Advertisement

ಇಂಧನ ಬೆಲೆ ನಿಯಂತ್ರಣಕ್ಕೆ ಆಗ್ರಹ !ಕೋಲಾರದಲ್ಲಿ ಮುನಿಯಪ್ಪ ನೇತೃತ್ವದಲ್ಲಿ ಪ್ರತಿಭಟನೆ

04:32 PM Feb 18, 2021 | Team Udayavani |

ಕೋಲಾರ: ದಿನ ನಿತ್ಯ ಹೆಚ್ಚಳವಾಗುತ್ತಿರುವ ಪೆಟ್ರೋಲ್‌ ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆಗಳನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ನಗರದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿತ್ತು.

Advertisement

ನಗರದ ಗಾಂ ಧಿವನದಿಂದ ಆರಂಭವಾದ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ  ವಿರೋ ಧಿ ನೀತಿ, ಪೆಟ್ರೋಲ್‌, ಡೀಸೆಲ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಲಾಯಿತು.

ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಕಾಂಗ್ರೆಸ್‌ ಮುಖಂಡರು ಮತ್ತು  ಕಾರ್ಯಕರ್ತರು, ಘೋಷಣೆ ಕೂಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಮೆರವಣಿಗೆಯಲ್ಲಿಯೇ ತಾಲೂಕು ಕಚೇರಿ ಆವರಣಕ್ಕೆ ಕಾರ್ಯಕರ್ತರೆಲ್ಲರೂ ಜಮಾಯಿಸಿದರು. ನಂತರ ತಹಶೀಲ್ದಾರ್‌ ಶೋಭಿತಾ ಮೂಲಕ ರಾಷ್ಟ್ರಪತಿಗಳಿಗೆ ಪ್ರತಿಭಟನೆ ನೇತೃತ್ವ ವಹಿಸಿ ಮಾಜಿ ಕೇಂದ್ರ  ಸಚಿವ ಕೆ.ಎಚ್‌.ಮುನಿಯಪ್ಪ ಮನವಿ ಸಲ್ಲಿಸಿದರು.

ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ಬೆಲೆ ದಿನೇ ದಿನೆ ಹೆಚ್ಚಳ ‌ವಾಗುತ್ತಿದ್ದು, ಬಡವರು, ಮಧ್ಯಮ  ವರ್ಗದವರು ಕಂಗಾಲಾಗಿದ್ದಾರೆ. ಮೋದಿ ಸರ್ಕಾರ ಜನಸಾಮಾನ್ಯರ ಹಿತವನ್ನು ಕಡೆಗಣಿಸಿದೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಕಾಯ್ದೆಗಳಿಂದ ರೈತರು ಹಾಗೂ  ಕಾರ್ಮಿಕರು, ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದು, ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಸದಾ ಅವರೊಡನೆ ಇರುತ್ತೇವೆ ಎಂದರು.

Advertisement

ಜಿಲ್ಲಾ ಕಾಂಗ್ರೆಸ್‌ ವಕ್ತಾರರುಗಳಾದ ಎಲ್‌.ಎ ಮಂಜುನಾಥ್‌,  ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸಾದ್‌ ಬಾಬು, ಉದಯ್‌ ಶಂಕರ್‌, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌, ಕೆಪಿಸಿಸಿ ಸದಸ್ಯ ಕುಮಾರ್‌, ಒ.ಬಿ.ಸಿ.ಮಂಜುನಾಥ್‌, ಕೋಚಿಮುಲ್‌ ನಿರ್ದೇಶಕ ವಡಗೂರು ಹರೀಶ್‌, ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next