Advertisement

ಹತ್ಯೆ ಪ್ರಕರಣ: ಮಾಹಿತಿ ಪಡೆದ ಕೇರಳ ಗವರ್ನರ್‌

08:25 AM Jul 31, 2017 | Team Udayavani |

ಹೊಸದಿಲ್ಲಿ /ತಿರುವನಂತಪುರ:  ಕೇರಳದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ರಾಜ್ಯಪಾಲ ನ್ಯಾ| ಪಿ.ಸದಾಶಿವಂ ಮಧ್ಯಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹಾರ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೂಡ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆಯಲಾಗಿದೆ. 

Advertisement

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸಿಎಂ ವಿಜಯನ್‌ಗೆ ಫೋನ್‌ ಮಾಡಿ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ ಸಹಿತ ಕೇರಳದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪ್ರಜಾ ಪ್ರಭುತ್ವ ವ್ಯವಸ್ಥೆಯಡಿ ಹಿಂಸೆಗೆ ಅವಕಾಶ ಇಲ್ಲ. ಕೇರಳದಲ್ಲಿನ ರಾಜಕೀಯ ಹಿಂಸಾಚಾರಗಳನ್ನು ನಿರ್ದಾಕ್ಷಿಣ್ಯ ವಾಗಿ ಹತ್ತಿಕ್ಕುವ ಕ್ರಮಗಳನ್ನು ಸರಕಾರದಿಂದ ನಿರೀಕ್ಷಿಸುವುದಾಗಿ ವಿಜಯನ್‌ಗೆ ಹೇಳಿರುವುದಾಗಿ’ ರಾಜನಾಥ್‌ ಟ್ವೀಟ್‌ ಮಾಡಿದ್ದಾರೆ. 

ತನಿಖೆ ನಡೆಯುತ್ತಿದೆ: ಘಟನೆ ಬಗ್ಗೆ ವಿವರಣೆ ನೀಡಿರುವ ತಿರುವನಂತಪುರ ಪೊಲೀಸ್‌ ಆಯುಕ್ತ ಜಿ.ಸ್ಪರ್ಜನ್‌ ಕುಮಾರ್‌ ಐವರನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಒಬ್ಬ ರೌಡಿ ಶೀಟರ್‌ ಕೂಡ ಸೇರಿದ್ದಾನೆ. ಪೊಲೀಸರಿಂದ ತನಿಖೆ ಮುಂದುವರಿದಿದೆ. ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ವದಂತಿ ಹಬ್ಬಿಸಬಾರದು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಅಂಥ ಬೆಳವಣಿಗೆಗಳು ಕಂಡು ಬಂದಲ್ಲಿ ಕಠಿನ ಕ್ರಮ ಕೈಗೊಳ್ಳಲಾತ್ತದೆ ಎಂದು ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹಾರ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಘಟನೆ ಖಂಡಿಸಿ ಬಿಜೆಪಿ ದಿನದ ಬಂದ್‌ಗೆ ಕರೆ ನೀಡಿತ್ತು. ಕಲ್ಲೆಸೆತ, ಘರ್ಷಣೆಗಳು ನಡೆದಿವೆ. ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆಗೆ ಯಾವುದೇ ರಾಜಕೀಯ ನಂಟು ಇಲ್ಲವೆಂದು ಸಿಪಿಎಂ ಕೇರಳ ಘಟಕ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next