Advertisement

ಸಂಗೀತ ನಮ್ಮ ನಿತ್ಯ ಬದುಕಿನ ಸಂಜೀವಿನಿ

10:24 PM Sep 28, 2020 | Karthik A |

ಭಾರತೀಯ ಸಂಸ್ಕೃತಿಯ ಮೂಲಸ್ತಂಭಗಳೇ ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳು. ನಮ್ಮ ಪ್ರಾಚೀನರು ಈ ಎಲ್ಲ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಅಪಾರ.

Advertisement

ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪರಮಾತ್ಮನ ಸಾಧನೆಗಾಗಿ ಲಲಿತಕಲೆ ಉತ್ಪತ್ತಿಯಾಯಿತು ಎಂಬುದರ ಉಲ್ಲೇಖ ಪುರಾಣಗಳಲ್ಲಿದೆ. ಭಾರತೀಯ ಪರಂಪರೆಯಲ್ಲಿ ಲಲಿತಕಲೆಗಳಲ್ಲಿ ಸಂಗೀತವು ಶ್ರೇಷ್ಠ ಸ್ಥಾನವನ್ನು ಪಡೆದಿದೆ.

ಇದರ ಹುಟ್ಟು ಸಾಮವೇದದಿಂದಲೇ ಎಂಬುದು ಸರ್ವ ವಿದಿತವಾದ ಸಂಗತಿ.ಜಗತ್ತಿನಲ್ಲಿ ಅದರದ್ದೇ ಆದ ಅನನ್ಯತೆ ಹಾಗೂ ಭಾವಪೂರ್ಣ ಸೊಬಗನ್ನು ಹೊಂದಿದ ಸಂಗೀತವು ಕೇಳುಗನನ್ನು ದೈವಿಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂಬ ಮಾತಿದೆ.

ಸಂಗೀತ ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧದ ದ್ಯೋತಕವೂ ಹೌದು. ಸಂಗೀತಕ್ಕೆ ತಲೆಭಾಗದವರಿಲ್ಲ, ತಲೆದೂಗದವರಿಲ್ಲ. ಕಿಂಚಿತ್‌ ಭಕ್ತಿಯಿಂದೊಡಗೂಡಿದ ಗೀತವು ಅನಂತಾನಂತ ಕೋಟಿ ಜಪಕ್ಕೆ ಸರಿಯಾದುದು ಎಂದು ಬಸವಣ್ಣ ಹೇಳಿದರೆ, ಸಂಗೀತವು ಒಂದು ಉನ್ನತವಾದ ಕಲೆ, ಅದು ಅರ್ಥವಾದವರಿಗೆ ಒಂದು ಉತ್ಕೃಷ್ಟವಾದ ಪೂಜೆ ಎಂಬುದು ಸ್ವಾಮಿ ವಿವೇಕಾನಂದರ ಮಾತು.

ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಪುರಂದರದಾಸರು, ಕನಕದಾಸರು, ನಾಮದೇವ, ತುಲಸಿ, ಕಬೀರ, ಚೈತನ್ಯಾ ಮಹಾಪ್ರಭು ಹೀಗೆ ಅಖಂಡ ಭಾರತದ ಸಂತವರೇಣ್ಯರು ಸಂಗೀತವನ್ನು ನಾದಯೋಗವಾಗಿಸಿದ್ದಾರೆ. ವೈಶಿಷ್ಟé ಪೂರ್ಣತೆಯನ್ನು ಹೊಂದಿರುವ ಭಾರತೀಯ ಸಂಗೀತವು ಕೇವಲ ಮನೋರಂಜನೆಗಾಗಿ ಇರುವ ಸಾಧನವಲ್ಲ.

Advertisement

ಸ್ವರ, ರಾಗ, ಶ್ರುತಿ, ಲಯ ಮಾಧುರ್ಯಗಳಲ್ಲಿ ವಾದ್ಯ, ಹಿಮ್ಮೇಳಗಳ ಸಮ್ಮಿಲನದಿಂದ ನವಿರಾಗಿ ಮೂಡಿಬಂದು ಶ್ರವಣ ಮಾತ್ರದಿಂದಲೇ ನಮ್ಮ ಮನಸ್ಸಿಗೆ ಸಂತೃಪ್ತಿಯನ್ನು ಒದಗಿಸುತ್ತದೆ. ಅದು ನಮ್ಮೆಲ್ಲರ ಚೇತನಗಳಲ್ಲಿರುವ ಅಂತಃಸತ್ವವನ್ನು ದೈನಂದಿನ ಬದುಕಿನ ನೀರಸ ಸ್ತರದಿಂದ ಮೇಲಕ್ಕೆತ್ತಿ ಅದರದ್ದೇ ಆದ ಅಂತಃ ಸತ್ವದಲ್ಲಿ ಲೀನವಾಗಿಸುವ ಶಕ್ತಿಯನ್ನು ಹೊಂದಿದೆ.

ಕಲೆ ಎಂಬುದು ಸಂಜೀವಿನಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ಹಿರಿದಾದ ಸಾಂಸ್ಕೃತಿಕ ಪರಂಪರೆಯಲ್ಲಿ ಅವಿಚಿ#ನ್ನವಾಗಿ ಸಾಗಿ ಬಂದ ಸಂಗೀತ ಕಲೆಯನ್ನು ಆಳವಾಗಿ ಅಲ್ಲದಿದ್ದರೂ ಅಲ್ಪವಾದರೂ ಎಲ್ಲರೂ ಅರಿಯುವುದು ಅವಶ್ಯ.

-ಸ್ವಾತಿ ರಾವ್‌, ಮಂಗಳಾದೇವಿ, ಬೆಸೆಂಟ್‌ ಕಾಲೇಜು, ಮಂಗಳೂರು

 

 

Advertisement

Udayavani is now on Telegram. Click here to join our channel and stay updated with the latest news.

Next