ಶಿರ್ವ: ಮಸ್ಕತ್‌ನ ವಿಶ್ವಬ್ರಾಹ್ಮಣ ಒಕ್ಕೂಟದ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಒಕ್ಕೂಟದ ಅಧ್ಯಕ್ಷ ರವೀಂದ್ರ ಆಚಾರ್ಯ ಕಳತ್ತೂರು ಅವರ ಅಧ್ಯಕ್ಷತೆಯಲ್ಲಿ ಮಸ್ಕತ್‌ನ ಸೆಂಟ್ರಲ್ ಬ್ಲಿಡ್ ಬ್ಯಾಂಕ್‌ನ ಆವರಣದಲ್ಲಿ ನಡೆಯಿತು.
ಡಾ| ರಾಜೇಶ್ ಆಚಾರ್ಯ ಪೆರ್ಡೂರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನವು ಮಹಾದಾನವಾಗಿದ್ದು, ಅಶಕ್ತ ರೋಗಿಗಳ ಜೀವವನ್ನು ಉಳಿಸುವಲ್ಲಿ ಸಹಕಾರಿಯಾಗಿದೆ. ಪರವೂರಿನಲ್ಲಿದ್ದರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಒಕ್ಕೂಟದ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ವಿಶ್ವಬ್ರಾಹ್ಮಣ ಒಕ್ಕೂಟದ ಸ್ಥಾಪಕ ಸದಸ್ಯ ಸೀತಾರಾಮ ಆಚಾರ್ಯ ರಕ್ತದಾನದ ಮಹತ್ವ ತಿಳಿಸಿದರು.
ಓಮಾನ್ ತುಳುವೆರ್ ತಂಡದ ರಮಾನಂದ ಶೆಟ್ಟಿ,ಇಸ್ಸಾಕೋ ಗ್ರೂಪ್‌ನ ಲೀಮಾ, ಓಮಾನ್ ಬಿಲ್ಲವಾಸ್‌ನ ಅಧ್ಯಕ್ಷ ಸುಜಿತ್ ಅಂಚನ್,ಮಸ್ಕತ್ ಮೊಗವೀರ ಕೂಟದ ಅಧ್ಯಕ್ಷ ಪದ್ಮಾಕರ ಮೆಂಡನ್, ಕನ್ನಡ ಸಂಘದ ಹಿತೇಶ್ ಮಂಗಳೂರು,ಬಿರುವ ಜವನೆರ್ ಗ್ರೂಪ್‌ನ ಗುರುಪ್ರಸಾದ್ ಪಾಲ್ಗೊಂಡು ಶುಭ ಹಾರೈಸಿದರು.
ವಿಶ್ವಬ್ರಾಹ್ಮಣ ಒಕ್ಕೂಟದ ಸದಸ್ಯರು, ಶಿಬಿರದ ಸಂಘಟನಾ ಸಮಿತಿಯ ಸದಸ್ಯರು,ಸ್ವಯಂಸೇವಕರು, ಮಹಿಳಾ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ 70ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.ರಕ್ತದಾನಿಗಳಿಗೆ ಒಕ್ಕೂಟದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.