Advertisement
ಮುಂಡ್ಕೂರಿನ ದಕ್ಷಿಣ ಭಾಗದಲ್ಲಿ ಗದ್ದೆಗಳ ನಡುವಿನ ಮೋರಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ನೀರು ತುಂಬಿ ಒಂದು ಭಾಗ ಕುಸಿದು ಸಂಬಂಧಪಟ್ಟ ಇಲಾಖೆ ದುರಸ್ತಿಗೆ ಚಾಲನೆ ನೀಡಿದ್ದರೂ ನಿರಂತರ ಮಳೆ ಕಾಮಗಾರಿಗೆ ತೊಂದರೆ ಉಂಟು ಮಾಡಿದೆ. ಈ ಕುಸಿದ ಮೋರಿಯ ಸುತ್ತಮುತ್ತ ಗದ್ದೆಗಳಿದ್ದು ಮುಖ್ಯ ರಸ್ತೆಯೂ ಇದೇ ಆಗಿರುವುದರಿಂದ ವಾಹನ ಸಂಚಾರದ ದಟ್ಟಣೆಯಿಂದಾಗಿ ಆಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
Related Articles
ಹಿಂದೆ ಈ ಕಾಲಕ್ಕಿಂತಲೂ ಹೆಚ್ಚು ಮಳೆ ಬಂದು ನೆರೆ ಬಂದಿದ್ದರೂ ಈ ರೀತಿಯಲ್ಲಿ ಕುಸಿತ ಉಂಟಾಗುತ್ತಿರಲಿಲ್ಲ. ಇಲ್ಲಿಯ ಕಾಮಗಾರಿಯ ಬಗ್ಗೆ ಅನುಮಾನ ಮೂಡುತ್ತಿದೆ.
– ಸತೀಶ್, ಮುಂಡ್ಕೂರು
Advertisement
ಕೂಡಲೇ ಸ್ಪಂದಿಸಿಮುಂಡ್ಕೂರಿನ ಮುಖ್ಯ ರಸ್ತೆಯಲ್ಲಿ ಈ ಅವಳಿ ಮೋರಿಗಳ ಕುಸಿತದ ಬಗ್ಗೆ ಇಲಾಖೆ ಕೂಡಲೇ ಸ್ಪಂದಿಸಬೇಕಾಗಿದೆ. ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ನಡೆದುಕೊಂಡು ಹೋಗುತ್ತಿದ್ದು ಅಪಾಯ ಎದುರಾಗಿದೆ.
– ಶೇಖರ ಶೆಟ್ಟಿ ಮಾಣಿಬೆಟ್ಟು, ಮುಂಡ್ಕೂರು