Advertisement

ಉತ್ತರಾಧಿಕಾರಿಯನ್ನು ಬೆಳೆಸಿ ಜನರ ಮುಂದಿರಿಸುತ್ತೇನೆ…

10:20 PM Mar 25, 2017 | Team Udayavani |

ದೀರ್ಘ‌ಕಾಲದ ವಿರಾಮದ ಬಳಿಕ ನಿರೀಕ್ಷಿಸಿದಂತೆಯೇ ಕ್ಯಾ. ಅಮರಿಂದರ್‌ ಸಿಂಗ್‌ ಪಂಜಾಬನ್ನು ಕಾಂಗ್ರೆಸ್‌ಗೆ ಗೆದ್ದುಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಇದು ತಮ್ಮ ಕೊನೆಯ ಆಡಳಿತ ಎಂದು ಈಗಾಗಲೇ ಹೇಳಿಕೊಂಡಿರುವ ಕ್ಯಾ. ಸಿಂಗ್‌ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಉತ್ತರಾಧಿಕಾರಿಯನ್ನು ಹೆಸರಿಸುವ ಸೂಚನೆಯನ್ನೂ ನೀಡಿದ್ದಾರೆ. ಹಿಂದೂಸ್ಥಾನ್‌ ಟೈಮ್ಸ್‌ಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗವಿದು.

Advertisement

ಪಂಜಾಬ್‌ನ ಆರ್ಥಿಕ ಸ್ಥಿತಿ ಹೇಗಿದೆ? ರೈತರ ಸಾಲಮನ್ನಾ ಭರವಸೆಯ ಈಡೇರಿಕೆ ಸಾಧ್ಯವೆ?
ರಾಜ್ಯದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದೆ. ಬೊಕ್ಕಸಕ್ಕೆ ಆದಾಯ ಹರಿದುಬರುತ್ತಿಲ್ಲ. ವಿತ್ತೀಯ ಸ್ಥಿತಿಗತಿಯನ್ನು ಹಳಿಗೆ ತರಲು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಕೃಷಿಕರ ಸಾಲಮನ್ನಾಕ್ಕೆ 30 ಸಾವಿರ ಕೋಟಿ ವೆಚ್ಚವಾಗಲಿದೆ. ಬೆಳೆ ಬೆಳೆಯಲು, ರಸಗೊಬ್ಬರ ಕೊಳ್ಳಲು ಇತ್ಯಾದಿಗೆ ಪಡೆದ ಸಾಲವನ್ನು ಮಾತ್ರ ಮನ್ನಾ ಮಾಡುತ್ತೇವೆ. ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಶ್ವೇತಪತ್ರ ಒದಗಿಸಬೇಕೆಂದು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ.   

ಕೇಂದ್ರದಿಂದ ನೆರವು ಅಗತ್ಯವಾಗಬಹುದು. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್‌ ಜೇಟ್ಲಿ ಜತೆಗೆ ಮಾತನಾಡಿದ್ದೀರಾ?
ರಾಷ್ಟ್ರಪತಿ, ಪ್ರಧಾನಿ, ವಿತ್ತಸಚಿವರ ಜತೆಗೆ ಈಗ ನಡೆಸಿರುವುದು ಔಪಚಾರಿಕ ಭೇಟಿ ಮಾತ್ರ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪ್ರಧಾನಿ ವಾಜಪೇಯಿ ಜತೆಗೆ ಹಾರ್ದಿಕ ಸಂಬಂಧ ಇರಿಸಿಕೊಂಡಿದ್ದೆ. ಈಗಲೂ ಕೇಂದ್ರದಿಂದ ಉತ್ತಮ ಸಹಕಾರ ಸಿಗುವ ವಿಶ್ವಾಸವಿದೆ.      

ಪ್ರಧಾನಿ ಮೋದಿ ಕೊ ಆಪರೇಟಿವ್‌ ಫೆಡರಲಿಸಂ ಬಗ್ಗೆ ಮಾತನಾಡಿದ್ದಾರೆ. ಇದು ಪಂಜಾಬ್‌ನಿಂದ ಆರಂಭವಾಗಬಹುದೇ?
ಖಂಡಿತ. ಆದರೆ, ಉ.ಪ್ರದೇಶಕ್ಕೆ ರೈತರ ಸಾಲ ಮನ್ನಾ ಕೊಡುಧಿಗೆಯ ವಿಚಾರದ ಬಗ್ಗೆ ಹೇಳಬೇಕೆಂದರೆ, ರಾಹುಲ್‌ ಗಾಂಧಿ ನೇತೃತ್ವದಡಿ ಪ್ರಧಾನಿಯವರನ್ನು ಸಂಪರ್ಕಿಸಿದಾಗ “ನೋಡೋಣ’ ಎಂದಷ್ಟೇ ಹೇಳಿದ್ದರು. ಈಗವರು ಉತ್ತರಪ್ರದೇಶಕ್ಕೆ ಸಾಲ ಮನ್ನಾ ಘೋಷಿಸಿದ್ದಾರೆ, ಇತರ ರಾಜ್ಯಧಿಗಳಿಗೂ ಅದನ್ನು ವಿಸ್ತರಿಸಬೇಕು ಎಂದು ಬಯಸುತ್ತೇನೆ.  

ಮಾದಕದ್ರವ್ಯಗಳ ವಿರುದ್ಧ ಸಮರಕ್ಕೆ ನಿಂತಿದ್ದೀರಿ. ಇದಕ್ಕಾಗಿ ನೀವು ಆರಿಸಿರುವ ಐಪಿಎಸ್‌ ಅಧಿಕಾರಿ ಹರ್‌ಪ್ರೀತ್‌ ಸಿಧು ಅವರಿಗೆ ಈ ವಿಚಾರದಲ್ಲಿ ಮುಕ್ತ ಅಧಿಕಾರವಿದೆಯೇ?   
ಅಧಿಕಾರಕ್ಕೆ ಬಂದ ನಾಲ್ಕು ವಾರಗಳಲ್ಲಿ ಮಾದಕದ್ರವ್ಯ ಜಾಲಧಿವನ್ನು ಮಟ್ಟ ಹಾಕುತ್ತೇನೆ ಎಂದಿದ್ದೆ. ಹರ್‌ಪ್ರೀತ್‌ ಸಿಧು ನೇತೃತ್ವದಲ್ಲಿ ವಿಶೇಷ ದಳವನ್ನು ರಚಿಸಲಾಗಿದೆ. ಅವರಿಗೆ ಸರಕಾರದ ಆದೇಶ ಸರಳವಾದದ್ದು, “ಮಾದಕದ್ರವ್ಯ ಜಾಲಧಿವನ್ನು ಬಗ್ಗುಬಡಿಯಿರಿ’. ನಾಲ್ಕು ವಾರಗಳಲ್ಲಿ ಇದು ಸಾಧನೆಯಾಗಬೇಕು ಎಂದು ನಾನು ಬಯಸುತ್ತೇನೆ. ಈ ಜಾಲದಲ್ಲಿ ಯಾರೇ ಒಳಗೊಂಡಿದ್ದರೂ ನಾವು ಬಿಡುವುದಿಲ್ಲ.  

Advertisement

ವ್ಯಸನಿಗಳ ಪುನರ್ವಸತಿಗೆ ನಿಮ್ಮ ನೀತಿಯೇನು?      
ವಿವಿಧ ಮಾದಕದ್ರವ್ಯಗಳ ಸರಬರಾಜು ಜಾಲವನ್ನು ತಡೆಧಿಯುವ ವಿಚಾರದಲ್ಲಿ ಎಲ್ಲ ರಾಜ್ಯಗಳೂ  ಒಂದೇ ಕಾರ್ಯಸೂಚಿ ಇರಿಸಿಕೊಳ್ಳಬೇಕು. ಪಂಜಾಬ್‌ನ ಎಲ್ಲ ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳಿವೆ. ಈ ಕೇಂದ್ರಗಳನ್ನು ನಡೆಸಲು ಖಾಸಗಿ ಸಹಭಾಗಿತ್ವ ಪಡೆಯುವ ಪ್ರಸ್ತಾವವೂ ಇದೆ.  

ಮುಖ್ಯಮಂತ್ರಿಯಾಗಿ ಇದು ನಿಮ್ಮ ಕೊನೆಯ ಆಡಳಿತ ಎಂದಿದ್ದೀರಿ. ಈ ನಿಮ್ಮ ಅಧಿಕಾರಾವಧಿಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತೀರಾ?  
ನನ್ನ ಜತೆಗಿದ್ದು ಕೆಲಸ ಮಾಡುತ್ತಾ ಮುಂದಿನ ಚುನಾವಣೆಯ ವೇಳೆಗೆ ಸರಕಾರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಾವಾಗಿ ಯಾರಾದರೂ ಹೊತ್ತುಕೊಂಡರೆ ಅದಕ್ಕೆ ನನ್ನ ಸ್ವಾಗತಧಿವಿದೆ. ಮುಂದಿನ ಮುಖ್ಯಮಂತ್ರಿಯನ್ನು ಆರಿಸಲು ಇದು ಒಳ್ಳೆಯ ದಾರಿ.

ರಾಷ್ಟ್ರ ರಾಜಕಾರಣದ ವಿಚಾರಕ್ಕೆ ಬಂದರೆ, ಸದ್ಯದಲ್ಲಿಯೇ ಕಾಂಗ್ರೆಸ್‌ನ ಪುನಾರಚನೆ ಅಥವಾ ಪುನಶ್ಚೇತನ ನಡೆಯಬಹುದೇ? 
ಒಂದು ವಿಚಾರವನ್ನು ಹೇಳುತ್ತೇನೆ – ಭಾರತದಲ್ಲಿ ಸದ್ಯ 40 ವರ್ಷದೊಳಗಿನ ಜನಸಂಖ್ಯೆ ಶೇ.70ರಷ್ಟಿದೆ. ಇವರ ಮನೋಧಿಭಾವ, ಅಭಿಪ್ರಾಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದು ಸೋಷಿಯಲ್‌ ಮೀಡಿಯಾಗಳು. ಸಾಮಾಧಿಜಿಕ ಮಾಧ್ಯಮಗಳ ಮೂಲಕ ಜನರನ್ನು ಮುಟ್ಟುವ ಪ್ರಯತ್ನವನ್ನು ನಾವೀಗ ಮಾಡಬೇಕಾಗಿದೆ. ಆಮ್‌ ಆದ್ಮಿ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗ ಪ್ರಬಲವಾಗಿದೆ. ಅಕಾಲಿಗಳು ಈ ಕ್ಷೇತ್ರದಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು, ನಮ್ಮದು ತೃತೀಯ ಸ್ಥಾನವಾಗಿತ್ತು. ರಾಹುಲ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಧಿಯುತ್ತಿರುವ ಅಣಕು ತೀರಾ ಕೆಟ್ಟದಾದದ್ದು. ನಾನು ಅವರ ಜತೆಗೆ ಕೆಲಸ ಮಾಡಿದವನು, ಅವರೊಬ್ಬ ಮುಕ್ತ ಮನಸ್ಸಿನ ನಾಯಕ. ನಿಮ್ಮ ನಾಯಕನಿಂದ ಇದಕ್ಕಿಂತ ಹೆಚ್ಚಿನದೇನನ್ನು ನಿರೀಕ್ಷಿಸುತ್ತೀರಿ? ಸಾಮಾಜಿಕ ಮಾಧ್ಯಮದಲ್ಲಿ ನಾವು ಇನ್ನಷ್ಟು ಬಲವರ್ಧನೆಗೊಂಡರೆ ಯುವ ಸಮುದಾಯವನ್ನು ಹೆಚ್ಚು ತಲುಪಬಹುದು. 

ರಾಜ್ಯಗಳಲ್ಲಿ ಸಾಮೂಹಿಕ ನಾಯಕತ್ವ ಇರಬೇಕಲ್ಲವೇ? ಕಾಂಗ್ರೆಸ್‌ ಪ್ರಾದೇಶಿಕ ನಾಯಕರ ಕೊರತೆಯನ್ನು ಎದುರಿಸುತ್ತಿದೆಯೇ?
ಯಾರು ಪಕ್ಷವನ್ನು ಮುನ್ನಡೆಸಬೇಕು ಮತ್ತು ರಾಜ್ಯಗಳಲ್ಲಿ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂಬುದನ್ನು ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ನಿರ್ಧರಿಸಬೇಕೆಂಬುದು ನನ್ನ ಅಭಿಪ್ರಾಯ. ನಮ್ಮ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಜನರಿಗೆ ತಿಳಿದಿರಬೇಕು. ನಾಯಕರು ಬೆಳೆಯಲು ಪಕ್ಷದಲ್ಲಿ ಅವಕಾಶ ಇರಬೇಕು. ಕಾಂಗ್ರೆಸ್‌ನಲ್ಲಿ ಪ್ರಾದೇಶಿಕ ನಾಯಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.   

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಗೆಲುವಿನ ಶ್ರೇಯಸ್ಸನ್ನು ಪ್ರಶಾಂತ್‌ ಕಿಶೋರ್‌ಗೆ ನೀಡಿದ್ದೀರಿ. ಉತ್ತರಪ್ರದೇಶ ಮತ್ತು ಉತ್ತರಾಖಂಡಗಳ ಸೋಲು?       
ಪ್ರಶಾಂತ್‌ ಪಂಜಾಬ್‌ನಲ್ಲಿ 1 ವರ್ಷ ನಮ್ಮೊಂದಿಗಿದ್ದು 1,700 ಮಂದಿಯ ತಂಡವನ್ನು ಕಟ್ಟಿದ್ದರು. ಅವರೆಲ್ಲ ಚುನಾವಣಾ ಕಣದಲ್ಲಿ ಕೆಲಸ ಮಾಡಿದವರೇ. ಉ.ಪ್ರದೇಶ, ಉತ್ತರಾ ಖಂಡಗಳಲ್ಲಿ ಅವರಿಗೆ ಒಂದು ತಿಂಗಳ ಸಮಯ ಮಾತ್ರ ಇತ್ತು. ಪ್ರಶಾಂತ್‌ರನ್ನು ಇತರ ರಾಜ್ಯಗಳ ಚುನಾವಣೆಗಳಿಗೆ ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಹೈಕಮಾಂಡ್‌ ನಿರ್ಧರಿಸಬೇಕು. ಸಾಕಷ್ಟು ಕಾಲಾವಕಾಶ ಒದಗಿಸಿದರೆ ಅವರು ಇತರಡೆಯೂ ಒಳ್ಳೆಯ ಫ‌ಲಿತಾಂಶ ಒದಗಿಸಬಲ್ಲರು.   

ಮುಂದಿನ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿಯೊಂದನ್ನು ರೂಪಿಸಬೇಕು ಎಂದು ಭಾವಿಸುತ್ತೀರಾ?
ಈ ಬಗ್ಗೆ ನನ್ನದೇ ಆದ ಅಭಿಪ್ರಾಯಗಳಿವೆ, ಕಾಂಗ್ರೆಸ್‌ನ ಮುಂದಿನ ಕಾರ್ಯಕಾರಿಣಿಯಲ್ಲಿ ಅದರ ಬಗ್ಗೆ ಪ್ರಸ್ತಾವಿಸುತ್ತೇನೆ. ಅದಕ್ಕೆ ಮುನ್ನ ರಾಹುಲ್‌ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿಯಬೇಕಾಗಿದೆ ಮತ್ತು ಪ್ರಿಯಾಂಕಾ ಪಕ್ಷದ ಸಂಘಟನಾ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ.

ಕ್ಯಾ. ಅಮರಿಂದರ್‌ ಸಿಂಗ್‌ ಪಂಜಾಬ್‌ ಮುಖ್ಯಮಂತ್ರಿ
 

Advertisement

Udayavani is now on Telegram. Click here to join our channel and stay updated with the latest news.

Next