ಮುಂಬಯಿ: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಘಟಕದ ವತಿಯಿಂದ ಸಮೂಹ ಗಾಯನ ಸ್ಪರ್ಧೆ ಮತ್ತು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಮಾ. 23ರಂದು ಅಪರಾಹ್ನ 3ರಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಂಗವಾಗಿ ಜಾನಪದ ಮತ್ತು ಭಾವಗೀತೆಗಳ ಸಮೂಹ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಥಮ ಬಹುಮಾನವನ್ನು ಶ್ರೀ ವಿಠಲ ಭಜನಾ ಮಂಡಳಿ ಮೀರಾರೋಡ್ ಪಡೆದರೆ, ದ್ವಿತೀಯ ಬಹುಮಾನ ಕನ್ನಡ ಸಂಘ ಕಾಂದಿವಲಿ ಮತ್ತು ತೃತೀಯ ಬಹುಮಾನ ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಪಡೆಯಿತು. ವಿಜೇತ ತಂಡಗಳಿಗೆ ನಗದು ಮತ್ತು ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಿ ಗೌರವಿಸಿದರು.
ಸ್ಪರ್ಧೆಯಲ್ಲಿ ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಸಾನಾ³ಡ, ಶ್ರೀ ಶಕ್ತಿ ಜೆರಿಮರಿ, ಬಿಲ್ಲವ ಸೆವಾ ಸಂಘ ಕುಂದಾಪುರ, ಕುಲಾಲ ಸಂಘ ಸ್ಥಳೀಯ ಸಮಿತಿ, ಶಿವ ಪ್ರಿಯಾ ಭಜನಾ ಮಂಡಳಿ ಮೀರಾರೋಡ್, ಶ್ರೀ ಭ್ರಮಾರಂಭಿಕಾ ಮಂದಿರ ಸಾಕಿನಾಕಾ, ಕಾಂದಿವಲಿ ಕನ್ನಡ ಸಂಘ, ಗೀತಾಂಬಿಕಾ ಮಂದಿರ ಅಸಲ್ಪಾ, ಗೋಕುಲ ಮಹಿಳಾ ಮಂಡಳಿ ಸಯಾನ್, ಶ್ರೀ ವಿಟuಲ ಭಜನಾ ಮಂಡಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಕೈರಬೆಟ್ಟು ವಿದ್ವಾನ್ ವಿಶ್ವನಾಥ್ ಭಟ್ ಅವರು ಆಶೀರ್ವಚನ ನೀಡಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಸಾಕಿನಾಕಾ ಶ್ರೀ ಭ್ರಮರಾಂಬಿಕಾ ಮಂದಿರದ ನಿಲೇಶ್ ಶೆಟ್ಟಿಗಾರ್, ಕಲಾಜಗತ್ತು ವಿಜಯ ಕುಮಾರ್ ಶೆಟ್ಟಿ, ಕರ್ನಾಟಕ ಸಂಘ ಅಂಧೇರಿ ಗೌರವಾಧ್ಯಕ್ಷ ಧನಂಜಯ ಶೆಟ್ಟಿ, ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ದಿನೇಶ್ ಆರ್. ಕೆ., ಸಂಗೀತ ವಿದುಷಿ ಡಾ| ಶ್ಯಾಮಲಾ ಪ್ರಕಾಶ್, ಸಂಗೀತಗಾರ ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಅಪರಾಹ್ನ 3ರಿಂದ ಸಂಸ್ಥೆಯ ಮಕ್ಕಳಿಂದ ನೃತ್ಯ ವೈವಿಧ್ಯ, ನಾಡಗೀತೆ, ಕವಿಗೋಷ್ಠಿ, ಭಾವಗೀತೆ ಸ್ಪರ್ಧೆ, ಸಂಜೆ 6.30ರಿಂದ ವೈ. ಕೆ. ಮುದ್ದುಕೃಷ್ಣ ಮತ್ತು ವಿಶ್ವನಾಥ್ ಶೆಟ್ಟಿ ಕಾಪು ತಂಡದವರಿಂದ ಸಂಗೀತ ಕಾರ್ಯಕ್ರಮ, ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು. ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ| ಕರುಣಾಕರ ಶೆಟ್ಟಿ, ಅಮಿತಾ ಭಾಗÌತ್, ಡಾ| ಜಿ. ಪಿ. ಕುಸುಮಾ, ಅಶೋಕ್ ವಳದೂರು, ಗಂಗಾಧರ ಪಣಿಯೂರು, ಗೋಪಾ ಲ್ ತ್ರಾಸಿ, ಅಪರ್ಣಾ ರಾವ್, ಅನಿತಾ ಪೂಜಾರಿ ತಾಕೋಡೆ, ಸಾ. ದಯಾ ಮತ್ತು ಕೃಷ್ಣ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಅಧ್ಯಕ್ಷ ದಿನೇಶ್ ಆರ್. ಕೆ., ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಮೋಹನ್‌ದಾಸ್ ಶೆಟ್ಟಿ, ಸಂಚಾಲಕ ಕೃಷ್ಣ ಶೆಟ್ಟಿ ಮತ್ತು ರಾಜ್‌ಕುಮಾರ್ ಕಾರ್ನಾಡ್, ಸದಸ್ಯರುಗಳಾದ ಪ್ರಭಾಕರ ನಾಯಕ್, ಪುಷ್ಪಲತಾ ಗೌಡ, ಶಲಿತಾ ಕೊತ್ವಾಲ್, ಪ್ರತಿಮಾ ಹೆಗ್ಡೆ, ಸೌಭಾಗ್ಯ ಗೌಡ, ನಂದಾ ಸುವರ್ಣ, ರಾಜೇಂದ್ರ ರಾವ್, ಹರೀಶ್ ಪೂಜಾರಿ, ಸಲಹೆಗಾರರಾದ ಗಣೇಶ್ ಬಲ್ಯಾಯ, ವಿಜಯ ಕುಮಾರ್ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ