ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆ ಆಡಳಿತ ಮಂಡಳಿಗೆ 2 ವರ್ಷಬಳಿಕಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನವು ಬಿಸಿಎಂ ಎ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.
2015ರಲ್ಲಿ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 15ವಾರ್ಡ್ ನಿಂದ 23 ವಾರ್ಡ್‌ಗಳಾಗಿ ವಿಂಗಡಿಸಿ, ವಿಸ್ತರಿಸಲಾಗಿತ್ತು. 23 ಸದಸ್ಯತ್ವ ಬಲದ ಪುರಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್-14, ಕಾಂಗ್ರೆಸ್-8 ಹಾಗೂ ಪಕ್ಷೇತರರು ಒಂದು ಸ್ಥಾನ ಪಡೆದಿದ್ದರು. 14 ಸ್ಥಾನ ಪಡೆದಿರುವ ಜೆಡಿಎಸ್‌ಗೆ ಸ್ಪಷ್ಟಬಹುಮತ ಇರುವುದರಿಂದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಪುರಸಭೆ ಅಧ್ಯಕ್ಷ ಮತ್ತುಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಗೆದ್ದಿರುವ ಎಲ್ಲಸದಸ್ಯರೂ ಅಕಾಂಕ್ಷಿಗಳಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಪಿರಿಯಾಪಟ್ಟಣ ಪುರಸಭೆ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಗೆ ಮೀಸಲಾಗಿದೆ. ಇದರಲ್ಲಿ ರಜಪೂತ, ಈಡಿಗ, ಉಪ್ಪಾರ, ಮುಸ್ಲಿಂ ಸಮುದಾಯದ ತಲಾ ಇಬ್ಬರು ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಒಟ್ಟು 8 ಅಭ್ಯರ್ಥಿಗಳ ನಡುವೆ ಅಧ್ಯಕ್ಷ ಗದ್ದುಗೆಗೆ ಪ್ರಬಲ ಪೈಪೋಟಿ ನಡೆದಿದೆ. ಈ ಪೈಕಿ ಜೆಡಿಎಸ್‌ನಿಂದ3 ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ರಜಪೂತ ಸಮುದಾಯದ ಮಂಜುನಾಥ್ ಸಿಂಗ್‌ಹಿರಿತನದ ಆಧಾರದ ಮೇಲೆ ಅವಕಾಶ ನೀಡು ವಂತೆ ಪಕ್ಷದ ವರಿಷ್ಠರಲ್ಲಿ ಒತ್ತಡ ಹೇರುತ್ತಿದ್ದಾರೆ. ಈಡಿಗ ಸಮುದಯದ ಸದ್ಯರಾದ ಕೆ.ಮಹೇಶ್, ನಾಗರತ್ನ, ಉಪ್ಪಾರ ಸಮಾಜದ ಪುಷ್ಪಲತಾ ಮತ್ತು ಆಶಾ, ರಜಪೂತ ಸಮುದಾಯದ ಪ್ರಕಾಶ್ ಸಿಂಗ್, ಮುಸ್ಲಿಂ ಸಮುದಾಯದ ರುಹಿಲ್ಲಾ ಖಾನ್, ನೂರ್ಜಹಾನ್ ಸಹ ಆಕಾಂಕ್ಷಿಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಪುರಸಭೆ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, 8 ಜೆಡಿಎಸ್ ಮಹಿಳಾ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಲಿಂಗಾಯಿತ ಸಮುದಾಯದ ಶ್ವೇತಾಕುಮಾರ್, ಉಪ್ಪಾರ ಜನಾಂಗದ ಪುಷ್ಪಲತಾ ಮತ್ತು ಆಶಾ, ಈಡಿಗ ಸಮುದಾಯದ ನಾಗರತ್ನ, ನಾಯಕ ಜನಾಂಗದ ಭಾರತಿ, ಸುವರ್ಣ, ಮುಸ್ಲಿಂ ಸಮುದಾಯದ ರುಹಿಲ್ಲಾ ಖಾನ್, ನೂರ್ಜಹಾನ್ ತಮಗೆ ಉಪಾಧ್ಯಕ್ಷ ಸ್ಥಾನ ನೀಡುವಂತೆ ಜೆಡಿಎಸ್ ಮುಖಂಡರ ಮನವೊಲಿಸುವಲ್ಲಿ ನಿರತರಾಗಿದ್ದಾರೆ.
ಶಾಸಕ ಮಹದೇವ್ ತೀರ್ಮಾನ ಅಂತಿಮ : ನಿಚ್ಚಳಬ ಹುಮತವಿರುವ ಜೆಡಿಎಸ್ ಪಕ್ಷಕ್ಕೆ ಚೊಚ್ಚಲ ಪುರಸಭೆ ಅಧಿಕಾರ ದೊರಲಿದೆ.ಆದರೆ, ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳಾ ಗಿರುವುದುಜೆಡಿಎಸ್ ಮುಖಂಡರಲ್ಲಿ ತಲೆ ನೋವಾಗಿ ಪರಿಣಮಿಸಿದೆ. ಜೆಡಿಎಸ್ ಶಾಸಕರಾ ಗಿರುವಕೆ.ಮಹದೇವ್ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿದ್ದು, ಅವರ ಮನವೊಲಿಸಲು ಸದಸ್ಯರು ತಮ್ಮದೇಆದ ಕಾರ್ಯತಂತ್ರಹೆಣೆಯು ತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಸಿಂಗ್‌ಹಾಗೂ ಕೆ.ಮಹೇಶ್ ಇಬ್ಬರಲ್ಲಿಒಬ್ಬರುಆಯ್ಕೆಯಾಗುವ ಸಂಭವಇದೆ. ಶಾಸಕರ ಕೃಪಾಕಟಾಕ್ಷಯಾರಿಗೆ ಇದೆ ಎಂಬುದನ್ನು ಕಾದು ನೋಡಬೇಕಿದೆ.
– ಪಿ.ಎನ್. ದೇವೇಗೌಡ