Advertisement

ಸಂಗೀತದಲ್ಲಿ ತಾಳ, ಲಯ, ಸ್ವರ, ಭಾವನೆ ಅತಿ ಮುಖ್ಯ

03:54 PM Jun 05, 2017 | |

ಧಾರವಾಡ: ಸುಗಮ ಸಂಗೀತ ಅಂದ್ರ ಬಾಳ ದೊಡ್ಡ ಕ್ಷೇತ್ರ. ಶ್ರೋತೃಗಳ ಮನಸ್ಸು ಅರಳಬೇಕಾದರೆ ತಾಳ, ಲಯ, ಸ್ವರ, ಭಾವನೆ ಅತೀ ಮುಖ್ಯ. ಇಂದಿನ ಪೀಳಿಗೆ ಅದರ ಕಡೆಗೆ ಅರಿತು ತಾಳ್ಮೆಯಿಂದ ಸಂಗೀತ ಕಲೆಯಬೇಕು ಎಂದು ಹಿರಿಯ ಕಲಾವಿದೆ ಅನುರಾಧಾ ಧಾರೇಶ್ವರ ಹೇಳಿದರು. 

Advertisement

ಸೃಷ್ಟಿ ರಸಿಕರರಂಗ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿಯ ರಂಗಾಯಣದ ಸಾಂಸ್ಕೃತಿಕ ಸಮುತ್ಛಯ ಭವನದಲ್ಲಿ 18ರಿಂದ 24ವರ್ಷದೊಳಗಿನ ಯುವ ಕಲಾವಿದರಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಭಾವಗೀತೆ ಮತ್ತು ವಾದ್ಯ ಸಂಗೀತ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಹಾಡಿನಲ್ಲಿ ಜೀವ ತುಂಬಲು ಗುರುಗಳು ಬೇಕು. ಸುಗಮ ಸಂಗೀತಗಾರರಿಗೆ ಭಾಷೆಯ ಪ್ರಜ್ಞೆ ಇರಬೇಕು. ಉಚ್ಛಾರ ಸ್ಪಷ್ಟತೆ ಇರಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿ, ಸೃಷ್ಟಿ ರಸಿಕರರಂಗ ಪ್ರತಿಷ್ಠಾನದ ಕಾರ್ಯ ನಿಜಕ್ಕೂ ಶ್ಲಾಘನೀಯ. 

ಸುಗಮ ಸಂಗೀತ ಮತ್ತು ವಾದ್ಯ ಸಂಗೀತಕ್ಕೆ ನೀಡಿದ ಪೊÅàತ್ಸಾಹ ಮೆಚ್ಚುವಂತಹದ್ದು ಎಂದರು. ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಭಾವಗೀತೆ ಪ್ರಸ್ತುತಪಡಿಸಿದ ಪಂ| ಶ್ರೀಕಾಂತ ಕುಲಕರ್ಣಿ ಅವರನ್ನು ಪ್ರತಿಷ್ಠಾನ ಪರವಾಗಿ ಸನ್ಮಾನಿಸಲಾಯಿತು. 

ಭಾವಗೀತೆ ಮತ್ತು ವಾದ್ಯ ಸಂಗೀತ ಸ್ಪರ್ಧೆಯಲ್ಲಿ ವಿಜೇತ ಕಲಾವಿದರಿಗೆ ಹಿರಿಯ ಸಾಹಿತಿ ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಡಾ|ಶಕ್ತಿ ಪಾಟೀಲ, ರಾಧಾ ದೇಸಾಯಿ, ನಿವೃತ್ತ ವಾರ್ತಾ ಧಿಕಾರಿ ಪಿ.ಎಸ್‌.ಹಿರೇಮಠ, ವಿಶಾಲಾಕ್ಷಿ ಗುಮಾಸ್ತೆ, ಲತಾ ಶಿವಾನಂದ, ಲೀಲಾ ಮಹದೇವ ಪಾಟೀಲ, ಕುಮಾರ ಕಾಟೇನಹಳ್ಳಿ, ಕಾವ್ಯ ಹಿರೇಮಠ, ಮಾಯಾ ರಾಮನ್‌, ಶ್ರೀಧರ ಕುಲಕರ್ಣಿ ಇದ್ದರು. 

Advertisement

ಸುರಭಿ ಸುರೇಶ ಪ್ರಾರ್ಥಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಗೋವಿಂದ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸುರೇಕಾ ಸುರೇಶ ಸ್ವಾಗತಿಸಿದರು. ಅಶೋಕ ಲೊಂಡೆ ನಿರೂಪಿಸಿದರು. ನಾಗರತ್ನಾ ಸಜ್ಜನಶೆಟ್ಟರ ವಂದಿಸಿದರು.

ಭಾವಗೀತೆಯಲ್ಲಿ ಚನ್ನಬಸವಣ್ಣ ಪಾವಟೆ (ಪ್ರಥಮ), ಮೈತ್ರಿ ಭಜಂತ್ರಿ (ದ್ವಿತೀಯ), ವೈಷ್ಣವಿ ಅಗ್ನಿಹೋತ್ರಿ (ತೃತೀಯ) ಸ್ಥಾನ ಪಡೆದರೆ ವಾದ್ಯಸಂಗೀತ ಹಾರ್ಮೋನಿಯಂದಲ್ಲಿ ಬಸವರಾಜ ಹಿರೇಮಠ ಪ್ರಥಮ, ತಬಲಾ ವಾದನಕ್ಕೆ ಪ್ರಶಾಂತ ಹಾರೋಗೇರಿ ಮಠ (ದ್ವಿತೀಯ), ಸಿತಾರ ವಾದನಕ್ಕೆ ಸಾಯಿ ಸಂತೋಷ (ತೃತೀಯ) ಸ್ಥಾನದೊಂದಿಗೆ ನಗದು ಪುರಸ್ಕಾರ ಹಾಗೂ ಅಭಿನಂದನಾ ಪತ್ರ ನೀಡಲಾಯಿತು.

ಡಾ| ಸುಲಭಾದತ್ತ ನೀರಲಗಿ, ಡಾ| ಎಂ. ಅರಣ್ಯಕುಮಾರ, ಪಂ| ಶ್ರೀನಿವಾಸ ಜೋಶಿ ನಿರ್ಣಾಯಕರಾಗಿದ್ದರು. ಪ್ರಕಾಶ ಮಡಿವಾಳರ, ಅನಿಲ ಮೇತ್ರಿ ತಬಲಾ, ಬಸವರಾಜ ಹಿರೇಮಠ ಹಾರ್ಮೋನಿಯಂ, ಶಂಕರ ಕಬಾಡಿ ವಾಯಲಿನ್‌ ಸಾಥ್‌ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next