ತಿರುವನಂತಪುರಂ: ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಬೆಂಬಲವಾಗಿ ಸ್ಟಾರ್ ಆಟಗಾರರ ಬೃಹತ್ ಕಟೌಟ್‌ಗಳನ್ನು ಹಾಕಿರುವ ರಾಜ್ಯದ ಫುಟ್‌ಬಾಲ್ ಅಭಿಮಾನ ತೋರಿರುವ ಮುಸ್ಲಿಂ ಯುವಕರ ವಿರುದ್ಧ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಸಂಘಟನೆಯು ಶುಕ್ರವಾರ ಹರಿಹಾಯ್ದಿದೆ.
ಫುಟ್‌ಬಾಲ್ ಸೆಲೆಬ್ರಿಟಿಗಳನ್ನು ಪೂಜಿಸುವುದು ಇಸ್ಲಾಮಿಕ್ ನಂಬಿಕೆಗೆ ವಿರುದ್ಧವಾಗಿದೆ ಎಂದು ಒತ್ತಾಯಿಸಿದೆ. ಅನೇಕ ದೇಶಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಿಕೊಂಡಿರುವ ಪೋರ್ಚುಗಲ್‌ನ ಧ್ವಜಗಳನ್ನು ಬೀಸಬಾರದು ಎಂದು ಹೇಳಿದೆ.
ಫುಟ್ಬಾಲ್ ಅಭಿಮಾನಿಗಳು ಬೀದಿಗಳಲ್ಲಿ ತಮ್ಮ ನೆಚ್ಚಿನ ಫುಟ್ಬಾಲ್ ತಾರೆಗಳಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಬ್ರೆಜಿಲ್ ನ ನೇಮರ್ ಜೂನಿಯರ್ ಅವರ ಬೃಹತ್ ಕಟೌಟ್‌ಗಳನ್ನು ನಿರ್ಮಿಸಲು ಹೆಚ್ಚು ಹಣವನ್ನು ಖರ್ಚು ಮಾಡುತ್ತಿರುವ ಬಗ್ಗೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕುತ್ಬಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಸರ್ ಫೈಝಿ ಕೂಡತಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಹಲವು ದೇಶಗಳನ್ನು ವಸಾಹತುವನ್ನಾಗಿ ಮಾಡಿದ ಪೋರ್ಚುಗಲ್‌ನ ಧ್ವಜವನ್ನು ಬೀಸುವುದು ಸರಿಯಲ್ಲ” ಭಾರತೀಯ ನಾಗರಿಕರು ರಾಷ್ಟ್ರಧ್ವಜದ ಮೇಲೆ ಇತರ ರಾಷ್ಟ್ರಗಳ ಧ್ವಜಗಳನ್ನು ಗೌರವಿಸುವುದು ಮತ್ತು ಬೀಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಮ್ಮ ಸಂಘಟನೆ ಫುಟ್ಬಾಲ್ ಗೆ ವಿರುದ್ದವಾಗಿಲ್ಲ, ಇ ಆಟವನ್ನು ಕ್ರೀಡಾಪಟುವಿನ ಉತ್ಸಾಹದಲ್ಲಿ ನೋಡಬೇಕು. ಫುಟ್ಬಾಲ್ ಈಗ ಸಾಂಕ್ರಾಮಿಕ ಜ್ವರವಾಗಿ ಮಾರ್ಪಟ್ಟಿದ್ದು, ಜನರು ಇದಕ್ಕೆ ವ್ಯಸನಿಯಾಗುತ್ತಿದ್ದಾರೆ. ಇದು ಒಳ್ಳೆಯ ಪ್ರವೃತ್ತಿಯಲ್ಲ” ಎಂದರು.
ಕೂಡತ್ತಾಯಿ, ಫುಟ್‌ಬಾಲ್ ಅನ್ನು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಆಟವಾಗಿ ಮಾತ್ರ ಪ್ರಚಾರ ಮಾಡಬೇಕು ಎಂದಿದ್ದಾರೆ.
ಕೇರಳದಲ್ಲಿ ಎರಡು ತಂಡಗಳ ಅಭಿಮಾನಿಗಳ ನಡುವೆ ಕೈ ಕೈ ಮಿಲಾಯಿಸಿದ ಘಟನೆಯೂ ನಡೆದಿತ್ತು.