ಯಾದಗಿರಿ : ಜಿಲ್ಲೆಯ ಗುರುಮಠಕಲ್ ಪುರಸಭೆಯಿಂದ ಚರಂಡಿ ನಿರ್ಮಾಣಕ್ಕೆಂದು ಮುಖ್ಯ ರಸ್ತೆಯ ಮಧ್ಯ ತೋಡಿದ ಗುಂಡಿಗೆ ದ್ವಿಚಕ್ರ ಸವಾರ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.
ನಾರಾಯಣಪೇಟ ಮೂಲದ ವ್ಯಕ್ತಿ ದ್ವಿಚಕ್ರ ವಾಹನದ ಮೇಲೆ ಬಸ್ ನಿಲ್ದಾಣದ ಮಾರ್ಗಕ್ಕೆ ತೆರಳುತ್ತಿದ್ದ ಸಿಹಿನೀರಿನ ಬಾವಿಯ ಬಳಿ ಚರಂಡಿ ದುರಸ್ತಿಗೆ ಪುರಸಭೆ ಮುಖ್ಯ ರಸ್ತೆಯಲ್ಲೇ ಗುಂಡಿ ತೋಡಿದ್ದು, ಸುಮಾರು ಒಂದು ವಾರ ಕಳೆದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ.
ರಸ್ತೆ ಮಧ್ಯೆ ಪೊಲೀಸ್ ಬ್ಯಾರಿಕೇಡ್ ಇಡಲಾಗಿದ್ದು ಗುಂಡಿ ತೋಡಿರುವ ಅಕ್ಕ ಪಕ್ಕ ಎಚ್ಚರಿಕೆ ಫಲಕ ಅಳವಡಿಸಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗುಡ್ ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಎರಡು ವರ್ಷದ ಮಗು! ಅಪಾಯದಿಂದ ಪಾರು
ಎಚ್ಚರಿಕೆ ಫಲಕ ಇಲ್ಲದಿರುವುದು ಘಟನೆಗೆ ಕಾರಣ ಎನ್ನಲಾಗಿದ್ದು ಅಧಿಕಾರಿಗಳು ಅಮಾಯಕರ ಪ್ರಾಣಕ್ಕೆ ಕುತ್ತು ಬರುವ ಮುನ್ನವೇ ಎಚ್ಚೆತ್ತು, ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.