Advertisement

ಸಹಕಾರಿ ಕ್ಷೇತ್ರಕ್ಕೆ ಮುರುಗೇಶ ಕೊಡುಗೆ ಸ್ಮರಣೀಯ

01:44 PM Aug 10, 2020 | Suhan S |

ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕರಾಗಿದ್ದ ಹಿರಿಯ ಸಹಕಾರಿ ಧುರೀಣ ಮರುಗೇಶ ಚನ್ನಮಲ್ಲಪ್ಪ ಹೆಬ್ಟಾಳ ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಶಾಸಕ ಶಿವನಂದ ಪಾಟೀಲ ಹೇಳಿದರು.

Advertisement

ನಗರದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಆಡಳಿತ ಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಮುರುಗೇಶ ಹೆಬ್ಟಾಳ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಕುಟುಂಬದ ಹಿನ್ನೆಲೆಯ ಮುರುಗೇಶ ಅವರು ಸಮಾಜ ಸೇವೆ ಜೊತೆಗೆ ಶಿಕ್ಷಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೊಳಸಂಗಿಯಂಥ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದ ಅವರು ಗ್ರಾಮೀಣ ಜನರ ಶ್ರೇಯಸ್ಸಿಗೆ ಹಂಬಲಿಸುತ್ತಿದ್ದರು. ಇವರ ಅಕಾಲಿಕ ಅಗಲಿಕೆಯಿಂದ ಸಹಕಾರ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಗೊಳಸಂಗಿ ಗ್ರಾಮದಲ್ಲಿ ಶಿಕ್ಷಣ ಹಾಗೂ ಸಹಕಾರ ರಂಗದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದ ಅವರು, ತಮ್ಮ ನಿಸ್ವಾರ್ಥ ಸೇವೆಯಿಂದಲೇ ಜನ ಮನದಲ್ಲಿ ಮನೆ ಮಾಡಿದ್ದರು. ಸ್ಥಳೀಯ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಅವರ ಅಗಲಿಕೆ ಸಹಕಾರ ರಂಗ ಓರ್ವ ನಿಷ್ಠಾವಂತ, ಪ್ರಾಮಾಣಿಕ ಸಹಕಾರಿ ಧುರೀಣನನ್ನು ಕಳೆದುಕೊಂಡು ಜಿಲ್ಲೆಯ ಸಹಕಾರಿ ರಂಗ ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಬ್ಯಾಂಕ್‌ನ ಶ್ರೇಯೋಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬ್ಯಾಂಕ್‌ನ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದರು. ನಮ್ಮ ಬ್ಯಾಂಕ್‌ ಮಾಜಿ ನಿರ್ದೇಶಕ ಎಚ್‌.ಎಸ್‌. ಹೊಟಗಿ, ವ್ಯವಸ್ಥಾಪಕ ಎಸ್‌.ಕೆ. ಕಲಾದಗಿ, ನಿವೃತ್ತ ಅಧಿಕಾರಿಗಳಾದ ಎಸ್‌.ಬಿ.ಪಾರಶೆಟ್ಟಿ, ಎಸ್‌.ಜಿ. ಪಾಟೀಲ ಅವರ ಸೇವೆಯೂ ಸ್ಮರಣೀಯ ಎಂದರು.

ಸಹಕಾರ ರಂಗದ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ಸಹಕಾರ ಉದ್ದಿಮೆ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿ ನಮ್ಮನ್ನು ಅಗಲಿದ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಕೆ.ಎ. ಅಜೀಜ್‌, ಪಿ.ಎಂ.ಮಕಾನದಾರ, ಎಸ್‌.ಎಸ್‌. ಹಳ್ಳಿ, ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಸೇವೆಯೂ ಸಹ ಬ್ಯಾಂಕಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಶ್ರೀಯುತರುಗಳ ಅಗಲಿಕೆಯಿಂದ ಉಂಟಾದ ದುಃಖವನ್ನು ಅವರ ಕುಟುಂಬಕ್ಕೆ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಮಸ್ತ ಅಧಿ ಕಾರಿ-ಸಿಬ್ಬಂದಿ ವರ್ಗದವರು 2 ನಿಮಿಷ ಮೌನ ಆಚರಿಸಿ ಪ್ರಾರ್ಥಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಆಡಳಿತ ಮಂಡಳಿ ನಿರ್ದೇಶಕರಾದ ಗುರುಶಾಂತ ನಿಡೋಣಿ, ಸುರೇಶಗೌಡ ಬಿರಾದಾರ, ಸಂಯುಕ್ತಾ ಪಾಟೀಲ, ಕಲ್ಲನಗೌಡ ಪಾಟೀಲ, ಎಂ.ಜಿ. ಪಾಟೀಲ, ಪಿ.ಬಿ. ಕಾಳಗಿ ಸೇರಿದಂತೆ ಸಹಕಾರಿ ರಂಗದ ಧುರೀಣರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next