Advertisement
ತಮ್ಮ ವಾರ್ಡ್‌ಗೆ ಬರಬೇಕಾದ ಅನುದಾನ ಬಗ್ಗೆ ಪ್ರಶ್ನಿಸುವ ಸದಸ್ಯರು ಕಟ್ಟಡದ ದುಃಸ್ಥಿತಿ ಬಗ್ಗೆ ಒಮ್ಮೆಯೂ ಚಕಾರ ಎತ್ತುತ್ತಿಲ್ಲ. ಇಡೀ ನಗರದ ಕೇಂದ್ರಾಡಳಿತ ಪ್ರದೇಶವೇ ಅವ್ಯವಸ್ಥೆ ಆಗರವಾದರೂ ಕ್ಯಾರೇ ಎನ್ನುವವರಿಲ್ಲ. ನಗರಸಭೆ ಕಟ್ಟಡ ಕಾಮಗಾರಿ ಒಂದು ಹಂತದವರೆಗೆ ಪೂರ್ಣಗೊಂಡಿದ್ದು, ಬಹುತೇಕ ಕಡೆ ಅಂತಿಮ ಸ್ಪರ್ಶ ನೀಡಿಲ್ಲ. ತಮಗೆ ಬೇಕಿರುವ ಕಚೇರಿಗಳಲ್ಲಿ ಮಾತ್ರ ಸುಸಜ್ಜಿತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ವಿಭಾಗಗಳಲ್ಲೇ ಕಾಮಗಾರಿ ಮುಗಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದಾಖಲೆ ಇಡಲು ಸುಸಜ್ಜಿತ ವ್ಯವಸ್ಥೆ ಇಲ್ಲದಂಥ ಪರಿಸ್ಥಿತಿ ನಗರಸಭೆಗೆ ಒದಗಿಸುವುದು ದುರಂತವೇ ಸರಿ.
Related Articles
ಕಟ್ಟಡ ಕಾಮಗಾರಿ ಮುಗಿಯುವುದಿರಲಿ ಈಗಾಗಲೇ ಮುಗಿದ ಕೆಲಸಗಳಿಗೂ ಸರಿಯಾದ ಸುಣ್ಣ-ಬಣ್ಣ ಕಾಣದಿರುವುದು ವಿಪರ್ಯಾಸವೇ ಸರಿ. ಸಿವಿಲ್ ಕೆಲಸ ಬಹುತೇಕ ಅಂತಿಮಗೊಂಡಿದೆ. ಕೊನೆ ಸುತ್ತಿನ ಕಾಮಗಾರಿ ಸುಣ್ಣ ಬಣ್ಣ ಬಳಿದರೆ ಒಂದು ಸುಂದರ ರೂಪವಾದರೂ ಸಿಗುತ್ತದೆ. ಇಲ್ಲಿ ಮಾತ್ರ ಯಥಾ ರೀತಿಯಲ್ಲೇ ಬಳಸಲಾಗುತ್ತಿದೆ. ಕಂಬಗಳಿಗೆ ಕೊನೆ ಸುತ್ತಿನ ಗಿಲಾವ್ ಮಾಡದ ಕಾರಣ ಸಿಮೆಂಟ್ ಕಳಚಿ ಬೀಳುತ್ತಿದೆ. ಮೆಟ್ಟಿಲುಗಳಿಗೆ ತಡೆಗೋಡೆ ಕೂಡ
ನಿರ್ಮಿಸಿಲ್ಲ. ಯಾರಾದರೂ ವಯಸ್ಸಾದವರು ಮೇಲೆ ಏರುವಾಗ ಆಯ ತಪ್ಪಿದರೆ ಅನಾಹುತ ಖಚಿತ ಎನ್ನುವಂತಿದೆ ಸ್ಥಿತಿ.
Advertisement
ನಗರಸಭೆ ಕಟ್ಟಡದಲ್ಲಿ ಇನ್ನೂ ಕೆಲ ಕಾಮಗಾರಿಗಳು ಬಾಕಿ ಉಳಿದಿರುವುದು ನಿಜ. ನಮಗೆ ಬರುವ ತೆರಿಗೆ ಹಣದಲ್ಲಿ ಸಿಬ್ಬಂದಿಗೆ ವೇತನ, ಕಚೇರಿ ನಿರ್ವಹಣೆಗೆ ಬಳಸಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಸಿಗುವ ಅನುದಾನದಲ್ಲಿ ಎಲ್ಲ ಕೆಲಸಗಳನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ. ದಾಖಲೆಗಳ ಸಂಗ್ರಹಕ್ಕೆ ಪ್ರತ್ಯೇಕ ದಾಖಲೆ ಅಭಿಲೇಖಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಎಲ್ಲ ಕಡತಗಳನ್ನು ಅಲ್ಲಿಯೇ ಸಂಗ್ರಹಿಸಲಾಗುವುದು.ಮುನಿಸ್ವಾಮಿ,
ನಗರಸಭೆ ಪೌರಾಯುಕ್ತ, ರಾಯಚೂರು ಸಿದ್ದಯ್ಯಸ್ವಾಮಿ ಕುಕನೂರು