ಟೆಸ್ಲಾ, ಸ್ಪೇಸ್ ಎಕ್ಸ್ ಸ್ಥಾಪಕ ಎಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜೋಸ್‌ರನ್ನು ಹಿಂದಿಕ್ಕಿ ಜಗತ್ತಿನ ಟಾಪ್ 1 ಸಿರಿವಂತ ರಾಗಿದ್ದಾರೆ. ಬುಧವಾರ ಟೆಸ್ಲಾ ಕಾರುಗಳ ಷೇರು ಬೆಲೆ 2.8 ಪ್ರತಿಶತ ಏರಿಕೆಯಾಗುವ ಮೂಲಕ ಮಸ್ಕ್ರ ಸಿರಿವಂತಿಕೆಯಲ್ಲಿ ಅಪಾರ ಹೆಚ್ಚಳವಾಗಿದ್ದು ಈಗವರು 195 ಶತಕೋಟಿ ಡಾಲರ್ ಸಂಪತ್ತಿನ ಒಡೆಯರು.
ಕೋವಿಡ್ ಸಮಯದಲ್ಲಿ ಹೆಚ್ಚಳ :
ಕೋವಿಡ್ ಸಮಯದಲ್ಲಿ ಅಮೆಜಾನ್ ಸ್ಥಾಪಕನ ಸಂಪತ್ತಿನಲ್ಲೂ ಏರಿಕೆಯಾಗುತ್ತಿದೆಯಾದರೂ, ಇತ್ತ ಮಸ್ಕ್ರ ಸ್ಪೇಸ್ ಏಕ್ಸ್‌ನ ಯಶಸ್ವಿ ಬಾಹ್ಯಾಕಾಶ ಕಾರ್ಯಕ್ರಮಗಳು ಹಾಗೂ ಟೆಸ್ಲಾ, ಸೊಲಾರಿಸ್ ಕಂಪೆನಿಯ ವಿಸ್ತರಣೆಯು ಎಲಾನ್‌ರನ್ನು ಟಾಪ್ 2ನೇ ಸ್ಥಾನಕ್ಕೊಯ್ದು ನಿಲ್ಲಿಸಿತು. ಕಳೆದ ಒಂದು ವರ್ಷದಲ್ಲೇ ಎಲಾನ್ ಮಸ್ಕ್ ನಿವ್ವಳ ಸಂಪತ್ತು 150 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಒಂದು ವರ್ಷದಲ್ಲೇ ಉದ್ಯಮಿಯೊಬ್ಬರ ಆಸ್ತಿಯಲ್ಲಿ ಈ ಪರಿ ಹೆಚ್ಚಳವಾದದ್ದು ಇತಿಹಾಸದಲ್ಲಿ ಇದೇ ಮೊದಲು.
1 ಡಾಲರ್‌ನಲ್ಲೇ ದಿನಗಳೆದದ್ದೂ ಇದೆ. ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಒಡೆಯ ಎಲಾನ್ ಮಸ್ಕ್ ಈಗೇನೋ ಬಿಲಿಯನ್ ಡಾಲರ್ ಅಧಿಪತಿ. ಆದರೆ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಆದಾಗ್ಯೂ ದಕ್ಷಿಣ ಆಫ್ರಿಕಾದ ಸಿರಿವಂತ ಕುಟುಂಬದಿಂದ ಬಂದರೂ ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂಬ ಹಠ ಅವರಲ್ಲಿತ್ತು. ದಕ್ಷಿಣ ಆಫ್ರಿಕಾದಿಂದ ಅಮೆರಿಕಕ್ಕೆ ಬಂದ ಆರಂಭದಲ್ಲಿ ಕೇವಲ 1 ಡಾಲರ್‌ನಲ್ಲಿ ನಾನು ದಿನ ಕಳೆದಿದ್ದೂ ಇದೆ. ಆ ಹಣವನ್ನು ಆಹಾರಕ್ಕಾಗಿಯೇ ಖರ್ಚು ಮಾಡುತ್ತಿದ್ದೆ. ಹಾಟ್ ಡಾಗ್ಸ್ ಮತ್ತು ಕಿತ್ತಳೆಗಳನ್ನು ರಾಶಿರಾಶಿ ಖರೀದಿಸಲು ಸೂಪರ್ ಮಾರ್ಕೆಟ್‌ಗೆ ಹೋಗುತ್ತಿದ್ದೆ. ಆದರೆ, ಆ ದಟ್ಟಣೆಯಲ್ಲಿ ಅವುಗಳನ್ನು ಪಡೆಯುವಾಗ ಹೈರಾಣಾಗಿರುತ್ತಿದ್ದೆ ಎಂದು ಸ್ಟಾರ್ ಟಾಕ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಸ್ಕ್ ಹೇಳಿದ್ದಾರೆ.
ಟಾಪ್ ಟೆನ್ ಸಿರಿವಂತರು :
ಎಲಾನ್ ಮಸ್ಕ್ :
195 ಶತಕೋಟಿ ಡಾಲರ್
ಬಿಲ್‌ಗೇಟ್ಸ್ :
134 ಶತಕೋಟಿ ಡಾಲರ್
ಝುಕರ್‌ಬರ್ಗ್ :
102 ಶತಕೋಟಿ ಡಾಲರ್
ವಾರೆನ್ ಬಫೆಟ್ :
88.2 ಶತಕೋಟಿ ಡಾಲರ್
ಸರ್ಜಿ ಬ್ರಿನ್ :
81 ಶತಕೋಟಿ ಡಾಲರ್
ಜೆಫ್ ಬೆಜೋಸ್ :
185 ಶತಕೋಟಿ ಡಾಲರ್
ಅರ್ನಾಲ್ಟ್ :
116 ಶತಕೋಟಿ ಡಾಲರ್
ಝಾಂಗ್ ಶನ್ಶಾನ್ :
93.1 ಶತಕೋಟಿ ಡಾಲರ್
ಲ್ಯಾರಿ ಪೇಜ್ :
83.6 ಶತಕೋಟಿ ಡಾಲರ್
ಲ್ಯಾರಿ ಎಲಿಸನ್ :
80 ಶತಕೋಟಿ ಡಾಲರ್