Advertisement
ರಾಜ್ಯದ ಏಕೈಕ, ದೇಶದ ಅತೀ ದೊಡ್ಡ ಗೇರು ಮ್ಯೂಸಿಯಂ ಇದಾಗಿದೆ. ಭಾರತೀಯ ಕೃಷಿ ಸಂಶೋ ಧನ ಪರಿಷತ್(ಐಸಿಎಆರ್) ಅಡಿ ಪುತ್ತೂರಿನ ಗೇರು ಸಂಶೋಧನ ನಿರ್ದೇಶನಾಲಯ(ಡಿಸಿಆರ್)ವಠಾರದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ.
Related Articles
Advertisement
ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನೆ (ಆರ್‌ಕೆವಿವೈ)ಅಡಿ ಕೇಂದ್ರ ಸರಕಾರ ರೈತ ಕಲ್ಯಾಣ ಯೋಜನೆಯಲ್ಲಿ ಪುತ್ತೂರಿನ ಡಿಸಿಆರ್‌ಗೆ 2 ಕೋಟಿ ರೂ. ಅನುದಾನ ನೀಡಿತ್ತು. ಡಿಸಿಆರ್ ಪ್ರಭಾರ ಆಡಳಿತ ನಿರ್ದೇಶಕರಾಗಿದ್ದ ಡಾ| ಎಂ.ಜಿ.ನಾಯಕ್ ಪುತ್ತೂರಿನಲ್ಲಿ ಗೇರು ಮ್ಯೂಸಿಯಂ ತೆರೆಯುವ ಯೋಜನೆ ರೂಪಿಸಿದರು. ಅದರಂತೆ 60 ಲಕ್ಷ ರೂ.ವೆಚ್ಚದಲ್ಲಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಗೇರು ಹಣ್ಣಿನಿಂದ ತಯಾರಿಸುವ ಜ್ಯೂಸ್, ಜಾಮ್, ಜೆಲ್ಲಿ, ಉಪ್ಪಿನಕಾಯಿ, ವೈನ್ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ, ಗೇರು ಹಣ್ಣಿ ನಿಂದ ತಯಾರಿಸುವ ಚ್ಯವನ್‌ಪ್ರಾಶ್, ಬೇಬಿ ಪೌಡರ್‌ನ ಬಗ್ಗೆ ಮಾಹಿತಿ ಇದೆ. ಗೋಡಂಬಿಯಲ್ಲಿರುವ ವಿಟಮಿನ್, ಪೋಷಕಾಂಶ, ಹಣ್ಣಿನಲ್ಲಿರುವ ಅಂಶಗಳ ಅನಾವರಣವು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.
ಪುತ್ತೂರಿನ ಡಿಸಿಆರ್ ಸಾಧನೆ
ಗೇರು ಸಂಶೋಧನೆ ನೆಲೆಯಲ್ಲಿ ಸ್ಥಾಪಿಸ ಲಾದ ಪುತ್ತೂರಿನ ಡಿಸಿಆರ್ 3 ದಶಕಗಳಿಂದ ಗೇರು ಕೃಷಿಯ ಬೆಳವಣಿಗೆಯ ನಿಟ್ಟಿನಲ್ಲಿ ಹತ್ತಾರು ಪ್ರಯೋಗ ಒಡ್ಡಿ ಯಶ ಕಂಡಿದೆ. ಅವುಗಳ ಸಾಲಿನಲ್ಲಿ ಈ ಮ್ಯೂಸಿಯಂ ಕೂಡ ಒಂದಾಗಿದೆ. ಈ ಮಾದರಿಯ ಸಮಗ್ರ ವಸ್ತು ಸಂಗ್ರಹಾಲಯ ಐಸಿಎಆರ್ ಅಡಿಯ ಸಂಸ್ಥೆಗಳಲ್ಲೇ ವಿಶಿಷ್ಟವಾದದು ಎಂದು ಗುರುತಿಸಲಾಗಿದೆ. ದಿಲ್ಲಿಯಲ್ಲಿ ಇಂಥದೇ ಒಂದು ಮ್ಯೂಸಿಯಂ ಇದೆ ಯಾದರೂ, ಸಮಗ್ರತೆ ದೃಷ್ಟಿಯಿಂದ ಪುತ್ತೂರಿನ ಮ್ಯೂಸಿಯಂ ವಿಶಾಲವಾಗಿದೆ.
ಸಮಗ್ರ ಚಿತ್ರಣ
ಗೇರು ಬೆಳೆ ಭಾರತಕ್ಕೆ ಬಂದ ರೀತಿ, ಬೆಳೆದ ರೀತಿ, ವೈಜ್ಞಾನಿಕ ಬೆಳವಣಿಗೆ, ಮಾರುಕಟ್ಟೆ, ತಳಿ ವೈವಿಧ್ಯತೆ, ಬೇಸಾಯ ಕ್ರಮ, ಹೊಸ ತಳಿ, ಹಣ್ಣಿನ ಮೌಲ್ಯ ವರ್ಧನೆ ಹೀಗೆ ವಿವಿಧ ಗೇರು ಕೃಷಿಯ ಸಮಗ್ರ ಚಿತ್ರಣವನ್ನು ಮ್ಯೂಸಿಯಂನಲ್ಲಿ ತೆರೆದಿಡಲಾಗಿದೆ. -ಡಾ| ದಿನಕರ ಅಡಿಗ, ಪ್ರಧಾನ ವಿಜ್ಞಾನಿ, ಪುತ್ತೂರು ಡಿಸಿಆರ್