Advertisement
8.08 ಮೀಟರ್ ಜಂಪ್ ಮಾಡಿದ ಮುರಳಿ ಶ್ರೀಶಂಕರ್ ಮೊದಲ ಬಾರಿಗೆ ಕಾಮನ್ವೆಲ್ತ್ ಪದಕ ಗೆದ್ದರು. ಮುರಳಿ ಶ್ರೀಶಂಕರ್ ಗೆ ಚಿನ್ನ ಗೆಲ್ಲುವ ಅವಕಾಶವಿತ್ತು. ಚಿನ್ನದ ಪದಕ ಗೆದ್ದ ಬಹಾಮಾಸ್ ನ ಲಕ್ವಾನ್ ನಾಯರ್ನ್ ಕೂಡಾ 8.08 ಮೀಟರ್ ಜಂಪ್ ಮಾಡಿದ್ದರು. ನಿಯಮದ ಪ್ರಕಾರ ಇಬ್ಬರ ಬೆಸ್ಟ್ ಜಂಪ್ ಟೈ ಆದರೆ ಅವರ ಸೆಕೆಂಡ್ ಬೆಸ್ಟ್ ಜಂಪ್ ಆಧಾರದಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ ಮುರಳಿ ಶ್ರೀಶಂಕರ್ ಅವರ ಸೆಕೆಂಡ್ ಬೆಸ್ಟ್ ಜಂಪ್ 7.84 ಆಗಿದ್ದರೆ, ಲಕ್ವಾನ್ ನಾಯರ್ನ್ ಅವರು 7.98 ಮೀ ಜಿಗಿದಿದ್ದರು. ಹೀಗಾಗಿ ಅವರಿಗೆ ಸ್ವರ್ಣ ಪದಕ ಪ್ರಾಪ್ತವಾಯಿತು.
Related Articles
Advertisement
ಮಹಿಳೆಯರಲ್ಲಿ ಪ್ರಜೂಷಾ ಮಲಿಯಕ್ಕಲ್ 2010ರಲ್ಲಿ ದೆಹಲಿಯಲ್ಲಿ ಬೆಳ್ಳಿ ಗೆದ್ದರೆ, 2002ರಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.