Advertisement
ರಾಜ್ಯ ತಂಡ “ಡಿ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಿಸಿತ್ತು. ಸೂಪರ್ ಲೀಗ್‌ನಲ್ಲಿ “ಬಿ’ ವಿಭಾಗದಲ್ಲಿರುವ ಕರ್ನಾಟಕ 4 ಪಂದ್ಯಗಳನ್ನು ಆಡಬೇಕಿದೆ. ಉಳಿದ ಎದುರಾಳಿಗಳೆಂದರೆ ವಿದರ್ಭ, ದಿಲ್ಲಿ ಮತ್ತು ಉತ್ತರಪ್ರದೇಶ. “ಎ’ ವಿಭಾಗದಲ್ಲಿ ಗುಜರಾತ್, ಝಾರ್ಖಂಡ್, ಮಹಾರಾಷ್ಟ್ರ, ಬಂಗಾಲ ಮತ್ತು ರೈಲ್ವೇಸ್. ಪ್ರತೀ ಗುಂಪಿನ ಅಗ್ರಸ್ಥಾನಿ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಲೀಗ್‌ನಲ್ಲಿ ನೀಡಿರುವ ಅಮೋಘ ಪ್ರದರ್ಶನ ಕಂಡಾಗ ಕರ್ನಾಟಕ ಬಲಿಷ್ಠ ತಂಡ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕ ಪಾಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಮ್ ಭಾರೀ ಭರವಸೆ ಮೂಡಿಸಿದ್ದಾರೆ. ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್ ಕೂಡ ತಾರಾ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅನುಭವಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್ ಈಗಾಗಲೇ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ. ಒಟ್ಟಾರೆ ರಾಜ್ಯ ತಂಡ ಸಂಘಟಿತ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿದೆ. ಆದರೆ ಟಿ20 ಪಂದ್ಯವೊಂದು ತಿರುವು ಪಡೆದುಕೊಳ್ಳಲು ಒಂದೇ ಒಂದು ಓವರ್ ಅಥವಾ ಒಬ್ಬ ಆಟಗಾರ ಸಾಕು ಎಂಬ ಎಚ್ಚರಿಕೆ ಅತ್ಯಗತ್ಯ.
Related Articles
ಸೂಪರ್ ಲೀಗ್ ಹಂತದ ಆರಂಭಕ್ಕೂ ಮೊದಲೇ ಮುಂಬಯಿ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ತಂಡದ ನಾಯಕನೂ ಪ್ರಮುಖ ಬ್ಯಾಟ್ಸ್‌ಮನ್ ಕೂಡ ಆಗಿರುವ ಅಜಿಂಕ್ಯ ರಹಾನೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಕಾಲು ನೋವಿಗೊಳಗಾಗಿದ್ದಾರೆ. ರಹಾನೆ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ.
Advertisement
ಮುಂಬಯಿ ರಣಜಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈ ಟಿ20 ಕೂಟದ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ ಲೀಗ್ ಹಂತ ಪ್ರವೇಶಿಸಿತ್ತು. ಅಯ್ಯರ್, ಸೂರ್ಯಕುಮಾರ್ ಯಾದವ್ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ ಸಾಕಷ್ಟು ಪಳಗಿದ್ದಾರೆ. ಬೌಲಿಂಗ್‌ನಲ್ಲಿ ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ ರಾಜ್ಯ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ತಂಡಗಳುಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ರೋಹನ್ ಕದಮ್, ಬಿ.ಆರ್. ಶರತ್, ಜೆ. ಸುಚಿತ್, ಶ್ರೇಯಸ್ ಗೋಪಾಲ್, ಆರ್. ವಿನಯ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ. ಕಾರಿಯಪ್ಪ, ವಿ. ಕೌಶಿಕ್, ಕೆ.ವಿ. ಸಿದ್ಧಾರ್ಥ್, ಮನೋಜ್ ಬಾಂಡಗೆ, ಲುವ್ನಿàತ್ ಸಿಸೋಡಿಯಾ. ಮುಂಬಯಿ: ಶ್ರೇಯಸ್ ಅಯ್ಯರ್ (ನಾಯಕ), ತುಷಾರ್ ದೇಶಪಾಂಡೆ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಶುಭಂ ರಂಜನೆ, ಆದಿತ್ಯ ತಾರೆ, ಶಾದೂìಲ್ ಠಾಕೂರ್, ಶಮ್ಸ್ ಮುಲಾನಿ, ಧವಳ್ ಕುಲಕರ್ಣಿ, ಆಕಾಶ್ ಪಾರ್ಕರ್, ಧ್ರುಮಿಲ್ ಮಟ್ಕರ್, ಏಕನಾಥ್ ಕೇರ್ಕರ್.