Advertisement
ಕೋಲ್ಕತಾದ ಶಾಲೆಯೊಂದಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ನಡೆಸುತ್ತಿದ್ದು, ಹ್ಯಾಕರ್‌ಗಳು ಇ-ಕ್ಲಾಸ್‌ಗೆ ನುಗ್ಗಿ ಕಿರುಕುಳ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಕುಗ್ಗಿ ಹೋಗಿದ್ದಾರೆ. ಪಾಸ್‌ವರ್ಡ್ ಕದ್ದು ಇ-ಕ್ಲಾಸ್ ಪ್ರವೇಶಿಸಿರುವ ದುಷ್ಕರ್ಮಿಗಳು, ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ನಿಂದಿಸುವುದರ ಜೊತೆಗೆ ಅತ್ಯಾಚಾರ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಘಟನೆಯನ್ನು ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರ ಗಮನಕ್ಕೆ ತಂದ ಬಳಿಕ ಆನ್‌ಲೈನ್ ಕ್ಲಾಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆ ಆಡಳಿತ ಮಂಡಳಿಯು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿರುವ ಕಾರಣ ಹ್ಯಾಕರ್‌ಗಳು ಆನ್‌ಲೈನ್ ಕ್ಲಾಸ್‌ಗೆ ನುಗ್ಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಆನ್‌ಲೈನ್ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಅಸ್ಸಾಂ ಜಿಲ್ಲೆಯಲ್ಲಿ ಚಿರಾಂಗ್ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮ ಹತ್ಯೆಗೆ ಶರಣನಾಗಿದ್ದಾನೆ. ಮನೆಯಲ್ಲಿ ಬಡತನ ಇದ್ದ ಕಾರಣ ಇ-ಕ್ಲಾಸ್‌ಗೆ ಬೇಕಾದ ಸ್ಮಾರ್ಟ್‌ಫೋನ್ ಕೊಡಿಸಿರಲಿಲ್ಲ. ಹೀಗಾಗಿ ಆತ ಇ-ಕ್ಲಾಸ್‌ಗೆ ಹಾಜರಾಗುತ್ತಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಾಕ್‌ಡೌನ್‌ನಿಂದ ತಂದೆಗೆ ಕೆಲಸವಿರಲಿಲ್ಲ, ತಾಯಿ ಕೆಲಸ ಹುಡುಕಲು ಬೆಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಕೇರಳದಲ್ಲಿ ಇದೇ ಕಾರಣಕ್ಕಾಗಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿ ಆತ್ಮಹತ್ಯೆ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ 12 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಕ್ಲಾಸ್ ಹಾಗೂ ಮನೆಗೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.