Advertisement
ಮಕ್ಕಳಲ್ಲಿ ಆತಂಕರಾಜ್ಯದ 65 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 20-25 ದಿನಗಳ ಕಾಲ ಪರೀಕ್ಷೆ ನಡೆಯುತ್ತದೆ. ಪಿಯುಸಿ, ಎಸೆಸೆಲ್ಸಿ, ನೀಟ್ ಮೊದಲಾದ ಪರೀಕ್ಷೆಗಳು ನಡೆದ ಕಾರಣ ಮತ್ತು ನವೆಂಬರ್ 1ರಿಂದ ಪದವಿ ಕಾಲೇಜುಗಳು ಆರಂಭ ವಾಗುವ ಹಿನ್ನೆಲೆಯಲ್ಲಿ ಸಂಗೀತ, ನೃತ್ಯ ಪರೀಕ್ಷೆಯನ್ನು ಶೀಘ್ರ ನಡೆಸುವಂತಾಗಲಿ ಎಂಬುದು ಪರೀಕ್ಷಾರ್ಥಿಗಳ ಆಶಯ. ಕೆಲವೆಡೆ ಭರತನಾಟ್ಯ, ಸಂಗೀತ ತರಗತಿಗಳು ಪುನರಾರಂಭಗೊಂಡಿದ್ದು ಪರೀಕ್ಷೆಗೆ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದಾರೆ. ಪರೀಕ್ಷೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ನೃತ್ಯ, ಸಂಗೀತ ಶಾಲೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರಿಗೆ ಆತಂಕ ಉಂಟಾಗಿದೆ.
ಪರೀಕ್ಷಾ ಸಿದ್ಧತೆಗಳು ಆರಂಭವಾದಾಗ ಪರೀಕ್ಷಾರ್ಥಿ ಗಳ ಮೊಬೈಲ್‌ಗೆ ಪರೀಕ್ಷಾ ಮಂಡಳಿಯಿಂದ ಎಸ್‌ಎಂಎಸ್ ಬರಲಿದೆ. ಲಭ್ಯ ಮೂಲಗಳ ಮಾಹಿತಿ ಪ್ರಕಾರ ನವೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಕುರಿತಾಗಿ ಸಚಿವರು ಹಾಗೂ ಇಲಾಖಾ ಮಟ್ಟದಲ್ಲಿ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾರ ದಲ್ಲಿ ಪರೀಕ್ಷಾ ದಿನಗಳು ನಿಗದಿಯಾಗಿ ಘೋಷಣೆಯಾಗುವ ಸಾಧ್ಯತೆಯಿದೆ. ಅರ್ಹತೆ
10 ವರ್ಷ ತುಂಬಿದವರು ಕಿರಿಯ(ಜೂನಿಯರ್) 17 ತುಂಬಿದವರು ಅಥವಾ ಕಿರಿಯ ಪರೀಕ್ಷೆ ತೇರ್ಗಡೆಯಾಗಿ ಮೂರು ವರ್ಷ ಆದವರು ಸೀನಿಯರ್ ಪರೀಕ್ಷೆ ಬರೆಯ ಬಹುದು ಅಥವಾ ಪಿಯುಸಿ ಯಲ್ಲಿ ಐಚ್ಛಿಕ ಸಂಗೀತ, ನೃತ್ಯ, ತಾಳವಾದ್ಯ ಪಠ್ಯವನ್ನು ಅಭ್ಯಸಿಸಿರ ಬೇಕು. ಅಂತಹವರಿಗೆ ಜೂನಿಯರ್ ಪರೀಕ್ಷೆ ಅಗತ್ಯವಿಲ್ಲ. ನೇರ ಸೀನಿಯರ್ ಪರೀಕ್ಷೆಗೆ ಹಾಜರಾಗ ಬಹುದು. ವಿದ್ವತ್ ಪೂರ್ವ ಪರೀಕ್ಷೆಗೆ 19 ವರ್ಷ ತುಂಬಿರ ಬೇಕು ಅಥವಾ ಸೀನಿಯರ್ ಮುಗಿಸಿ 3 ವರ್ಷಗಳಾಗಿರಬೇಕು. ಪದವಿ ತರಗತಿಯಲ್ಲಿ ಐಚ್ಛಿಕ ವಿಷಯ ವಾಗಿ ಇವುಗಳನ್ನು ಪಡೆದರೂ ನೇರ ಪರೀಕ್ಷೆಗೆ ಭಾಗಿ ಯಾಗಲು ಅವಕಾಶ ಇದೆ.
Related Articles
ಸಂಗೀತ, ನೃತ್ಯ, ತಾಳವಾದ್ಯ ಕಲೆಯ ಅಭಿವೃದ್ಧಿಯ ಜತೆಗೆ ಅದರ ಶಿಕ್ಷಕರಾಗಿ ಸರಕಾರಿ, ಖಾಸಗಿ ವಲಯದಲ್ಲಿ ನೇಮಕಾತಿ ಹೊಂದಲು ಈ ಪರೀಕ್ಷೆಗಳು ಸಹಕಾರಿ. 1929ರಿಂದ ಈ ಪರೀಕ್ಷೆಗಳು ನಡೆಯುತ್ತಿದ್ದು ಭರತನಾಟ್ಯ, ಸಂಗೀತ, ಮೃದಂಗ ಮೊದಲಾದವುಗಳಲ್ಲಿ ವಿದ್ವತ್ ಪದವಿಗಳಿಕೆಗೆ ಈ ಪರೀಕ್ಷೆ ಅನಿವಾರ್ಯ.
Advertisement
ಸಂಗೀತ, ತಾಳವಾದ್ಯ, ನೃತ್ಯ ಪರೀಕ್ಷೆಗಳು ಈ ವರ್ಷ ನಡೆಯ ಲಿದ್ದು ಕೋವಿಡ್- 19 ಕಾರಣದಿಂದ ಮುಂದೂಡಲ್ಪಟ್ಟಿತ್ತು. ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷೆ ನಡೆಯಬೇಕಿದ್ದು ಸಚಿವರ ಸೂಚನೆಯಂತೆ ಪರೀಕ್ಷಾ ದಿನಾಂಕ ವನ್ನು ಶೀಘ್ರವೇ ಘೋಷಿಸಲಾಗುವುದು.– ಪ್ರಸನ್ನ ಕುಮಾರ್ ಎಂ.ಎಸ್. ನಿರ್ದೇಶಕರು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಇತರ ಪರೀಕ್ಷೆಗಳು)