Advertisement

Interview; ಮುಸ್ಲಿಂ ಲೀಗ್‌ನ ‘ಬಿ’ ಟೀಂ ಕಾಂಗ್ರೆಸ್‌: ಸುನಿಲ್‌ ಕುಮಾರ್‌

01:25 AM May 03, 2024 | Team Udayavani |

ಬೆಂಗಳೂರು : ಕಾಂಗ್ರೆಸ್‌ ಈಗ ಸರ್ವ ಜನರ ಪಕ್ಷವಾಗಿ ಉಳಿದಿಲ್ಲ. ಬಡವರು, ಪ.ಜಾತಿ, ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಯಾರ ಹಿತಾ ಸಕ್ತಿ ರಕ್ಷಣೆಯೂ ಅವರಿಗೆ ಬೇಕಿಲ್ಲ. ಮುಸ್ಲಿಂ ಓಲೈಕೆಯೊಂದೇ ಆ ಪಕ್ಷದ ಜೀವಾಳ ವಾಗಿದ್ದು, ಕಾಂಗ್ರೆಸ್‌ “ಮುಸ್ಲಿಂ ಲೀಗ್‌ನ ಬಿ ಟೀಂ’ನಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಲೋಕಸಭಾ ಚುನಾವಣ ನಿರ್ವಹಣ ಸಮಿತಿ ಸಂಚಾಲಕ ವಿ.ಸುನಿಲ್‌ ಕುಮಾರ್‌ ಟೀಕಿಸಿದ್ದಾರೆ.

Advertisement

“ಉದಯವಾಣಿ’ಗೆ ನೀಡಿರುವ ಸಂದ ರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿಯವರ ಹತ್ತು ವರ್ಷದ ಆಡಳಿತದಲ್ಲಿ ಪಾಕಿಸ್ಥಾನದಂಥ ವಿದೇಶಿ ಶಕ್ತಿಗಳು, ಜೆಹಾದಿ ಮನಃಸ್ಥಿತಿಯ ವ್ಯಕ್ತಿಗಳಿಂದ ದೇಶದ ಜನರಿಗೆ ರಕ್ಷಣೆ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಜನರ ಬದುಕನ್ನು ಸಂರಕ್ಷಿಸಿ ದ್ದಾರೆ. ಹೀಗಾಗಿ ಇದು ಬದುಕು ಹಾಗೂ ಗ್ಯಾರಂಟಿ ನಡುವಿನ ಚುನಾವಣೆ. ಬದುಕಿದ್ದರೆ ಮಾತ್ರ ಕಾಂಗ್ರೆಸ್‌ನ ಗ್ಯಾರಂಟಿ ಸೌಲಭ್ಯ ಪಡೆಯು ವು ದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಸಂದರ್ಶನದ ಪೂರ್ಣ ಪಾಠ ಹೀಗಿದೆ…..

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿ ನಿಮ್ಮ ಗೆಲುವಿನ ವೇಗವನ್ನು ಕಟ್ಟಿ ಹಾಕುತ್ತದೆ ಎಂದೆನಿಸುತ್ತಿಲ್ಲವೇ ?
ಖಂಡಿತ ಇಲ್ಲ. ಪ್ರಧಾನಿ ಮೋದಿ ಭಾರ  ತೀಯರ ಬದುಕು ಕಟ್ಟಿಕೊಟ್ಟಿದ್ದಾರೆ. ದೇಶದ ಸಮಗ್ರತೆ ಹಾಗೂ ಭದ್ರತೆಗೆ ಕಟಿಬದ್ಧರಾಗಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿಯಿಂದ ಜನರಿಗೆ ಅನು ಕೂಲವಾಗಿದ್ದಕ್ಕಿಂತ ಅನನುಕೂಲವಾಗಿದ್ದೇ ಹೆಚ್ಚು. ಮಹಿಳೆಯರಿಗೆ 2,000 ರೂ. ಕೊಡುತ್ತೇವೆ ಎಂದು ಭ್ರಮೆ ಹುಟ್ಟಿಸುತ್ತಾ ಪ್ರತಿ ಕುಟುಂಬದಿಂದ ಮಾಸಿಕ 10 ಸಾವಿರ ರೂ. ಕಿತ್ತುಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಕಂಡು ಕೇಳರಿಯದ ಮಟ್ಟಿಗೆ ವಿವಿಧ ಸೇವೆಗಳ ಶುಲ್ಕ ಹೆಚ್ಚಳ ಮಾಡಿದ್ದಾರೆ. ಇದೆಲ್ಲ ಜನಕ್ಕೆ ಅರ್ಥವಾಗುತ್ತಿದೆ.

ಹಾಗಾದರೆ ಗ್ಯಾರಂಟಿಯಿಂದ ಜನರಿಗೆ ಒಂದಿಷ್ಟು ಲಾಭವೂ ಆಗಿಲ್ಲವೇ ?
ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್‌ ಸರಕಾರ ತನ್ನ ಪಕ್ಷದ ಮುಖಂಡರನ್ನು ಪೋಷಿಸುತ್ತಿದೆ. ಸಂಪ   ನ್ಮೂಲ ಸಂಗ್ರಹಣೆಯ ಶೇ.25ರಷ್ಟನ್ನು ಗ್ಯಾರಂಟಿ ಯೋಜನೆಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ತನ್ನ ಯೋಜನೆಗಳ ಅನುಷ್ಠಾನಕ್ಕಾಗಿ ಯಾವುದಾದರೂ ಸರಕಾರ ಪಕ್ಷದ ಕಾರ್ಯಕರ್ತರ ಅನು  ಷ್ಠಾನ ಸಮಿತಿ ರಚನೆ ಮಾಡಿದ್ದನ್ನು ಕೇಳಿದ್ದೀರಾ? ಹಾಗಾದರೆ ಅಧಿಕಾರಿಗಳಿಗೆ ಏನು ಕೆಲಸ ?

ಒಬಿಸಿ ಮೀಸಲು ವಿಚಾರ ಪ್ರಧಾನಿ ಮೋದಿ ಮಾಡಿರುವ ಆರೋಪ ಸಂಬಂಧ ನಿಮ್ಮ ನಿಲುವೇನು ?
ಪ್ರಧಾನಿಯವರ ಹೇಳಿಕೆ ಸಮಂಜಸವಾಗಿದೆ. ಇದು ನಮ್ಮ ಕಣ್ಣ ಮುಂದೆ ಇರುವ ಸತ್ಯ. ದಶಕ  ಗಳಿಂದ ಒಬಿಸಿ ಸಮುದಾಯಕ್ಕೆ ಅನ್ಯಾಯವಾಗು ತ್ತಿದೆ. ಹಿಂದಿನ ಆಯೋಗಗಳು ಅಲ್ಪಸಂಖ್ಯಾಕರನ್ನು ಜಾತಿ ಅಥವಾ ಧರ್ಮದ ದೃಷ್ಟಿಯಿಂದ ನೋ ಡದೇ ಆರ್ಥಿಕ ಹಿಂದುಳಿಯುವಿಕೆಯನ್ನು ಮಾನದಂಡವಾಗಿ ಪರಿಗಣಿಸಿ ಎಂದು ಮಾಡಿದ ಶಿಫಾರಸುಗಳನ್ನು ಸಿದ್ದರಾಮಯ್ಯನವರು ಈಗ ರಕ್ಷಣೆಗೆ ಬಳಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ.ಧರ್ಮಾಧಾರಿತ ಮೀಸಲು ವ್ಯವಸ್ಥೆಗೆ ಸಂವಿಧಾನವೇ ಅವಕಾಶ ನೀಡಿಲ್ಲ.

Advertisement

ಇದರಿಂದ ಒಬಿಸಿ ವರ್ಗಕ್ಕೆ ಆಗಿರುವ ಅನ್ಯಾಯದ ಸ್ವರೂಪದ ಬಗ್ಗೆ ಪಕ್ಷ ನಿಜಕ್ಕೂ ಅಧ್ಯಯನ ನಡೆಸಿದೆಯೇ ?
ಪಕ್ಷ ಅಧ್ಯಯನ ಮಾಡಿರುವುದಷ್ಟೇ ಅಲ್ಲ, ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆ ಗಳಲ್ಲಿ ಒಬಿಸಿ ಮೀಸಲು ವಿಚಾರಕ್ಕೆ ಸಂಬಂಧ ಪಟ್ಟಂತೆ ನ್ಯಾ| ಭಕ್ತವತ್ಸಲಂ ನೇತೃತ್ವದಲ್ಲಿ ಒಂದು ಆಯೋಗ ರಚನೆ ಮಾಡಲಾಗಿತ್ತು. ಹಿಂದುಳಿದ ವರ್ಗಗಳ ಸುಮಾರು 103ಕ್ಕೂ ಹೆಚ್ಚು ಜಾತಿಗಳು ಇದುವರೆಗೆ ಒಂದು ಗ್ರಾಮ ಪಂಚಾಯತ್‌ ಸದಸ್ಯತ್ವ ಪಡೆಯುವುದಕ್ಕೂ ಸಾಧ್ಯವಾಗಿಲ್ಲ ಎಂದು ಭಕ್ತವತ್ಸಲಂ ಆಯೋಗ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ನಮ್ಮ ಸರಕಾರ ಶೇ.4ರಷ್ಟು ಮುಸ್ಲಿಂ ಮೀಸಲಾತಿ ಕಿತ್ತು ಹಾಕಿತ್ತು. ಸಿದ್ದರಾಮಯ್ಯನವರಿಗೆ ಒಬಿಸಿ ವರ್ಗದ ಬಗ್ಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗದವರ ಮೀಸಲು ಸೌಲಭ್ಯವನ್ನು ಮುಸ್ಲಿಮರು ಕಿತ್ತುಕೊಳ್ಳುತ್ತಿರುವುದನ್ನು ತಪ್ಪಿಸಲಿ. ಇಲ್ಲವಾದರೆ ಹೋರಾಟ ನಡೆಸುವುದು ನಮಗೆ ಅನಿವಾರ್ಯವಾಗುತ್ತದೆ.

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್‌ ನಡೆಸಿದ ಅಭಿಯಾನಕ್ಕೆ ತಕ್ಕ ಉತ್ತರ ನೀಡುವುದಕ್ಕೆ ಬಿಜೆಪಿ ವಿಫ‌ಲವಾಯಿತೇ?
ಇಲ್ಲ. ನಾವು ಕಾಂಗ್ರೆಸ್‌ ನಡೆಸಿದ ವಿಶ್ವಾಸ ದ್ರೋಹವನ್ನು ಜನರ ಮುಂದಿಡುತ್ತಿದ್ದೇವೆ. ಕೇಂದ್ರ ಅನುದಾನ ಕೊಟ್ಟಿಲ್ಲ ಎಂದು ಆರೋಪಿ ಸುವ ಸಿದ್ದರಾಮಯ್ಯನವರು ಮಳೆ ಹಾನಿಯಿಂದ ಆದ ನಷ್ಟಕ್ಕೆ ಎಷ್ಟು ಪರಿಹಾರ ಕೊಟ್ಟರು? ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಅಧಿಕಾರಿಗಳಿಗೆ ಬೈದು ಬಂದಿದ್ದನ್ನು ಬಿಟ್ಟರೆ, ನಯಾಪೈಸೆ ಪರಿಹಾರ ಕೊಟ್ಟಿಲ್ಲ. ನಿಮ್ಮ ದ್ವಂದ್ವ ನೀತಿಗೆ ಜನ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ.

ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆಯೇ ?
ಗ್ಯಾರಂಟಿ ಯೋಜನೆ ನಿಲ್ಲಿಸುತ್ತೇವೆ ಎಂಬುದು ಕಾಂಗ್ರೆಸ್‌ನ ಹಿಡನ್‌ ಅಜೆಂಡಾ. ಗ್ಯಾರಂಟಿ ಹೆಸರಿನಲ್ಲಿ ಸಿದ್ದರಾಮಯ್ಯ ಸರಕಾರ ರಾಜ್ಯದ 224 ಕ್ಷೇತ್ರಗಳಿಗೆ ಒಂದು ಪೈಸೆ ಅನುದಾನ ಕೊಟ್ಟಿಲ್ಲ. ಈ ಸರಕಾರ ಬಂದ ಮೇಲೆ ಒಂದು ಮೋರಿ ಕಟ್ಟುವುದಕ್ಕೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಹಿಂದೆಂದೂ ಕಾಣದಂಥ ಅಭಿವೃದ್ಧಿ ಶೂನ್ಯ ಸರಕಾರ ಈಗ ಅಸ್ತಿತ್ವದಲ್ಲಿದೆ. ಸಚಿವ ಸಂಪುಟವೇ ಆಂತರಿಕ ಗೊಂದಲದಲ್ಲಿ ಮುಳುಗಿದೆ.

ಪ್ರಧಾನಿ ಪ್ರಶ್ನಿಸುವುದು ಕೈ ನಾಯಕರಿಗೆ ಚಟ
ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರಕಾರ ಈಗ ಪ್ರಧಾನಿಯವರನ್ನು ಪ್ರಶ್ನಿಸುತ್ತಿದೆ….
ಎಲ್ಲದಕ್ಕೂ ಪ್ರಧಾನಿಯವರನ್ನು ಪ್ರಶ್ನಿಸುವುದು ಕಾಂಗ್ರೆಸ್‌ ನಾಯಕರಿಗೆ ಚಟವಾಗಿ ಬಿಟ್ಟಿದೆ. ಈ ಬಗ್ಗೆ ಚುನಾವಣೆಗೆ ಮುನ್ನವೇ ನಮಗೆ ಮಾಹಿತಿ ಇತ್ತು ಎನ್ನುವ ಕಾಂಗ್ರೆಸ್‌ ನಾಯಕರು ಇಷ್ಟು ದಿನ ಏಕೆ ಸುಮ್ಮನಿದ್ದರು ? ಹಾಸನದಿಂದ ಬೆಂಗಳೂರಿನವರೆಗೆ ರಸ್ತೆ ಮಾರ್ಗವಾಗಿಯೇ ಅವರು ಸಾಗುವಾಗ ಏಕೆ ಬಂಧಿಸಲಿಲ್ಲ ? ಜಿಲ್ಲಾಡಳಿತ, ಗುಪ್ತಚರ ವ್ಯವಸ್ಥೆ ನಿಮ್ಮ ಬಳಿ ಇತ್ತಲ್ಲವೇ ? ಈ ವಿಚಾರದಲ್ಲಿ ಕಾಂಗ್ರೆಸ್‌ ವಾದ ಹಾಸ್ಯಾಸ್ಪದ.

ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next