ಮಂಗಳೂರು: ತುಳುನಾಡು ಬಗ್ಗೆ ನನಗೆ ತುಂಬಾ ಪ್ರೀತಿ.ಇಲ್ಲಿನ ಜನರು, ಸಂಸ್ಕೃತಿ, ಆಹಾರ ಪದ್ಧತಿ ನನಗೆ ಇಷ್ಟವಾದದ್ದು. ಈ ಚಿತ್ರಕ್ಕೆ ವಿಭಿನ್ನವಾಗಿ ಹಾಡುಗಳನ್ನು ಸಂಯೋಜಿಸಿದ್ದೇನೆ ಎಂದು ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹೇಳಿದರು.
ಇದನ್ನೂ ಓದಿ:ಬಾಂಗ್ಲಾದೇಶ: ಹೋಳಿ ಸಂಭ್ರಮದ ನಡುವೆ ರಾಧಾಕಾಂತ ದೇವಸ್ಥಾನ ಧ್ವಂಸ, ಲೂಟಿ
ಅವರು ಮಗನೇ ಮಹಿಷ ತುಳು ಸಿನಿಮಾದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿ, ಕೋವಿಡ್ ನ ಲಾಕ್ ಡೌನ್ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದು ವಿಶೇಷ ಎಂದು ಹೇಳಿ, ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು.
“ಸಿನಿಮಾ ಕ್ಷೇತ್ರದಲ್ಲಿ ಬದುಕುಳಿಯುವುದು ನಮ್ಮಂತಹ ಕಲಾವಿದರು ಮಾತ್ರ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ನಿರ್ಮಾಪಕರನ್ನು ಉಳಿಸಿ, ಬೆಳೆಸಿ ಎಂದು ಕೋಸ್ಟಲ್ ವುಡ್ ನಟ ನವೀನ್ ಡಿ.ಪಡೀಲ್ ಈ ಸಂದರ್ಭದಲ್ಲಿ ತಿಳಿಸಿದರು.
ನಿರ್ಮಾಪಕ, ನಿರ್ದೇಶಕ ವೀರೇಂದ್ರ ಶೆಟ್ಟಿಯವರು ತಮ್ಮ ಪ್ರತಿಭೆ ಏನು ಅನ್ನೋದು ಹಿಂದೆ ಚಾಲಿಪೋಲಿಲು ಸಿನಿಮಾದಲ್ಲಿ ತೋರಿಸಿದ್ದಾರೆ. ಆ ಸಿನಿಮಾ 511 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಈ ಸಿನಿಮಾ 512 ದಿನ ಪ್ರದರ್ಶನ ಕಾಣುವಂತಾಗಲಿ ಎಂದು ನಟ ದೇವದಾಸ್ ಕಾಪಿಕಾಡ್ ಶುಭಹಾರೈಸಿದರು.
ಶೆಟ್ಟಿಯವರ ಸವರ್ಣ ದೀರ್ಘ ಸಂಧಿ ಸಿನಿಮಾ ಅದ್ಭುತವಾಗಿತ್ತು. ಚಿತ್ರದಲ್ಲಿ ಎಲ್ಲರ ಅಭಿನಯ ಚೆನ್ನಾಗಿತ್ತು. ಆದರೆ ಪ್ರಚಾರದ ಕೊರತೆಯಿಂದ ಸಿನಿಮಾ ಹೆಚ್ಚಿನ ಯಶಸ್ಸು ಗಳಿಸಲಿಲ್ಲ. ಆ ತಪ್ಪನ್ನು ಅವರು ಮಾಡದೇ ಇರುವುದು ಈ ಸಿನಿಮಾದ ಗೆಲುವಿಗೆ ಸಹಕಾರ ಆಗಲಿದೆ ಎಂದು ತುಳುಚಿತ್ರರಂಗದ ಹೆಸರಾಂತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.