Advertisement

ಮುಸ್ಲಿಂ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

12:51 PM Feb 04, 2017 | Team Udayavani |

ಜೇವರ್ಗಿ: ಮಹ್ಮದ್‌ ಪೈಗಂಬರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆಶು ಪರಿಹಾರ ಗಿನ್ನಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು. 

Advertisement

ಪಟ್ಟಣದ ಅಖಂಡೇಶ್ವರ ವೃತ್ತದಿಂದ ಮುಸ್ಲಿಂ ಸಂಘಟನೆಯ ನೂರಾರು ಕಾರ್ಯಕರ್ತರು ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಮಾಜದ ಯುವ ಮುಖಂಡ ಇಬ್ರಾಹಿಂ ಪಟೇಲ ಮಾತನಾಡಿ, ಮಹ್ಮದ್‌ ಪೈಗಂಬರರು ಇಸ್ಲಾಂ ಧರ್ಮದ ಮೂಲಕ ಜಗತ್ತಿಗೆ ಮಾರ್ಗದರ್ಶನ ಮಾಡಿದ್ದಾರೆ.

ಜಗತ್ತಿಗೆ ಶಾಂತಿ,  ಮಾನವೀಯ ಸಂದೇಶ ನೀಡಿದ ಪೈಗಂಬರರು ಸಮಾಜದಲ್ಲಿ ಸಹಬಾಳ್ವೆಯ ಗುಣ ಬೆಳೆಸಿದ್ದಾರೆ. ಇಂತಹ ಮಹಾನ್‌ ಸಂದೇಶಕ್ಕೆ ಹಾಗೂ ಮಹ್ಮದ್‌ ಪೈಗಂಬರರ ವಿರುದ್ಧ  ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್‌ ಮಾಡಿದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಮಾಜದಲ್ಲಿರುವ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಮಾಜದ ಸ್ವಾಸ್ಥ ಕೆಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಸ್ಲಿಂ ಸಮುದಾಯದ ಮುಖಂಡರಾದ ಹಬೀಬ  ಜಮಾದಾರ, ಮೌಲಾನಾ ರಿಜ್ವಾನ್‌ ಪಟೇಲ, ಮೌಲಾನ ಶರಫೋದ್ದೀನ್‌, ಮಹಿಮ್ಮುದ್ದೀನ ಇನಾಮದಾರ, ಮೋದಿನ ಗುತ್ತೇದಾರ, ಅಹ್ಮದ ಹುಸೇನ ಭಾಗವಾನ, ಡಿ.ಕೆ. ಟೇಲರ್‌, ಚಾಂದಪಾಶಾ ಜಮಾದಾರ, ವಸೀಮ ಭಾಗವಾನ, ಗೌಸ ಇನಾಮದಾರ ಹಾಗೂ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next