Advertisement

ಟಿ20 ತಂಡಕ್ಕೆ ವಾಪಸಾದ ಮುನ್ರೊ

06:30 AM Jan 30, 2018 | Team Udayavani |

ವೆಲ್ಲಿಂಗ್ಟನ್‌: ಆಸ್ಟ್ರೇಲಿಯ, ಇಂಗ್ಲೆಂಡ್‌ ತಂಡಗಳನ್ನೊಳಗೊಂಡ ಟಿ20 ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ನ್ಯೂಜಿಲ್ಯಾಂಡ್‌ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್‌ ಕಾಲಿನ್‌ ಮುನ್ರೊ ಅವರನ್ನು ಸೇರಿಸಿಕೊಳ್ಳಲಾಗಿದೆ. ಪಾಕಿಸ್ಥಾನ ವಿರುದ್ಧದ ಟಿ20 ಸರಣಿ ವೇಳೆ ಮುನ್ರೊ ಸ್ನಾಯು ಸೆಳೆತಕ್ಕೆ ಒಳಗಾಗಿ ಹೊರಗುಳಿದಿದ್ದರು. ಫೆ. 3ರಿಂದ ಟಿ20 ಸರಣಿ ಆರಂಭವಾಗಲಿದೆ.

Advertisement

ನ್ಯೂಜಿಲ್ಯಾಂಡ್‌ ತಂಡದಿಂದ ಲಾಕಿ ಫ‌ರ್ಗ್ಯುಸನ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಅವರನ್ನು ಕೈಬಿಡಲಾಗಿದೆ. ಫಿಲಿಪ್ಸ್‌ ಗೈರಲ್ಲಿ ಬ್ಲಿಂಡೆಲ್‌ ಕೀಪಿಂಗ್‌ ನಡೆಸಲಿದ್ದಾರೆ.

ಟಿ20 ಸರಣಿಯ ಆರಂಭಿಕ ಪಂದ್ಯ ಫೆ. 3ರಂದು ಸಿಡ್ನಿಯಲ್ಲಿ ನಡೆಯಲಿದೆ. ನ್ಯೂಜಿಲ್ಯಾಂಡಿನ ಉಳಿದ ಪಂದ್ಯಗಳು ತವರಿನಲ್ಲಿ ನಡೆಯಲಿವೆ.

ನ್ಯೂಜಿಲ್ಯಾಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಿಂಡೆಲ್‌, ಟ್ರೆಂಟ್‌ ಬೌಲ್ಟ್, ಟಾಮ್‌ ಬ್ರೂಸ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗಪ್ಟಿಲ್‌, ಅನರು ಕಿಚನ್‌, ಕಾಲಿನ್‌ ಮುನ್ರೊ, ಸೇತ್‌ ರಾನ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಟಿಮ್‌ ಸೌಥಿ, ರಾಸ್‌ ಟಯ್ಲರ್‌, ಬೆನ್‌ ವೀಲರ್‌.

Advertisement

Udayavani is now on Telegram. Click here to join our channel and stay updated with the latest news.

Next