಾಜ್ಯಶಾಸ್ತ್ರ ವಿಭಾಗದಿಂದ “ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ- ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪಿಎಚ್‌ಡಿಯನ್ನು ನಜ್ಮಾ ಪೂರ್ಣಗೊಳಿಸಿದ್ದು, ದೇಶದಲ್ಲೇ ಮೋದಿ ಅವರ ಬಗ್ಗೆ ಸಂಶೋಧನೆ ಕೈಗೊಂಡ ಮೊದಲ ಮುಸ್ಲಿಂ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ತಮ್ಮ ಸಂಶೋಧನೆಯಲ್ಲಿ ಮೋದಿ ಅವರನ್ನು ರಾಜಕೀಯದ ಮೆಗಾಸ್ಟಾರ್ ಎಂದೂ ಪರ್ವೀನ್ ಬಣ್ಣಿಸಿದ್ದಾರೆ. ಬಿಎಚ್‌ಯು ಪ್ರೊಫೆಸರ್ ಸಂಜಯ್ ಅವರ ಮೇಲ್ವಿಚಾರಣೆಯಲ್ಲಿ 2014ರಲ್ಲಿ ಸಂಶೋಧನೆ ಆರಂಭಿಸಿ ಕೆಲ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಸಂಶೋಧನೆ ಪೂರ್ಣಗೊಳಿಸಿ, ಪಿಎಚ್‌ಡಿ ಪಡೆದುಕೊಂಡಿದ್ದಾರೆ.
ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಅಭಿವೃದ್ಧಿಯ ಬಗ್ಗೆ ಹೊಸ ವ್ಯಾಖ್ಯಾನ ನೀಡಿದರು. ಪ್ರಧಾನಿಯಾಗಿ ಅವರು ಹೊಸ ಸಾಧನೆಗಳನ್ನು, ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ, ಈ ವಿಚಾರವನ್ನು ಸಂಶೋಧನೆಗಾಗಿ ಆಯ್ಕೆ ಮಾಡಿದೆ ಎಂದರು ನಜ್ಮಾ.