ಹುಬ್ಬಳ್ಳಿ: ಸಿದ್ದರಾಮಯ್ಯ ಜಾತಿ ಕಾರಣಕ್ಕೆ ಬಾದಾಮಿಗೆ ಬಂದರು. ಒಬ್ಬ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿಗೆ ಈಗ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ ಎಂದರೇ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಚಿವ ಮುರಗೇಶ ನಿರಾಣಿ ವ್ಯಂಗ್ಯವಾಡಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು. ಅಲ್ಲಿಂದ ಜಾತಿ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಬಂದಿದ್ದರು. ಈಗ ಅಲ್ಲಿ ಸೋಲುತ್ತೇನೆ ಎನ್ನುವ ಕಾರಣದಿಂದ ಕೋಲಾರಗೆ ಹೋಗುವ ಪ್ರಯತ್ನ ಮಾಡಿದರು. ಕೋಲಾರದಲ್ಲಿ ಸರ್ವೆ ಮಾಡಿಸಿದ ನಂತರ ಅತೀ ಹೆಚ್ಚು ಮತಗಳ ಅಂತದಿಂದ ಸೋಲಿತ್ತಾರೆ ಅನ್ನುವುದು ಗೊತ್ತಾಗಿದೆ. ಇವತ್ತು ಹೆಸರಿಗೆ ಮಾತ್ರ ವರುಣಾ ಎನ್ನುತ್ತಿದ್ದಾರೆ. ಆದರೆ ಬೇರೆ ಬೇರೆ ಕ್ಷೇತ್ರ ಹುಡುಕಾಡುತ್ತಿದ್ದಾರೆ ಎಂದರು.
ಒಬ್ಬ ಮುಖ್ಯಮಂತ್ರಿ ಆಗಿ ಕೆಲಸದ ಮಾಡಿದವರಿಗೆ ಕ್ಷೇತ್ರ ಇಲ್ಲ ಅಂದರೆ ಹೇಗೆ.? ಅಪಾರ ಅನುಭವ ಇರುವ ಸಿದ್ದರಾಮಯ್ಯನವರಿಗೆ ಕ್ಷೇತ್ರ ಇಲ್ಲ. ಅವರು ಮತ್ತೊಬ್ಬರನ್ನು ಗೆಲ್ಲಿಸಿ ಹೇಗೆ ಅಧಿಕಾರಕ್ಕೆ ತರುತ್ತಾರೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ನವರು ಘೋಷಣೆ ಮಾಡಿರುವ ಗ್ಯಾರಂಟಿ ಯಾವುದು ಆಗಲ್ಲ. ನಮ್ಮ ಸರ್ಕಾರ ಏನು ಹೇಳುತ್ತದೆ ಅದನ್ನು ಮಾಡುತ್ತದೆ. ಕಾಂಗ್ರೆಸ್ ಹಾಗಲ್ಲ ಬೇರೆಯವರು ಕೊಟ್ಟಿರೋದಕ್ಕೆ ಲೇಬಲ್ ಹಚ್ಚುತ್ತಾರೆ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 140ಕ್ಜೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಜನ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರಾಗಿದ್ದಾರೆ. ನಮ್ಮ ದೇಶದ ಸಮಸ್ಯೆ ಇಲ್ಲಿ ಮಾತಾಡಬೇಕು. ಆದರೆ ಅವರು ಬೇರೆ ದೇಶದಲ್ಲಿ ಮಾತನಾಡುತ್ತಾರೆ. ಅಂದರೆ ಅವರ ಬದ್ದತೆ ಏನು. ಅವರಿಗೆ ದೇಶದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.